Home ರಾಮನಗರ ಶಾಲಾರಂಭ: ಸುರಕ್ಷತೆ ಕುರಿತು ವಿದ್ಯಾರ್ಥಿ, ಪೋಷಕರ ಸಮಾಧಾನ- ಎಸ್. ಸುರೇಶ್ ಕುಮಾರ್

ಶಾಲಾರಂಭ: ಸುರಕ್ಷತೆ ಕುರಿತು ವಿದ್ಯಾರ್ಥಿ, ಪೋಷಕರ ಸಮಾಧಾನ- ಎಸ್. ಸುರೇಶ್ ಕುಮಾರ್

88
0

ರಾಮನಗರ/ಬೆಂಗಳೂರು:

ಮಕ್ಕಳ ಸುರಕ್ಷತೆಗೆ ಕೈಗೊಂಡ ಉಪಕ್ರಮಗಳ ಕುರಿತು ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಭರವಸೆ ಉಂಟಾಗಿದ್ದು, ಪ್ರಸ್ತುತ ವರ್ಷದ ಶಾಲಾರಂಭದ ಎರಡನೇ ದಿನವಾದ ಶನಿವಾರ ರಾಜ್ಯದೆಲ್ಲೆಡೆ ಶುಕ್ರವಾರಕ್ಕಿಂತ ವಿದ್ಯಾರ್ಥಿಗಳ ಹಾಜರಾತಿ ಸಂಖ್ಯೆ ಹೆಚ್ಚಾಗಿದೆ  ಎಂದು  ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ  ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

10 ಮತ್ತು 12ನೇತರಗತಿಗಳು ಮತ್ತು 6 ರಿಂದ 9ನೇ ತರಗತಿಗಳಿಗೆ ಪರಿಷ್ಕೃತ ವಿದ್ಯಾಗಮ ತರಗತಿಗಳ ಆರಂಭವಾದ ಹಿನ್ನೆಲೆಯಲ್ಲಿ ಶನಿವಾರ ರಾಮನಗರ ಜಿಲ್ಲೆಯ ಬಿಡದಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಸವೇಶ್ವರ ಪ್ರೌಢಶಾಲೆ, ರಾಮನಗರದ ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಶಾಂತಿನಿಕೇತನ ಶಾಲೆ, ವಿ.ಜಿ.ದೊಡ್ಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಾಗಡಿ ತಾಲೂಕಿನ ಹೊಸಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಾಚೇನಹಟ್ಟಿ ಸರ್ಕಾರಿ ಪ್ರೌಢಶಾಲೆ ಸೇರಿದಂತೆ ರಾಮನಗರ ಜಿಲ್ಲೆ  ಮತ್ತು ಬೆಂಗಳೂರು ನಗರದ ಹಲವು ಶಾಲೆಗಳಿಗೆ ಭೇಟಿ ನೀಡಿ ಪೋಷಕರು ಮತ್ತು ಮಕ್ಕಳೊಂದಿಗೆ ಶಾಲಾರಂಭದ ಕುರಿತು ಸಂವಾದ ನಡೆಸಿ ಅಭಿಪ್ರಾಯಗಳನ್ನು ಆಲಿಸಿದರು.

WhatsApp Image 2021 01 02 at 19.16.55


ರಾಜ್ಯದಲ್ಲಿರುವ 5492 ಪದವಿ ಪೂರ್ವ ಕಾಲೇಜುಗಳಲ್ಲಿ ದಾಖಲಾಗಿರುವ 3,30,877 ವಿದ್ಯಾರ್ಥಿಗಳ ಪೈಕಿ ಶನಿವಾರ 1,09,319 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. (ಶೇ. 33.04 ಹಾಜರಿ) ಅಂತೆಯೇ 16,850 ಪ್ರೌಢಶಾಲೆಗಳಲ್ಲಿ 10ನೇ ತರಗತಿಗೆ ದಾಖಲಾಗಿರುವ 9,29,130 ವಿದ್ಯಾರ್ಥಿಗಳ ಪೈಕಿ 4,25,896 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. (ಶೇ. …45.84 ಹಾಜರಾತಿ)  ಎಂದು ಅವರು ತಿಳಿಸಿದ್ದಾರೆ.

