Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸುವ ಕುರಿತು ಕೇಂದ್ರ ಸರ್ಕಾರಕ್ಕೆ ಒತ್ತಾಯ: ಮುಖ್ಯಮಂತ್ರಿ ಸಿದ್ದರಾಮಯ್ಯ
  • ವಿಜಯಪುರ
  • ಕರ್ನಾಟಕ

ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸುವ ಕುರಿತು ಕೇಂದ್ರ ಸರ್ಕಾರಕ್ಕೆ ಒತ್ತಾಯ: ಮುಖ್ಯಮಂತ್ರಿ ಸಿದ್ದರಾಮಯ್ಯ

The Bengaluru Live August 21, 2024 9:30 PM 1 minute read
📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಆಲಮಟ್ಟಿ (ವಿಜಯಪುರ), ಆಗಸ್ಟ್‌ 21: ಕೃಷ್ಣಾ ನ್ಯಾಯಾಧೀಕರಣ-2ರ ತೀರ್ಪಿನನ್ವಯ ರಾಜ್ಯಕ್ಕೆ 130 ಟಿಎಂಸಿ ನೀರು ಹೆಚ್ಚುವರಿಯಾಗಿ ದೊರೆಯಲಿದ್ದು, ಇದಕ್ಕಾಗಿ ಆಲಮಟ್ಟಿ ಜಲಾಶಯದ ಎತ್ತರವನ್ನು ಹೆಚ್ಚಿಸುವ ಕುರಿತು ಅಧಿಸೂಚನೆ ಹೊರಡಿಸಲು ಈಗಾಗಲೇ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಅವರು ಬುಧವಾರ ಆಲಮಟ್ಟಿ ಜಲಾಶಯದ ಬಳಿ ಕೃಷ್ಣೆಯ ಜಲಧಿಗೆ ಗಂಗಾ ಪೂಜೆ ನೆರವೇರಿಸಿದ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

ಆಲಮಟ್ಟಿ ಜಲಾಶಯದ ಈಗಿನ ಎತ್ತರ 519.60 ಮೀಟರ್ ನಿಂದ 524.25 ಮೀಟರ್ ಎತ್ತರಕ್ಕೆ ಹೆಚ್ಚಿಸಬೇಕಾಗಿದೆ. ಆದರೆ ಇದಕ್ಕೆ ಕೇಂದ್ರಸರ್ಕಾರದ ನೋಟಿಫಿಕೇಶನ್ ಆಗದಿರುವುದರಿಂದ ಎತ್ತರವನ್ನು ಹೆಚ್ಚಿಸಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಕೇಂದ್ರಸರ್ಕಾರವು , ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಹಾಗೂ ಕರ್ನಾಟಕ ರಾಜ್ಯಗಳೊಂದಿಗೆ ಚರ್ಚೆ ನಡೆಸಿ ಇತ್ಯರ್ಥ ಮಾಡಿಸುವುದು ಅಗತ್ಯವಿದೆ. ಕೃಷ್ಣಾ ನ್ಯಾಯಾಧೀಕರಣ-2ರ ಅಂತಿಮ ತೀರ್ಪಿಗೆ ಕೇಂದ್ರ ಸರ್ಕಾರದಿಂದ ಗೆಜೆಟ್ ಅಧಿಸೂಚನೆ ಹೊರಡಿಸಲು ನಾನು ಮತ್ತು ಉಪಮುಖ್ಯಮಂತ್ರಿ ಅವರು ಈಗಾಗಲೇ ಪ್ರಧಾನಮಂತ್ರಿ ಅವರನ್ನು ಹಾಗೂ ಸಂಬಂಧಪಟ್ಟ ಕೇಂದ್ರ ಸಚಿವರನ್ನು ಭೇಟಿ ಮಾಡಿ ಒತ್ತಾಯಿಸಿದ್ದೇವೆ ಎಂದರು.

