Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಬೆಂಗಳೂರು ನಗರ
  • ಸಂತ್ರಸ್ತರಿಗೆ ವ್ಯವಸ್ಥಿತವಾಗಿ ಪರಿಹಾರ ನೀಡಿ, ಹಾನಿಯ ಕುರಿತು ಜಂಟಿ ಸಮೀಕ್ಷೆ ನಡೆಸಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
  • ಬೆಂಗಳೂರು ನಗರ

ಸಂತ್ರಸ್ತರಿಗೆ ವ್ಯವಸ್ಥಿತವಾಗಿ ಪರಿಹಾರ ನೀಡಿ, ಹಾನಿಯ ಕುರಿತು ಜಂಟಿ ಸಮೀಕ್ಷೆ ನಡೆಸಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

The Bengaluru Live July 15, 2022 7:00 PM 1 minute read
Systematically compensate victims, conduct joint survey of damage: Chief Minister Basavaraj Bommai

ಸಂತ್ರಸ್ತರಿಗೆ ವ್ಯವಸ್ಥಿತವಾಗಿ ಪರಿಹಾರ ನೀಡಿ, ಹಾನಿಯ ಕುರಿತು ಜಂಟಿ ಸಮೀಕ್ಷೆ ನಡೆಸಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು:

ಮಳೆಯಿಂದ ಉಂಟಾಗಿರುವ ಹಾನಿಯ ಕುರಿತು ಜಂಟಿ ಸಮೀಕ್ಷೆ ನಡೆಸಿ ವ್ಯವಸ್ಥಿತವಾಗಿ ಪರಿಹಾರವನ್ನು ತಕ್ಷಣವೇ ಒದಗಿಸಲು ಕ್ರಮ ವಹಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಇಂದು ದೇವನಹಳ್ಳಿಯಲ್ಲಿ ಮಳೆಯಿಂದ ಹಾನಿಗೊಳಗಾಗಿರುವ ಜಿಲ್ಲೆಗಳಲ್ಲಿನ ಸ್ಥಿತಿಗತಿ ಹಾಗೂ ಪರಿಹಾರ ಕಾರ್ಯಗಳ ಕುರಿತಂತೆ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿದ ಸಂದರ್ಭದಲ್ಲಿ ಸಿಎಂ ಈ ಸೂಚನೆ ನೀಡಿದರು.

ಮನೆಗಳಿಗೆ ತುರ್ತು ಪರಿಹಾರ 10 ಸಾವಿರರ ರೂ.ಗಳನ್ನು ನೀಡಿ, ನಂತರ ಮನೆಗಳ ನಿರ್ಮಾಣವನ್ನು ಕೂಡಲೇ ಕೈಗೊಳ್ಳಬೇಕು. ರಸ್ತೆ, ಸೇತುವೆ, ವಿದ್ಯುತ್ ಮುಂತಾದ ಮೂಲಭೂತ ಸೌಕರ್ಯ ದುರಸ್ತಿಗೆ ಆದ್ಯತೆ ನೀಡಬೇಕು. ಮಹಾರಾಷ್ಟ್ರದ ಕೋಯ್ನಾ ಜಲಾಶಯಗಳಿಂದ ಹೊರಬಿಡಲಾಗುತ್ತಿರುವ ನೀರಿನ ಮಟ್ಟದ ಬಗ್ಗೆ ನಿಗಾ ವಹಿಸಲು ಅಲ್ಲಿನ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರಬೇಕು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Systematically compensate victims, conduct joint survey of damage: Chief Minister Basavaraj Bommai