ಪೋಷಕರು ಮತ್ತು ಮಕ್ಕಳು ಶಾಲಾರಂಭದ ಕುರಿತು ಸಂತಸ ವ್ಯಕ್ತಪಡಿಸಿದ್ದಾರಲ್ಲದೇ, ಸುರಕ್ಷತೆ ಮತ್ತು ಎಸ್ಒಗಪಿ ಪಾಲನೆ ಕುರಿತು ವಿಶ್ವಾಸ ಹೊಂದಿದ್ದಾರೆ. ಬಹುದಿನಗಳ ಕಾಲ ಶಾಲೆಗಳು ಆರಂಭವಾಗದೇ ಮಕ್ಕಳ ಭವಿಷ್ಯದ ಕುರಿತು ಆತಂಕದಲ್ಲಿದ್ದ ಪೋಷಕರು ಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯದೆಲ್ಲೆಡೆ ಶಾಲಾರಂಭಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಸಚಿವರು ಶಾಲಾ ಭೇಟಿ ನಂತರ ತಿಳಿಸಿದ್ದಾರೆ.

ಕೆಲ ಪೋಷಕರು ಮುಂದಿನ ವಾರದಿಂದ ಮಕ್ಕಳನ್ನು ಶಾಲೆಗೆ ಕಳಿಸಲು ಬಯಸಿರುವುದರಿಂದ ಸೋಮವಾರದಿಂದ ಶಾಲೆಗಳಲ್ಲಿ ಹಾಜರಾತಿ ಹೆಚ್ಚಾಗಲಿದೆ  ಎಂದು  ಸುರೇಶ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರಲ್ಲದೇ ಸುರಕ್ಷತಾ ವಾತಾವರಣದ ಗಮನಿಸಿರುವ ಪೋಷಕರು ಉಳಿದ  ತರಗತಿಗಳನ್ನೂ ಆರಂಭಿಸಲು ಹೆಚ್ಚಿನ ಒತ್ತಡ ಹೇರುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ. ಎಲ್ಲಿಯೂ ಸಹ ಯಾವುದೇ ತೊಂದರೆ ಎದುರಾಗಿಲ್ಲ ಹಾಗೆಯೇ ಮಕ್ಕಳೇ ಸ್ವತಃ ಸಾಮಾಜಿಕ ಅಂತರ ಪಾಲನೆ ಮಾಡುತ್ತಿರುವುದು ಶಿಕ್ಷಕರು ಮತ್ತು ಪೋಷಕರಿಗೆ ಸಮಾಧಾನ ತಂದಿದೆ ಎಂದಿದ್ದಾರೆ. 

WhatsApp Image 2021 01 02 at 19.16.55 1

ಮಂಡಳಿ ಪರೀಕ್ಷೆಗಳಾದ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯು ಪಠ್ಯಗಳನ್ನು ಲಭ್ಯವಾಗಬಹುದಾದ ಅವಧಿ ಮತ್ತು ಪರೀಕ್ಷೆಗೆ ಅಗತ್ಯವಿರುವಷ್ಟು ನಿಗದಿಪಡಿಸಲಾಗುವುದು. ವಿದ್ಯಾರ್ಥಿಗಳ ಅಭ್ಯಾಸಕ್ಕೆ ಹೊರೆಯಾಗದಂತೆ ಸಿಲೆಬಸ್ ಇರಲಿದೆ. ಹಾಗೆಯೇ ಕೆಲವು ದಿನಗಳಲ್ಲಿ  10 ಮತ್ತು 12ನೇ ತರಗತಿಗಳ ತಾತ್ಪೂರ್ತಿಕ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಸುರೇಶ್ ಕುಮಾರ್ ಹೇಳಿದ್ದಾರೆ.

ಶಾಲೆಗಳು ಆರಂಭವಾಗಿರುವುದು  ಶಾಲಾ ಪರಿಸರಕ್ಕೆ ಕಳೆ ಬಂದಿದ್ದು, ಗ್ರಾಮೀಣ ಪ್ರದೇಶದಲ್ಲಿ ಒಂದು ಶಾಲಾ ಉಡುಪಿನೊಂದಿಗೆ ಮಕ್ಕಳ ಓಡಾಟ ಒಂದು ರೀತಿಯಲ್ಲಿ ಸಕಾರಾತ್ಮಕ ಸಂಚಲನ ಮೂಡಿಸಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

LEAVE A REPLY

Please enter your comment!
Please enter your name here