ಇದಕ್ಕೆ ಸಂಬಂಧಿಸಿದಂತೆ ನಾವು ಪುನರ್‌ ವಸತಿ ಮತ್ತು ಪುನರ್‌ ನಿರ್ಮಾಣಕ್ಕಾಗಿ ಸಿದ್ದರಿದ್ದೇವೆ. ನಮ್ಮ ಹಿಂದಿನ ಅವಧಿಯಲ್ಲಿ ಈ ಯೋಜನೆಯ ಅನುಷ್ಠಾನಕ್ಕೆ 51,148 ಕೋಟಿ ರೂ.ಗಳ ಅಂದಾಜಿಗೆ ಅನುಮೋದನೆ ನೀಡಲಾಗಿತ್ತು. ಈಗ ಈ ಮೊತ್ತ 80 ಸಾವಿರ ಕೋಟಿ ರೂ.ಗಳಷ್ಟಾಗಬಹುದು ಎಂಬ ಅಂದಾಜಿದೆ. ಪ್ರತಿ ವರ್ಷ ನಮ್ಮ ಸರ್ಕಾರ 20,000 ಕೋಟಿ ಖರ್ಚು ಮಾಡುವ ಮೂಲಕ, 5 ವರ್ಷಕ್ಕೆ ಅಂದಾಜು 1 ಲಕ್ಷ ಕೋಟಿ ರೂ.ಗಳನ್ನು ವೆಚ್ಚ ಮಾಡಬೇಕೆಂಬುದು ನಮ್ಮ ಸರ್ಕಾರದ ಉದ್ದೇಶಿಸಲಾಗಿದೆ. ಆದರೆ ಇದಕ್ಕೆ ಮೊದಲು ಕೇಂದ್ರ ಸರ್ಕಾರದ ನೋಟಿಫಿಕೇಷನ್ ಆಗಬೇಕಿರುವುದರಿಂದ, ಪ್ರಧಾನಮಂತ್ರಿಗಳ ಮಧ್ಯಸ್ಥಿಕೆಯಲ್ಲಿ ನಿರ್ಣಯವಾದರೆ, ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸುವ ಯೋಜನೆಗೆ ನಾವು ಚಾಲನೆ ನೀಡಬಹುದು.

ಕೃಷ್ಣಾ ನ್ಯಾಯಾಧೀಕರಣ-1ರ ತೀರ್ಪಿನನ್ವಯ ಯುಕೆಪಿ 1 ಹಾಗೂ2ರಲ್ಲಿ 173 ಟಿಎಂಸಿ ನೀರಿನ ಹಂಚಿಕೆಯಡಿ 16.47 ಲಕ್ಷ ಎಕರೆ ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಒದಗಿಸಲಾಗುತ್ತಿದೆ. ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಳದಿಂದ ಯೋಜನೆಯಿಂದ ಒಟ್ಟು 5.94 ಲಕ್ಷ ಹೆಕ್ಟೇರ್ (14.68 ಲಕ್ಷ ಎಕರೆ) ಅಚ್ಚುಕಟ್ಟು ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಬಹುದಾಗಿದೆ. ಬಾಗಲಕೋಟೆ, ಬಿಜಾಪುರ, ಯಲಬುರ್ಗಾ, ಕೊಪ್ಪಳರಾಯಚೂರು, ಬಳ್ಳಾರಿ, ಗುಲ್ಬರ್ಗ, ಯಾದಗಿರಿ ಇವರ ಜನಪ್ರತಿನಿಧಿಗಳೊಂದಿಗೆ ಬೆಂಗಳೂರಿನಲ್ಲಿ ಸಭೆ ನಡೆಸಿ, ಪುನರ್ವಸತಿ, ಪುನರ್ನಿರ್ಮಾಣ ಕಾರ್ಯದ ಬಗ್ಗೆ ಚರ್ಚೆ ಮಾಡಲಿದ್ದೇವೆ.

ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯದಲ್ಲಿ ಹೂಳು ತುಂಬಿರುವುದರಿಂದ, ಇಲ್ಲಿಯೂ ಸಮಾನಾಂತರ ಜಲಾಶಯ ನಿರ್ಮಾಣದ ಪ್ರಸ್ತಾಪ ತಮ್ಮ ಮುಂದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಜಲಾಶಯದಲ್ಲಿ ಹೂಳು ತುಂಬಿರುವ ಪ್ರಮಾಣ, ನೀರಿನ ಸಾಮರ್ಥ್ಯ, ಇದರಿಂದ ರೈತರಿಗಾಗಬಹುದಾದ ತೊಂದರೆ ಬಗ್ಗೆ ಚರ್ಚೆ ನಡೆಸುತ್ತೇವೆ.

