Home ಕಲಬುರ್ಗಿ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದ ಅಧಿಕಾರಿಗಳ ಅಮಾನತ್ತು ಅಥವಾ ವರ್ಗಾವಣೆ ಖಂಡಿತ- ಸಚಿವ ಪ್ರಿಯಾಂಕ್ ಖರ್ಗೆ...

ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದ ಅಧಿಕಾರಿಗಳ ಅಮಾನತ್ತು ಅಥವಾ ವರ್ಗಾವಣೆ ಖಂಡಿತ- ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆ

4
0
Suspension or transfer of officials who do not work as per expectation is certain - Karnataka Minister Priyank Kharge warns
Suspension or transfer of officials who do not work as per expectation is certain - Karnataka Minister Priyank Kharge warns
Advertisement
bengaluru

ಚಿತ್ತಾಪುರ:

ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದ ಅಧಿಕಾರಿಗಳಿಗೆ ಸಸ್ಪೆಂಡ್ ಅಥವಾ ವರ್ಗಾವಣೆ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಸರ್ಕಾರಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಚಿತ್ತಾಪುರ ಪಟ್ಟಣದ ತಾಪಂ ಕಚೇರಿ ಸಭಾಂಗಣದಲ್ಲಿ ಜರುಗಿದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಈ ಹಿಂದೆ ಕೆಲ ಅಧಿಕಾರಿಗಳು ಮೈಮರೆತಿದ್ದರು. ಆದರೆ, ಈಗ ಆ ತರ ಎಲ್ಲ‌ ನಡೆಯುವುದಿಲ್ಲ. ನೀವು ಸರಿಯಾಗಿ ಕೆಲಸ ಮಾಡದಿದ್ದರೇ ನಾನೇ ನಿಮ್ಮನ್ನು ವರ್ಗಾವಣೆ ಮಾಡಿಸುತ್ತೇನೆ.‌ ಇದನ್ನು ಗಮನದಲ್ಲಿಟ್ಟುಕೊಂಡು ಜನರಿಗೆ ಅನುಕೂಲವಾಗುವಂತ ಆಡಳಿತ ನೀಡಲು ನೀವು ಸಹಕಾರ‌ ನೀಡಬೇಕು. ಅನುದಾನ ತರುವುದು ನನಗೆ ಬಿಡಿ ಆದರೆ ಈಗಾಗಲೇ ಬಿಡುಗಡೆಯಾದ ಅನುದಾನ ಖರ್ಚು ಮಾಡುವುದರ‌ ಕಡೆ ನೀವು ಗಮನಕೊಡಿ, ನೀವು ಅನುದಾನ‌ ಖರ್ಚು ಮಾಡದಿದ್ದರೆ ಮುಂದಿನ ಆರ್ಥಿಕ‌ ವರ್ಷದಲ್ಲಿ ಯಾವ ಇಲಾಖೆ ಅಡಿಯಲ್ಲಿ ನಿಮಗೆ ಅನುದಾನ ಸಿಗುವುದಿಲ್ಲ ಎಂದು ಅವರು ಅಧಿಕಾರಿಗಳಿಗೆ ಹೇಳಿದರು.

bengaluru bengaluru
WhatsApp Image 2023 08 04 at 2.38.26 PM 2

ಕೆಬಿಜೆಎನ್‌ಎಲ್, ಕೆಎನ್ಎನ್‌ಎಲ್, ಕೆಆರ್ಐಡಿಎಲ್, ಪಿಆರ್ ಇ, ನಿರ್ಮಿತಿ ಕೇಂದ್ರ, ಆರ್ ಡಿ ಡಬ್ಲ್ಯೂ ಇಲಾಖೆಗಳು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲೇಬೇಕು.‌ ಇದು ನಿಮಗೆ ನೀಡುತ್ತಿರುವ ಎಚ್ಚರಿಕೆಯಾಗಿದೆ ಇದನ್ನು ಮತ್ತೊಮ್ಮೆ ಸರಿಯಾಗಿ ಅರಿತುಕೊಂಡು ಕೆಲಸ ಮಾಡಿ ಎಂದು ಅವರು ಪುನರುಚ್ಚರಿಸಿದರು.

ಅಧಿಕಾರಿಗಳು ಕೈಗೊಂಡ ಕಾಮಗಾರಿಗಳ ಕುರಿತು‌ ಸಮಗ್ರ ಚರ್ಚೆಗೆ ಪ್ರತಿ ತಿಂಗಳು‌ 5 ನೇ ತಾರೀಖು ಸಭೆ ನಡೆಸಿ ಅದರ ಅನುಪಾಲನಾ ವರದಿ 7 ನೇ ತಾರೀಖು ನನಗೆ ತಲುಪಿಸಬೇಕು ಈ ಬಗ್ಗೆ ಕಚೇರಿ ಆದೇಶ ಹೊರಡಿಸುವಂತೆ ತಹಸೀಲ್ದಾರ ಶಾ ವಲಿ ಅವರಿಗೆ ಸೂಚಿಸಿದರು.

