Home ಬೆಂಗಳೂರು ನಗರ ಮತ್ತೊಮ್ಮೆ ಮೋದಿಜಿ ಪ್ರಧಾನಮಂತ್ರಿ ಮಾಡಲು ಶ್ರಮಿಸಿ — ಸಿದ್ದರಾಜು

ಮತ್ತೊಮ್ಮೆ ಮೋದಿಜಿ ಪ್ರಧಾನಮಂತ್ರಿ ಮಾಡಲು ಶ್ರಮಿಸಿ — ಸಿದ್ದರಾಜು

13
0
Strive to make Modiji Prime Minister again — Siddaraju
Strive to make Modiji Prime Minister again — Siddaraju
Advertisement
bengaluru

ಬೆಂಗಳೂರು:

ಮತ್ತೊಮ್ಮೆ ನರೇಂದ್ರ ಮೋದಿಜಿ ಅವರನ್ನು ದೇಶದ ಪ್ರಧಾನಮಂತ್ರಿ ಮಾಡಲು ಶ್ರಮಿಸಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಅವರು ತಿಳಿಸಿದರು.

ಲಗ್ಗೆರೆ ವಾರ್ಡ್‍ನಲ್ಲಿ ಇಂದು ಬಿಜೆಪಿ ಕಾರ್ಯಕರ್ತರ ಉಪಹಾರ ಸಭೆಯ ವೇಳೆ ಅವರು ಮಾತನಾಡಿ, ಚುನಾವಣೆಗಳು ಬರುತ್ತವೆ ಹೋಗುತ್ತವೆ, ಚುನಾವಣೆಗಳಲ್ಲಿ ಸೋಲು ಗೆಲುವು ಸಹಜ, ದೇಶ ಕಟ್ಟುವ ಸಂಕಲ್ಪದೊಂದಿಗೆ ನಾವೆಲ್ಲರೂ ಸದಾ ಒಗ್ಗಟ್ಟಾಗಿ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು ಎಂದರು.

ದೇಶದ ಉನ್ನತೆಗಾಗಿ ಶ್ರಮಿಸುತ್ತಿರುವ ಮೋದಿಯವರ ಶ್ರಮವನ್ನು ನಾವು ಜನತೆಗೆ ತಿಳಿಸಬೇಕು. ಈ ಮೂಲಕ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಪಡೆಯಲು ಶ್ರಮಪಡೋಣ ಎಂದರು. ಲಗ್ಗೆರೆ ವಾರ್ಡಿನ ನಾವೆಲ್ಲರೂ ಒಗ್ಗಟ್ಟಾಗಿ ಮುಂಬರುವ ಚುನಾವಣೆಯಲ್ಲಿ ಸಂಘಟಿತವಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸಿ ಮತ್ತೊಮ್ಮೆ ಮೋದಿಜಿ ಅವÀರನ್ನು ಪ್ರಧಾನಿ ಮಾಡುವ ಸಂಕಲ್ಪವನ್ನು ತೊಡಬೇಕೆಂದು ತಿಳಿಸಿದರು.

bengaluru bengaluru

ಈ ಸಂದರ್ಭದಲ್ಲಿ ಬಿಬಿಎಂಪಿ ಮಾಜಿ ಸದಸ್ಯ ಲಕ್ಷ್ಮಿಕಾಂತ್ ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಚ್ಚಿದಾನಂದ, ಲಗ್ಗೆರೆ ವಾರ್ಡ್ ಅಧ್ಯಕ್ಷ ರಾಜಗೋಪಾಲ್ ಮುಂತಾದವರು ಇದ್ದರು.


bengaluru

LEAVE A REPLY

Please enter your comment!
Please enter your name here