ರೈತರ ಅನುಕೂಲಕ್ಕಾಗಿ ಬಸವ ಸಾಗರ ಸೇರಿದಂತೆ ಇತರ ಜಲಾಶಯಗಳಿಗೆ ನೀರು ಮರುಹಂಚಿಕೆ ಬಗ್ಗೆ ಪ್ರತಿಕ್ರಿಯೆ ನೀಡಿ, ಯೋಜನೆಯಲ್ಲಿ ಸ್ಕೀಂ ಎ ಮತ್ತು ಬಿ ಎರಡು ವಿಧವಿದ್ದು, ಯೋಜನಾವಾರು 3ನೇ ಹಂತದಲ್ಲಿ ಹಂಚಿಕೆಯಾಗಿದೆ. ಕೃಷ್ಣಾ ನ್ಯಾಯಾಧೀಕರಣ-1ರ ತೀರ್ಪಿನನ್ವಯ ಯುಕೆಪಿ 1 ಹಾಗೂ2ರಲ್ಲಿ 173 ಟಿಎಂಸಿ ನೀರಿನ ಹಂಚಿಕೆಯಾಗಿದೆ. ಈ ನೀರನ್ನು ಸಂಬಂಧಪಟ್ಟ ಜಿಲ್ಲೆಗೆ ನೀರು ಮರುಹಂಚಿಕೆ ಮಾಡುವ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ತುಂಗಭದ್ರಾ ಜಲಾಶಯದಲ್ಲಿ 19ನೇ ಕ್ರಸ್ಟ್‌ಗೇಟ್ ಅಳವಡಿಕೆಯನ್ನು ಮೂರ್ನಾಲ್ಕು ದಿನಗಳ ಒಳಗಾಗಿ ಪೂರ್ಣಗೊಳಿಸಲಾಗಿದೆ. ದುರಸ್ತಿಯ ಅವಧಿಯಲ್ಲಿ 35 ಟಿಎಂಸಿ ನೀರು ಮಾತ್ರ ಪೋಲಾಗಿದೆ. ಇಂದಿಗೂ ಜಲಾಶಯದಲ್ಲಿ ಸುಮಾರು 78 ಟಿಎಂಸಿ ನೀರಿದೆ. ಇನ್ನೂ 20 ಟಿಎಂಸಿ ನೀರು ಹರಿದುಬಂದರೆ, ಜಲಾಶಯ ಶೇ.95 ರಷ್ಟು ಭರ್ತಿಯಾಗುತ್ತದೆ. ಈಗಾಗಲೇ ಕರ್ನಾಟಕ, ತೆಲಂಗಾಣ, ಆಂಧ್ರದ ರೈತರ ಮೊದಲ ಬೆಳೆಗೆ ನೀರು ಬಿಡಲಾಗಿದೆ. ಆದ್ದರಿಂದ ರೈತರಿಗೆ ಯಾವುದೇ ಆತಂಕ ಬೇಡ ಎಂದು ಹೇಳಿದರು.

About the Author

The Bengaluru Live

Administrator

Visit Website View All Posts

Post navigation

Previous: ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ 61 ಕೇಸ್!
Next: ರಾಜ್ಯಪಾಲರ ಸಂವಿಧಾನ ಬಾಹಿರ ನಿರ್ಣಯದ ಬಗ್ಗೆ ವರಿಷ್ಠರಿಗೆ ವಿವರಣೆ, ರಾಜ್ಯದಲ್ಲಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ವರಿಷ್ಠರೊಂದಿಗೆ ಚರ್ಚೆ: ಮುಖ್ಯಮಂತ್ರಿ ಸಿದ್ದರಾಮಯ್ಯ

Related Stories

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಹೂಗುಚ್ಛ ಹಿಡಿದ ಮಹಿಳೆ ಮತ್ತು ಕನ್ನಡ ಬಾವುಟದ ಬಣ್ಣದ ಶಾಲು ಧರಿಸಿದ ಪುರುಷರು
  • ಕರ್ನಾಟಕ

ಜಪಾನ್‌ನಲ್ಲಿ ಸಿಎಂ ಶಿವಕುಮಾರ್‌ಗೆ ಭಾರತೀಯ ರಾಯಭಾರಿ, ಟೋಕಿಯೊ ಕನ್ನಡ ಸಂಘದ ಸದಸ್ಯರಿಂದ ಸ್ವಾಗತ

The Bengaluru Live November 23, 2026 10:02 AM
ಮೋಡ ಕವಿದ ಆಕಾಶ ಮತ್ತು ಗ್ರಾಮೀಣ ಭೂದೃಶ್ಯದ ಎಐ ನಿರ್ಮಿತ ಪ್ರಾತಿನಿಧಿಕ ಚಿತ್ರ.
  • ಕರ್ನಾಟಕ