ಅರಣ್ಯ ಹಾಗೂ‌ ತೋಟಗಾರಿ‌ಕೆ‌ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಸಸಿ ನೆಡುವ ಕಾರ್ಯಕ್ರಮ‌ ಹಮ್ಮಿಕೊಂಡು, ಸಾರ್ವಜನಿಕ ಸ್ಥಳ, ಶಾಲೆಗಳ ಹಾಗೂ ಸರ್ಕಾರಿ ಕಚೇರಿಗಳ ಆವರಣಗಳಲ್ಲಿ ಸಸಿ ನೆಡಬೇಕು. ಪದೇ ಪದೇ ಹೇಳಿದರೂ ಕೂಡಾ ಪಟ್ಟಣದಲ್ಲಿ ಒಂದೇ ಒಂದು ಸ್ವಚ್ಛವಾದ ಉದ್ಯಾನವನ ನಿರ್ಮಿಸಲಾಗಿಲ್ಲ. ಈ ಬಗ್ಗೆ ಕೂಡಲೇ ಈ ಎರಡು ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿ ಮಾಡಬೂಳ ಬಳಿ ಅಂದಾಜು ರೂ 29 ಕೋಟಿ ವೆಚ್ಚದಲ್ಲಿ ಪ್ರಾಣಿ ಸಂಗ್ರಹಾಲಯ‌ ನಿರ್ಮಾಣಕ್ಕಾಗಿ ನಿರ್ಧರಿಸಲಾಗಿತ್ತು. ಈ ಕೂಡಲೇ ಪ್ರಸ್ತಾವನೆ ಸಲ್ಲಿಸಿ ಎಂದು ಅರಣ್ಯ‌ಇಲಾಖೆ‌ ಅಧಿಕಾರಿಗಳಿಗೆ ಸೂಚಿಸಿದರು.

ಸರ್ಕಾರದ ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಚಿತ್ತಾಪುರ ಪಟ್ಟಣ ಹಾಗೂ ಗ್ರಾಮೀಣ ಭಾಗಗಳ ಅಭಿವೃದ್ದಿಗಾಗಿ ನೀಲನಕ್ಷೆ ತಯಾರಿಸಿಕೊಂಡು ಬನ್ನಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಗೆ ಬಾರದ ಅಧಿಕಾರಿಗಳ‌ ವಿರುದ್ದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು ಅಂತವರ ವಿರುದ್ದ ಕಾರಣ ಕೇಳಿ ನೋಟೀಸು ಜಾರಿ ಮಾಡುವಂತೆ ಹೇಳಿ, ಪಿಡಿಓಗಳ ದುರ್ವರ್ತನೆ ಸೇರಿದಂತೆ ಕೆಳಹಂತದ ಅಧಿಕಾರಿಗಳ ಬೇಜವ್ದಾರಿತನವನ್ನು ಸಹಿಸಲಾಗದು ಅದಕ್ಕೆ ತಾಪಂ ಇಓಗಳನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.

ಕಾನೂನು ಸುವ್ಯವಸ್ಥೆ ಕೈ ಜಾರದಂತೆ ನೋಡಿಕೊಳ್ಳಬೇಕು. ಅಕ್ರಮ ಮರಳು ಹಾಗೂ ಅಕ್ಕಿ ಮಾರಾಟಕ್ಕೆ‌ ಕಟ್ಟುನಿಟ್ಟಿನ ಕಡಿವಾಣ ಹಾಕಬೇಕು. ರೌಡಿಗಳ ನಿಗ್ರಹ ಮಾಡಬೇಕು. ಸಮಾಜಘಾತುಕ ಶಕ್ತಿಗಳನ್ನು ಕಾನೂನುಬದ್ದವಾಗಿ ಮಟ್ಟಹಾಕಬೇಕು. ಗಾಂಜಾ ಚಿಂಚೋಳಿ ಕಡೆಯಿಂದ ಸರಬರಾಜು ಆಗುತ್ತಿದೆ ಎಂದು ಮಾಹಿತಿ ಇದೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಕ್ರಮ ಮದ್ಯ ಮಾರಾಟ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಕಿರಾಣ ಅಂಗಡಿಗಳಲ್ಲಿ ದಾಭಾಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಅವಧಿಗೆ ಮೀರಿದ ಸಮಯದವರೆಗೆ ದಾಭಾಗಳು ತೆಗೆದಿರುತ್ತವೆ.‌ಈ ಬಗ್ಗೆ ಅಬಕಾರಿ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ ಸಚಿವರು ಬೇರೆ ಜಿಲ್ಲೆಯವರು ಎಷ್ಟಾದರೂ ಮದ್ಯ ಮಾರಾಟ ಮಾಡಲಿ, ಚಿತ್ತಾಪುರ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣ ಮಾರಾಟ ಮಾಡಲು ಅನುವು ಮಾಡಿಕೊಡಬೇಡಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ ಸೈಯದ್ ಶಾ ವಲಿ, ತಾಪಂ ಇಓ ನೀಲಗಂಗಾ, ಕಾಳಗಿ ತಹಸೀಲ್ದಾರ ರಮಾವತಿ ಸೇರಿದಂತೆ ಹಲವರು ಇದ್ದರು.


bengaluru

LEAVE A REPLY

Please enter your comment!
Please enter your name here