ಜಲಾಶಯಗಳಿಂದ ನೀರು ಹೊರಬಿಡುವ ಮುನ್ನ ಗ್ರಾಮಗಳಿಗೆ ಎಚ್ಚರಿಕೆ ನೀಡಿ ಜೀವ ಹಾನಿ ಅಥವಾ ಮನೆಗಳಿಗೆ ತೊಂದರೆಯಾಗದಂತೆ ಮುನ್ನಚ್ಚರಿಕೆ ವಹಿಸಬೇಕು. ಜನರ ಸ್ಥಳಾಂತರಕ್ಕೆ ಕ್ರಮ ವಹಿಸಬೇಕು. ಎನ್.ಡಿ.ಆರ್.ಎಫ್ ಮಾರ್ಗಸೂಚಿಗಳ ಪ್ರಕಾರ ಹಾನಿಗೊಳಗಾಗಿರುವ ಮನೆಗಳ ನಿರ್ಮಾಣಕ್ಕೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಪ್ರವಾಹ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ, ಎಲ್ಲಾ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಪರಿಹಾರ ಒದಗಿಸಬೇಕು ಮತ್ತು ಬೆಳೆ ಹಾನಿ, ರಸ್ತೆ, ಮನೆಗಳ ಹಾನಿ ಬಗ್ಗೆ ಸಮೀಕ್ಷೆ ಸರಿಯಾಗಿ ಮಾಡಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದರು.

ಸಭೆಯಲ್ಲಿ ಕಂದಾಯ ಸಚಿವ ಆರ್ ಅಶೋಕ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ವಿಪತ್ತು ಪರಿಹಾರ ಘಟಕದ ಡಾ. ಮನೋಜ ಉಪಸ್ಥಿತರಿದ್ದರು.

ಜಿಲ್ಲಾಡಳಿತಕ್ಕೆ ನೀಡಿರುವ ಇತರೆ ಸೂಚನೆಗಳು

ಜಿಲ್ಲೆಗಳಲ್ಲಿ ಮುಂದಿನ 5-6 ದಿನಗಳ ಮಳೆ ಹಾಗೂ ಮಳೆ ಮುನ್ಸೂಚನೆ ಯನ್ನು ಗಮನಿಸುವುದು. ಮುನ್ನೆಚ್ಚರಿಕಾ ಕ್ರಮಗಳ ಜೊತೆಗೆ ರಕ್ಷಣೆ ಮತ್ತು ಪರಿಹಾರ ಕಾರ್ಯಗಳಿಗೆ ಸನ್ನದ್ಧರಾಗಬೇಕು

ಪರಿಹಾರ ಕಾರ್ಯಗಳು ತ್ವರಿತ ಹಾಗೂ ಪಾರದರ್ಶಕ ವಾಗಿರಬೇಕು

ರಸ್ತೆ ಸಂಪರ್ಕ, ವಿದ್ಯುತ್ ಕಂಬಗಳು ಹಾಗೂ ಕುಡಿಯುವ ನೀರಿನ ಸರಬರಾಜಿಗೆ ಅಗತ್ಯ ಕ್ರಮ ಕೈಗೊಳ್ಳವುದು

ಮಳೆಯಿಂದ ಉಂಟಾಗಿರುವ ಹಾನಿಯ ಕುರಿತು ಜಂಟಿ ಸಮೀಕ್ಷೆ ನಡೆಸಿ ವ್ಯವಸ್ಥಿತವಾಗಿ ಪರಿಹಾರವನ್ನು ತಕ್ಷಣವೇ ಒದಗಿಸಲು ಕ್ರಮ ವಹಿಸಬೇಕು

ಭೂಕುಸಿತದ ಸಾಧ್ಯತೆಗಳುಳ್ಳ ಪ್ರದೇಶಗಳಲ್ಲಿ ರಸ್ತೆಗಳನ್ನು ತೆರವುಗೊಳಿಸುವುದು ಹಾಗೂ ದುರ್ಬಲ ಪ್ರದೇಶಗಳ ಸಮೀಕ್ಷೆ ಕಾರ್ಯ ಕೈಗೊಳ್ಳಲು ತಂಡಗಳನ್ನು ನಿಯೋಜಿಸುವುದು ಹಾಗೂ ಕೂಡಲೇ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಕ್ಕೆ ಕ್ರಮ ವಹಿಸುವುದು.

ಗ್ರಾಮ ಪಂಚಾಯತ್ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚಿಸುವುದು. ಸಮಿತಿಯು ಸಮೀಕ್ಷೆ ಕೈಗೊಂಡು ಅಗತ್ಯವಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು.

ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಎಲ್ಲಾ ನಿಯಂತ್ರಣಾ ಕೊಠಡಿಗಳು ಭಾರಿ ಮಳೆ ಹಾಗೂ ಪ್ರವಾಹ ಸ್ಥಿತಿ ಯ ಕುರಿತ ಅಹವಾಲುಗಳಿಗೆ ಸ್ಪಂದಿಸುವುದು

ಎನ್. ಡಿ.ಆರ್.ಎಫ್ ಹಾಗೂ ಎಸ್.ಡಿ.ಆರ್.ಎಫ್ ತಂಡಗಳಿಗೆ ಅಗತ್ಯವಿರುವ ಲಾಜಿಸ್ಟಿಕ್ಸ್ ನೆರವನ್ನು ಒದಗಿಸಿ ತೊಂದರೆಗೀಡಾದ ಪ್ರದೇಶಗಳಿಗೆ ತಕ್ಷಣವೇ ತಲುಪಲು ಕ್ರಮ ವಹಿಸಬೇಕು. ಜಿಲ್ಲಾ ರಕ್ಷಣಾಧಿಕಾರಿಗಳು ಮೇಲ್ವಿಚಾರಣೆ ಕೈಗೊಳ್ಳಬೇಕು.

ಸಂಬಂಧಿಕರ ಮನೆಗಳಿಗೆ ತೆರಳಿರುವ ಸಂತ್ರಸ್ತರಿಗೆ ಪಡಿತರ ಕಿಟ್ ನ್ನು ಕಂದಾಯ ಇಲಾಖೆ ನೀಡುವ ಪಟ್ಟಿಯಂತೆ ಒದಗಿಸುವುದು.

ವಿದ್ಯುತ್ ಸಂಪರ್ಕ ಪುನಸ್ಥಾಪಿಸಲು ಅತಿ ಹೆಚ್ಚಿನ ಆದ್ಯತೆ ನೀಡಿ ಬಾಧಿತ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಒದಗಿಸಲು ಎಸ್ಕಾಂಗಳು ಶ್ರಮವಹಿಸಬೇಕು.

ಜಿಲ್ಲಾಡಳಿತದ ವತಿಯಿಂದ ಹಾನಿಯಾಗಿರುವ ರಸ್ತೆ, ಸೇತುವೆ, ಕಲ್ವರ್ಟ್ ಹಾಗೂ ಟ್ಯಾಂಕ್ ಬಂಡ್ ಗಳನ್ನು ತಾತ್ಕಾಲಿಕವಾಗಿ ತಕ್ಷಣವೇ ಸರಿಪಡಿಸಿ, ಶಾಶ್ವತ ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಸುವುದು.

ಪ್ರಕೃತಿ ವಿಕೋಪ ಪರಿಹಾರದಡಿ ಕೈಗೊಂಡಿರುವ ಮನೆಗಳ ನಿರ್ಮಾಣ ಕಾರ್ಯವನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಬೇಕು. ಕಳೆದ ಮೂರು ವರ್ಷಗಳ ಅವಧಿಯ ಮನೆಗಳ ನಿರ್ಮಾಣ ಕಾರ್ಯ ಹಾಗೂ ಅವುಗಳನ್ನು ಪೂರ್ಣಗೊಳಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ವಿಸ್ತೃತ ವರದಿ ಸಲ್ಲಿಸುವುದು.

ಬೆಳೆ ಹಾನಿ ಕುರಿತು ತನಿಖೆ ಕೈಗೊಂಡು ಒಂದು ತಿಂಗಳೊಳಗೆ ಇನ್ ಪುಟ್ ಸಬ್ಸಿಡಿ ವಿತರಿಸಬೇಕು

ಕಾಳಜಿ ಕೇಂದ್ರಗಳಲ್ಲಿರುವ ಸಂತ್ರಸ್ತರಿಗೆ ಸರ್ಕಾರಿ ಆದೇಶದಲ್ಲಿ ನೀಡಿರುವ ಆಹಾರ ಪಟ್ಟಿಯನ್ನು ಅನುಸರಿಸಬೇಕು.