ಕರ್ನಾಟಕ ಹವಾಮಾನ: ಒಣ ಹವೆ ಮುಂದುವರಿಕೆ, ನವೆಂಬರ್ 24ರಿಂದ 26ರವರೆಗೆ ಕೆಲವೆಡೆ ಮಳೆ ಸಾಧ್ಯತೆ

The Bengaluru Live November 22, 2026 2:01 PM
ಮೋಡ ಕವಿದ ಆಕಾಶ ಮತ್ತು ಗ್ರಾಮೀಣ ಭೂದೃಶ್ಯದ ಎಐ ನಿರ್ಮಿತ ಪ್ರಾತಿನಿಧಿಕ ಚಿತ್ರ.
  • ಕರ್ನಾಟಕ

ನವೆಂಬರ್ 23ರಿಂದ ಕರ್ನಾಟಕದ ಕೆಲವೆಡೆ ಗುಡುಗು, ಸಿಡಿಲು ಸಾಧ್ಯತೆ: ಐಎಂಡಿ

The Bengaluru Live November 22, 2026 11:32 AM

Latest Post

ಬೆಂಗಳೂರಿನ ರಾಷ್ಟ್ರೀಯ ಮಿಲಿಟರಿ ಶಾಲೆಯ 80ನೇ ವಾರ್ಷಿಕೋತ್ಸವ ಆಚರಣೆ ರಾಷ್ಟ್ರೀಯ ಮಿಲಿಟರಿ ಶಾಲೆ ಬೆಂಗಳೂರಿನಲ್ಲಿ ನೆಹರು ಹೌಸ್ ಹೆಸರಿನ ಪರದೆಯ ಮುಂದೆ ಚಾಂಪಿಯನ್ ಹೌಸ್ ಟ್ರೋಫಿ ಹಿಡಿದ ಕೆಡೆಟ್‌ಗಳು ಮತ್ತು ಸಿಬ್ಬಂದಿ
  • ಬೆಂಗಳೂರು ನಗರ

ಬೆಂಗಳೂರಿನ ರಾಷ್ಟ್ರೀಯ ಮಿಲಿಟರಿ ಶಾಲೆಯ 80ನೇ ವಾರ್ಷಿಕೋತ್ಸವ ಆಚರಣೆ

November 23, 2026 10:36 AM
ಜಪಾನ್‌ನಲ್ಲಿ ಸಿಎಂ ಶಿವಕುಮಾರ್‌ಗೆ ಭಾರತೀಯ ರಾಯಭಾರಿ, ಟೋಕಿಯೊ ಕನ್ನಡ ಸಂಘದ ಸದಸ್ಯರಿಂದ ಸ್ವಾಗತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಹೂಗುಚ್ಛ ಹಿಡಿದ ಮಹಿಳೆ ಮತ್ತು ಕನ್ನಡ ಬಾವುಟದ ಬಣ್ಣದ ಶಾಲು ಧರಿಸಿದ ಪುರುಷರು
  • ಕರ್ನಾಟಕ

ಜಪಾನ್‌ನಲ್ಲಿ ಸಿಎಂ ಶಿವಕುಮಾರ್‌ಗೆ ಭಾರತೀಯ ರಾಯಭಾರಿ, ಟೋಕಿಯೊ ಕನ್ನಡ ಸಂಘದ ಸದಸ್ಯರಿಂದ ಸ್ವಾಗತ

November 23, 2026 10:02 AM
ಘನತ್ಯಾಜ್ಯ ನಿರ್ವಹಣೆಗೆ ಉತ್ತರ ನಗರ ಪಾಲಿಕೆಯಿಂದ ಮೈಕ್ರೋ-ಪ್ಲಾನ್; ಪ್ರತಿ ಮಂಗಳವಾರ ಫೋನ್-ಇನ್ ಫೋನ್-ಇನ್ ಕಾರ್ಯಕ್ರಮದ ವೇಳೆ ಸಭೆ ಮೇಜಿನ ಬಳಿ ಟೇಬಲ್ ಫೋನ್‌ನಲ್ಲಿ ಮಾತನಾಡುತ್ತಿರುವ ವ್ಯಕ್ತಿ ಮತ್ತು ಪಕ್ಕದಲ್ಲಿ ಕುಳಿತಿರುವ ಮಹಿಳೆ
  • ಬೆಂಗಳೂರು ನಗರ

