Home ಬೆಂಗಳೂರು ನಗರ ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣಕ್ಕೆ ಎಚ್ಚೆನ್ ಹೆಸರಿಡಲು ಸುರೇಶ್ ಕುಮಾರ್ ಮನವಿ

ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣಕ್ಕೆ ಎಚ್ಚೆನ್ ಹೆಸರಿಡಲು ಸುರೇಶ್ ಕುಮಾರ್ ಮನವಿ

38
0
ಚಿತ್ರ ಮೂಲ: https://www.karnataka.com/personalities/h-narasimhaiah/
Advertisement
bengaluru

ಬೆಂಗಳೂರು:

ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ‘ನಮ್ಮ ಮೆಟ್ರೋ’ ನಿಲ್ದಾಣಕ್ಕೆ ‘ಡಾ. ಎಚ್.ಎನ್. ನಿಲ್ದಾಣ’ ಎಂದು ನಾಮಕರಣ ಮಾಡಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.

ರಾಜಧಾನಿ ಬೆಂಗಳೂರಿನ ಜನರ ಸಂಚಾರನಾಡಿಯಾಗಿರುವ ‘ನಮ್ಮ ಮೆಟ್ರೋ’ ರೈಲು ನಿಲ್ದಾಣಗಳಿಗೆ ಆಯಾ ಭಾಗದ ವಿಶೇಷಗಳು ಹಾಗೂ ಆಯಾ ಪ್ರದೇಶದಲ್ಲಿ ತಮ್ಮ ಸೇವೆ ಮೂಲಕ ಪ್ರಸಿದ್ಧರಾಗಿರುವ ಉದ್ಧಾಮರ ಹೆಸರುಗಳನ್ನು ಇಟ್ಟು ವಿಶಿಷ್ಟವಾಗಿ ಗೌರವಿಸಲಾಗಿದೆ. ಅದೇ ರೀತಿ ಅದೇ ರೀತಿ ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣಕ್ಕೆ ಹಿರಿಯ ಶಿಕ್ಷಣ ಪ್ರೇಮಿ ಡಾ. ಎಚ್. ನರಸಿಂಹಯ್ಯನವರ ಹೆಸರನ್ನು ನಾಮಕರಣ ಮಾಡಬೇಕೆಂದು ಅವರು ಮುಖ್ಯಮಂತ್ರಿಯವರಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಮೆಟ್ರೋ ನಿಲ್ದಾಣಗಳಿಗೆ ಇಂತಹ ಮಹಾಪುರಷರನ್ನು ಸದಾ ಸ್ಮರಣೆಯಲ್ಲಿಟ್ಟುಕೊಂಡು ಅವರ ಸೇವೆಯನ್ನು ಗುರುತಿಸುವ ಒಂದು ಕ್ರಮವಾಗಿದೆ. ಉದಾಹರಣೆಗೆ ಡಾ. ಬಿ.ಆರ್.ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ನಾಡಪ್ರಭು ಕೆಂಪೇಗೌಡ, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ಸರ್. ಎಂ. ವಿಶ್ವೇಶ್ವರಯ್ಯನವರು ಸೇರಿದಂತೆ ಅನೇಕ ಮಹನೀಯರ ಹೆಸರನ್ನು ಮೆಟ್ರೋ ರೈಲು ನಿಲ್ದಾಣಗಳಿಗೆ ನಾಮಕರಣ ಮಾಡುವ ಮೂಲಕ ಅವರ ಸೇವೆಯನ್ನು ಗೌರವಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

bengaluru bengaluru

ಬೆಂಗಳೂರಿನ ಪ್ರಮುಖ ಭಾಗ ಬಸವನಗುಡಿಯ ನ್ಯಾಷನಲ್ ಕಾಲೇಜು ಪ್ರದೇಶ. ನ್ಯಾಷನಲ್ ಕಾಲೇಜು ಎಂದ ಕೂಡಲೇ ಎಲ್ಲರ ನೆನಪಿಗೆ ಬರುವ ಹೆಸರು ನಮ್ಮೆಲ್ಲರ ಮೆಚ್ಚಿನ ಗೌರವಾನ್ವಿತ ಡಾ. ಎಚ್. ನರಸಿಂಹಯ್ಯ ಅವರದು. ಅವರು ಪ್ರಗತಿಪರ ಧೋರಣೆಗೆ ಹೆಸರಾಗಿ ಇಡೀ ತಮ್ಮ ಜೀವನವನ್ನು ಇಡೀ ಸಮಾಜಕ್ಕಾಗಿ ಅರ್ಪಿಸಿಕೊಂಡವರು. ಅವರನ್ನು ನೆನಪಿಸಿಕೊಳ್ಳದೇ ನ್ಯಾಷನಲ್ ಕಾಲೇಜು ಹೆಸರನ್ನು ಪ್ರಸ್ತಾಪಿಸಲು ಸಾಧ್ಯವೇ ಇಲ್ಲ. ಸರಳತೆಯೇ ಮೈವೆತ್ತಂತಿದ್ದು ಸದಾ ಖಾದಿಯನ್ನೇ ಧರಿಸುತ್ತಿದ್ದ ಡಾ.ಎಚ್. ನರಸಿಂಹಯ್ಯನವರು ಅಧ್ಯಾಪಕರಾಗಿ, ಆಡಳಿತಗಾರರಾಗಿ, ಸ್ನೇಹಮಯ ಮಾನವತಾವಾದಿಯಾಗಿದ್ದರಲ್ಲದೇ ರಾಷ್ಟ್ರೀಯವಾದಿಯೂ ಆಗಿದ್ದರು. ಬೆಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿ, ವಿಧಾನಪರಿಷತ್ತಿನ ಸದಸ್ಯರಾಗಿ ಅವರು ತಾವು ಅಲಂಕರಿಸಿದ ಯಾವುದೇ ಸ್ಥಾನಕ್ಕೂ ಗೌರವವನ್ನು ತಂದಿದ್ದರು. ಆ ಹೆಸರೇ ಎಲ್ಲರಿಗೂ ಪ್ರೇರಣೆ ತರುವಂತಹುದು. ಅಸಂಖ್ಯಾತ ಪ್ರತಿಭೆಗಳಿಗೆ ಬೆಳಕು ತೋರಿದವರು ಎಂದು ಸುರೇಶ್ ಕುಮಾರ್ ಪತ್ರದಲ್ಲಿ ವಿವರಿಸಿದ್ದಾರೆ.

ಬಸವನಗುಡಿಯ ನ್ಯಾಷನಲ್ ಕಾಲೇಜು ‘ನಮ್ಮ ಮೆಟ್ರೋ’ ನಿಲ್ದಾಣಕ್ಕೆ ‘ಡಾ. ಎಚ್.ಎನ್. ನಿಲ್ದಾಣ’ ಎಂದು ನಾಮಕರಣ ಮಾಡುವ ಮೂಲಕ ಇಂತಹ ಮಹಾನ್ ನಿಸ್ವಾರ್ಥ ಸಮಾಜ ಜೀವಿಯ ಸೇವೆಯನ್ನು ಮುಂದಿನ ಪೀಳಿಗೆಗೂ ನೆನಪಿಟ್ಟುಕೊಳ್ಳುವಂತೆ ಮಾಡಿದಂತಾಗುತ್ತದೆ ಎಂದು ಅವರು ತಿಳಿಸಿದ್ದಾರೆ.


bengaluru

LEAVE A REPLY

Please enter your comment!
Please enter your name here