Home ಮಂಗಳೂರು ಮಂಗಳೂರಿನಲ್ಲಿ ಐವನ್ ಡಿಸೋಜ ಮನೆಗೆ‌ ಕಲ್ಲು ತೂರಾಟ

ಮಂಗಳೂರಿನಲ್ಲಿ ಐವನ್ ಡಿಸೋಜ ಮನೆಗೆ‌ ಕಲ್ಲು ತೂರಾಟ

20
0
Stone pelting at Ivan D'souza's house in Mangalore

ಮಂಗಳೂರು: ರಾಜ್ಯಪಾಲರ ವಿರುದ್ಧ ಹೇಳಿಕೆ‌ ನೀಡಿದ್ದಾರೆ ಎನ್ನಲಾದ ವಿಧಾನಪರಿಷತ್ ಶಾಸಕ ಐವನ್ ಡಿಸೋಜಾರ ಮನೆ ಮೇಲೆ ಕಲ್ಲು ತೂರಾಟ ನಡೆದ ಘಟನೆ ಬುಧವಾರ ರಾತ್ರಿ ನಡೆದಿದೆ.

ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ನಗರದ ವೆಲೆನ್ಸಿಯಾದಲ್ಲಿ ಐವಾನ್ ಡಿಸೋಜರ ಮನೆಯಿದ್ದು, ರಾತ್ರಿ ದುಷ್ಕರ್ಮಿಗಳು ಕಲ್ಲೆಸೆದು ಪರಾರಿಯಾಗಿದ್ದಾರೆ.

ಐವನ್‌ರ ಮನೆಯ ಕಿಟಕಿಯ ಫ್ರೇಮ್‌ಗೆ ಕಲ್ಲು ಬಿದ್ದಿದ್ದು, ಯಾವುದೇ ಹಾನಿಯಾಗಿಲ್ಲ ಎನ್ನಲಾಗಿದೆ. ಸ್ಥಳಕ್ಕೆ ಪಾಂಡೇಶ್ವರ ಠಾಣಾ ಪೊಲೀಸರು ಭೇಟಿ ನೀಡಿದ್ದು, ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಲಾಗಿದೆ.

LEAVE A REPLY

Please enter your comment!
Please enter your name here