ಘನತ್ಯಾಜ್ಯ ನಿರ್ವಹಣೆಗೆ ಉತ್ತರ ನಗರ ಪಾಲಿಕೆಯಿಂದ ಮೈಕ್ರೋ-ಪ್ಲಾನ್; ಪ್ರತಿ ಮಂಗಳವಾರ ಫೋನ್-ಇನ್

November 23, 2026 8:19 AM
ಪರೀಕ್ಷೆ ಮುಗಿದ 4 ಗಂಟೆಯಲ್ಲೇ ಕೀ ಉತ್ತರ ಪ್ರಕಟಿಸಿದ ಕೆಇಎ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಹೆಸರಿನ ಫಲಕ ಮತ್ತು ಲಾಂಛನದ ಮುಂದೆ ತಮ್ಮ ಮೇಜಿನ ಬಳಿ ಮಾತನಾಡುತ್ತಿರುವ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ
  • ಶಿಕ್ಷಣ

ಪರೀಕ್ಷೆ ಮುಗಿದ 4 ಗಂಟೆಯಲ್ಲೇ ಕೀ ಉತ್ತರ ಪ್ರಕಟಿಸಿದ ಕೆಇಎ

November 22, 2026 9:30 PM
ಕೆಇಎ ಪಿಯು ಕಾಲೇಜು ಪ್ರಾಂಶುಪಾಲರ ಪರೀಕ್ಷೆಗೆ ಶೇ 82ರಷ್ಟು ಹಾಜರಾತಿ, 2,349 ಅಭ್ಯರ್ಥಿಗಳು ಭಾಗಿ ಕೆಇಎ ಹೆಸರು ಮತ್ತು ಲಾಂಛನದ ಮುಂದೆ ಕುಳಿತಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಅವರ ಕಡತ ಚಿತ್ರ
  • ಶಿಕ್ಷಣ

ಕೆಇಎ ಪಿಯು ಕಾಲೇಜು ಪ್ರಾಂಶುಪಾಲರ ಪರೀಕ್ಷೆಗೆ ಶೇ 82ರಷ್ಟು ಹಾಜರಾತಿ, 2,349 ಅಭ್ಯರ್ಥಿಗಳು ಭಾಗಿ

November 22, 2026 9:22 PM
ಬನ್ನಪ್ಪ ಪಾರ್ಕ್, ಓಕಳೀಪುರಂ ಕಾರಿಡಾರ್ ಪರಿಶೀಲನೆ: ಕಾಮಗಾರಿ ತ್ವರಿತಗೊಳಿಸಲು ಅಪರ ಆಯುಕ್ತರ ಸೂಚನೆ ತ್ಯಾಜ್ಯ ಮತ್ತು ಅವಶೇಷಗಳ ರಾಶಿಯ ಪಕ್ಕದ ರಸ್ತೆಯಲ್ಲಿ ಪರಿಶೀಲನೆಯ ವೇಳೆ ನಡೆದು ಹೋಗುತ್ತಿರುವ ಅಧಿಕಾರಿಗಳು
  • ಬೆಂಗಳೂರು ನಗರ

ಬನ್ನಪ್ಪ ಪಾರ್ಕ್, ಓಕಳೀಪುರಂ ಕಾರಿಡಾರ್ ಪರಿಶೀಲನೆ: ಕಾಮಗಾರಿ ತ್ವರಿತಗೊಳಿಸಲು ಅಪರ ಆಯುಕ್ತರ ಸೂಚನೆ

November 22, 2026 6:00 PM

ನೀವು ತಪ್ಪಿಸಿಕೊಂಡಿರಬಹುದು

ರಾಷ್ಟ್ರೀಯ ಮಿಲಿಟರಿ ಶಾಲೆ ಬೆಂಗಳೂರಿನಲ್ಲಿ ನೆಹರು ಹೌಸ್ ಹೆಸರಿನ ಪರದೆಯ ಮುಂದೆ ಚಾಂಪಿಯನ್ ಹೌಸ್ ಟ್ರೋಫಿ ಹಿಡಿದ ಕೆಡೆಟ್‌ಗಳು ಮತ್ತು ಸಿಬ್ಬಂದಿ
  • ಬೆಂಗಳೂರು ನಗರ

