ಚಿಕ್ಕಮಗಳೂರು: ನಗರದಲ್ಲಿ ರವಿವಾರ ಫೆಲೆಸ್ತೀನ್ ಧ್ವಜ ಹಿಡಿದು ಎರಡು ಬೈಕ್ ಗಳಲ್ಲಿ ಓಡಾಡಿದ ಆರೋಪದಲ್ಲಿ ಆರು ಮಂದಿ ಅಪ್ರಾಪ್ತ ವಯಸ್ಸಿನ ಬಾಲಕರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿರುವುದಾಗಿ ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.
ರವಿವಾರ ಕೆಲ ಯುವಕರು ಫೆಲೆಸ್ತೀನ್ ದ್ವಜ ಹಿಡಿದು ನಗರದ ಕೆಲವೆಡೆ ಸಂಚರಿಸಿದ್ದರು. ಈ ವೇಳೆ ‘ಫ್ರೀ ಫೆಲೆಸ್ತೀನ್’ ಎಂಬ ಘೋಷಣೆ ಕೂಗಿದ್ದು, ಇದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವೀಡಿಯೋ ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರು ಮಂದಿ ಬಾಲಕರನ್ನು ಹಾಗೂ ಕೃತ್ಯಕ್ಕೆ ಬಳಸಿದ್ದೆನ್ನಲಾದ ಎರಡು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಫೆಲೆಸ್ತೀನ್ ಧ್ವಜ ಹಿಡಿದು ರವಿವಾರ ಮಧ್ಯಾಹ್ನ ಬೈಕಿನಲ್ಲಿ ಕೆಲವರು ಸಂಚರಿಸುತ್ತಿದ್ದ ವೀಡಿಯೊ ಹರಿದಾಡುತ್ತಿದ್ದಂತೆ ಬಜರಂಗದಳ ಮತ್ತು ಬಿಜೆಪಿ ಕಾರ್ಯಕರ್ತರು ನಗರ ಠಾಣೆ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿದ್ದರು.