Home ಬೆಂಗಳೂರು ನಗರ ಸ್ಮಾರ್ಟ್ ಮಲ್ಲೇಶ್ವರಂ ನನ್ನ ಗುರಿ; ಕಾಮಗಾರಿ ಮುಗಿದ ನಂತರ ಡಾಂಬರು: ಅಶ್ವತ್ಥನಾರಾಯಣ

ಸ್ಮಾರ್ಟ್ ಮಲ್ಲೇಶ್ವರಂ ನನ್ನ ಗುರಿ; ಕಾಮಗಾರಿ ಮುಗಿದ ನಂತರ ಡಾಂಬರು: ಅಶ್ವತ್ಥನಾರಾಯಣ

41
0
Smart Malleswaram is my goal says Higher Education Minister Dr CN Ashwathnarayan
Advertisement
bengaluru

ಬೆಂಗಳೂರು:

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಳಚರಂಡಿ, ನೀರಿನ ಕೊಳವೆ, ಮ್ಯಾನ್ ಹೋಲ್, ಓ.ಎಫ್.ಸಿ. ಡಕ್ ನಿರ್ಮಾಣ ಮುಂತಾದ ಕಾಮಗಾರಿಗಳನ್ನು ಮುಂದಿನ 30 ವರ್ಷಗಳ ಅಗತ್ಯವನ್ನು ಗಮನದಲ್ಲಿ ಇಟ್ಟುಕೊಂಡು, ಶಾಶ್ವತ ಕಾಮಗಾರಿಗಳನ್ನಾಗಿ ಮಾಡಲಾಗುತ್ತಿದೆ. ಇವುಗಳನ್ನೆಲ್ಲ ಇನ್ನು ಎರಡು-ಮೂರು ತಿಂಗಳುಗಳಲ್ಲಿ ಮುಗಿಸಲಾಗುವುದು ಎಂದು ಕ್ಷೇತದ ಶಾಸಕರೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

Smart Malleswaram is my goal says Higher Education Minister Dr CN Ashwathnarayan

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಕ್ಷೇತ್ರವನ್ನು ಸ್ಮಾರ್ಟ್ ಮಲ್ಲೇಶ್ವರಂ ಆಗಿ ಅಭಿವೃದ್ಧಿ ಪಡಿಸುವುದೇ ನಮ್ಮ ಆದ್ಯತೆಯಾಗಿದೆ. ಅಭಿವೃದ್ಧಿ ಕಾಮಗಾರಿಗಳ ನೆಪದಲ್ಲಿ ರಸ್ತೆ, ಒಳಚರಂಡಿ, ಕೊಳವೆ ಮಾರ್ಗ, ವಿದ್ಯುತ್ ಕಂಬ ಇತ್ಯಾದಿಗಳನ್ನು ಪದೇಪದೇ ಅಗೆದು, ಕಿತ್ತು ಮಾಡಬಾರದು ಎನ್ನುವುದು ತಮ್ಮ ಆಶಯವಾಗಿದೆ. ಇದರಿಂದಾಗಿ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತಾತ್ಕಾಲಿಕ ತೊಂದರೆಗೆ ಬೇಸರವಿದೆ. ಆದರೆ, ಇನ್ನೆರಡು ತಿಂಗಳಲ್ಲಿ ಇದೆಲ್ಲ ಪರಿಹಾರವಾಗಲಿದೆ’ ಎಂದರು.

ಮಲ್ಲೇಶ್ವರಂ ಬೆಂಗಳೂರು ನಗರದ ಅತ್ಯಂತ ಹಳೆಯ ಬಡಾವಣೆಗಳಲ್ಲೊಂದಾಗಿದೆ. ಹೀಗಾಗಿ ಇಲ್ಲಿ ಒಳಚರಂಡಿ ಮಾರ್ಗ, ನೀರಿನ ಕೊಳವೆ, ಮ್ಯಾನ್ ಹೋಲುಗಳು ಎಲ್ಲವೂ ಶಿಥಿಲವಾಗಿ ಪದೇಪದೇ ತೊಂದರೆಯಾಗುತ್ತಿತ್ತು. ಇವುಗಳಿಗೆ ಒಂದು ದೀರ್ಘಾವಧಿ ಪರಿಹಾರ ರೂಪಿಸಬೇಕು ಎನ್ನುವುದೇ ನಮ್ಮ ಗುರಿಯಾಗಿದೆ. ಇದಕ್ಕೆ ತಕ್ಕಂತೆ ಈಗ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇವುಗಳಿಗೆ ಹಣಕಾಸಿನ ಕೊರತೆಯೇನೂ ಇಲ್ಲ ಎಂದು ಅವರು ವಿವರಿಸಿದರು.

bengaluru bengaluru

ಈಗ ಕಾಂಕ್ರೀಟ್ ಮ್ಯಾನ್ ಹೋಲುಗಳನ್ನು ಮೊದಲೇ ಸಿದ್ಧಪಡಿಸಿ, ವೈಜ್ಞಾನಿಕವಾಗಿ ಅಳವಡಿಸಲಾಗುತ್ತಿದೆ. ಹಾಗೆಯೇ, ಒಳಚರಂಡಿ ಕೊಳವೆಗಳಲ್ಲಿ ತ್ಯಾಜ್ಯವು ಸರಾಗವಾಗಿ ಹರಿದು ಹೋಗುವಂತೆ ಕ್ರಮ ಕೈಗೊಳ್ಳಲಾಗಿದೆ. ಓ.ಎಫ್.ಸಿ. ಕೇಬಲ್ಲುಗಳನ್ನು ಹಾಕುವಾಗ ಮುಂದೆಂದೂ ತೊಂದರೆ ಬರದಂತೆ ಡಕ್ಟ್ ಗಳನ್ನು ಅಳವಡಿಸಲಾಗುತ್ತಿದೆ. ಇವು ಸ್ಮಾರ್ಟ್ ಮಲ್ಲೇಶ್ವರಂ ರೂಪಿಸಲು ಪೂರಕವಾಗಿವೆ ಎಂದು ಅವರು ನುಡಿದರು.

ಪದೇ ಪದೇರಸ್ತೆ ಅಗೆಯುವುದನ್ನು ತಪ್ಪಿಸುವ ಸಲುವಾಗಿ ಕಾಮಗಾರಿ ಮುಗಿದ ತಕ್ಷಣ ಡಾಂಬರು ಹಾಕಲಾಗುವುದು. ಇದಕ್ಕೆ ಹಣ ಕೂಡ ಬಿಡುಗಡೆ ಆಗಿದೆ. ಅಲ್ಲಿಯವರೆಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಕೋರಿದ್ದಾರೆ.


bengaluru

LEAVE A REPLY

Please enter your comment!
Please enter your name here