ಬೆಂಗಳೂರಿನ ರಾಷ್ಟ್ರೀಯ ಮಿಲಿಟರಿ ಶಾಲೆಯ 80ನೇ ವಾರ್ಷಿಕೋತ್ಸವ ಆಚರಣೆ

The Bengaluru Live November 23, 2026 10:36 AM
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಹೂಗುಚ್ಛ ಹಿಡಿದ ಮಹಿಳೆ ಮತ್ತು ಕನ್ನಡ ಬಾವುಟದ ಬಣ್ಣದ ಶಾಲು ಧರಿಸಿದ ಪುರುಷರು
  • ಕರ್ನಾಟಕ

ಜಪಾನ್‌ನಲ್ಲಿ ಸಿಎಂ ಶಿವಕುಮಾರ್‌ಗೆ ಭಾರತೀಯ ರಾಯಭಾರಿ, ಟೋಕಿಯೊ ಕನ್ನಡ ಸಂಘದ ಸದಸ್ಯರಿಂದ ಸ್ವಾಗತ

The Bengaluru Live November 23, 2026 10:02 AM
ಫೋನ್-ಇನ್ ಕಾರ್ಯಕ್ರಮದ ವೇಳೆ ಸಭೆ ಮೇಜಿನ ಬಳಿ ಟೇಬಲ್ ಫೋನ್‌ನಲ್ಲಿ ಮಾತನಾಡುತ್ತಿರುವ ವ್ಯಕ್ತಿ ಮತ್ತು ಪಕ್ಕದಲ್ಲಿ ಕುಳಿತಿರುವ ಮಹಿಳೆ
  • ಬೆಂಗಳೂರು ನಗರ

ಘನತ್ಯಾಜ್ಯ ನಿರ್ವಹಣೆಗೆ ಉತ್ತರ ನಗರ ಪಾಲಿಕೆಯಿಂದ ಮೈಕ್ರೋ-ಪ್ಲಾನ್; ಪ್ರತಿ ಮಂಗಳವಾರ ಫೋನ್-ಇನ್

The Bengaluru Live November 23, 2026 8:19 AM
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಹೆಸರಿನ ಫಲಕ ಮತ್ತು ಲಾಂಛನದ ಮುಂದೆ ತಮ್ಮ ಮೇಜಿನ ಬಳಿ ಮಾತನಾಡುತ್ತಿರುವ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ
  • ಶಿಕ್ಷಣ

ಪರೀಕ್ಷೆ ಮುಗಿದ 4 ಗಂಟೆಯಲ್ಲೇ ಕೀ ಉತ್ತರ ಪ್ರಕಟಿಸಿದ ಕೆಇಎ

The Bengaluru Live November 22, 2026 9:30 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಬೆಂಗಳೂರಿನ ರಾಷ್ಟ್ರೀಯ ಮಿಲಿಟರಿ ಶಾಲೆಯ 80ನೇ ವಾರ್ಷಿಕೋತ್ಸವ ಆಚರಣೆ
  • ಜಪಾನ್‌ನಲ್ಲಿ ಸಿಎಂ ಶಿವಕುಮಾರ್‌ಗೆ ಭಾರತೀಯ ರಾಯಭಾರಿ, ಟೋಕಿಯೊ ಕನ್ನಡ ಸಂಘದ ಸದಸ್ಯರಿಂದ ಸ್ವಾಗತ
  • ಘನತ್ಯಾಜ್ಯ ನಿರ್ವಹಣೆಗೆ ಉತ್ತರ ನಗರ ಪಾಲಿಕೆಯಿಂದ ಮೈಕ್ರೋ-ಪ್ಲಾನ್; ಪ್ರತಿ ಮಂಗಳವಾರ ಫೋನ್-ಇನ್
  • ಪರೀಕ್ಷೆ ಮುಗಿದ 4 ಗಂಟೆಯಲ್ಲೇ ಕೀ ಉತ್ತರ ಪ್ರಕಟಿಸಿದ ಕೆಇಎ
©Copyright 2025 The Bengaluru Live All rights reserved. | MoreNews by AF themes.