About the Author

The Bengaluru Live

Administrator

Visit Website View All Posts

Post navigation

Previous: ಗೋಡೆ ಬಿದ್ದು ಬಾಲಕನ ಸಾವು: 5 ಲಕ್ಷ ರೂಪಾಯಿ ಪರಿಹಾರ ವಿತರಣೆ
Next: ಸರ್ಕಾರಿ ಕಚೇರಿಗಳಲ್ಲಿ ಫೋಟೋ ವಿಡಿಯೋ ಮಾಡದಂತೆ ಹೊರಡಿಸಿದ್ದ ಆದೇಶ ವಾಪಸ್

Related Stories

ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಲಾಂಛನದ ಮುಂದೆ ಕಚೇರಿಯಲ್ಲಿ ಏಳು ಮಂದಿ ನಿಂತಿದ್ದು ಒಬ್ಬರು ದಾಖಲೆಯೊಂದನ್ನು ಸ್ವೀಕರಿಸುತ್ತಿದ್ದಾರೆ
  • ಬೆಂಗಳೂರು ನಗರ

ಯು.ಬಿ ಸಿಟಿಯ 21 ಸ್ವತ್ತುಗಳ ಆಸ್ತಿ ತೆರಿಗೆ: ₹2.65 ಕೋಟಿ ಮೊತ್ತದ ಡಿ.ಡಿ. ಸಲ್ಲಿಸಿದ ಅಧಿಕೃತ ಲಿಕ್ವಿಡೇಟರ್

The Bengaluru Live November 19, 2026 2:28 AM
ಬೆಂಗಳೂರಿನ ವಸಂತನಗರದಲ್ಲಿ ರಾತ್ರಿ ಕೆಂಪು ಮತ್ತು ಹಸಿರು ತ್ಯಾಜ್ಯ ತೊಟ್ಟಿಗಳ ಪಕ್ಕದ ಪಾದಚಾರಿ ಮಾರ್ಗದಲ್ಲಿ ಕಾಮಫ್ಲಾಜ್ ಸಮವಸ್ತ್ರದ ವ್ಯಕ್ತಿ ಮತ್ತು ಇತರರು
  • ಬೆಂಗಳೂರು ನಗರ

ಬೆಂಗಳೂರು ಕೇಂದ್ರ ನಗರ ಪಾಲಿಕೆಯಿಂದ ₹36,700 ದಂಡ: ಕಾಟನ್ ಪೇಟೆಯಲ್ಲಿ ರಸ್ತೆ ಬದಿ ತ್ಯಾಜ್ಯ ಸುರಿದ ಔಷಧಿ ಅಂಗಡಿಗೆ ₹20,000

The Bengaluru Live November 19, 2026 2:24 AM
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾ ಮಟ್ಟದ ಕಲಾಪ್ರತಿಭೋತ್ಸವ ಫಲಕದ ಮುಂದೆ ವೇದಿಕೆಯ ಮೇಲೆ ಪ್ರಮಾಣಪತ್ರ ಹಿಡಿದ ಮಕ್ಕಳು ಮತ್ತು ಗಣ್ಯರು
  • ಬೆಂಗಳೂರು ನಗರ

ಬೆಂಗಳೂರು ನಗರ ಜಿಲ್ಲಾ ಮಟ್ಟದ ಕಲಾಪ್ರತಿಭೋತ್ಸವ-2026: 150ಕ್ಕೂ ಹೆಚ್ಚು ಮಕ್ಕಳಿಂದ ಕಲಾ ಪ್ರದರ್ಶನ

The Bengaluru Live November 18, 2026 11:11 PM

Latest Post

ನರಸೀಪುರ ತಾಲೂಕಿನ ನೂತನ ಶ್ರೀ ಮೂಗ ಮಾರಮ್ಮ ದೇವಾಲಯ ಉದ್ಘಾಟನೆಯಲ್ಲಿ ಸಿದ್ದರಾಮಯ್ಯ ಭಾಗಿ ನೇರಳೆ ಮತ್ತು ಬಿಳಿ ಚಪ್ಪರದ ಅಡಿ ದೇವಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮೈಕ್‌ನಲ್ಲಿ ಮಾತನಾಡುತ್ತಿರುವ ಬಿಳಿ ಅಂಗಿ, ಶಾಲು ಧರಿಸಿದ ವ್ಯಕ್ತಿ
  • ಕರ್ನಾಟಕ

ನರಸೀಪುರ ತಾಲೂಕಿನ ನೂತನ ಶ್ರೀ ಮೂಗ ಮಾರಮ್ಮ ದೇವಾಲಯ ಉದ್ಘಾಟನೆಯಲ್ಲಿ ಸಿದ್ದರಾಮಯ್ಯ ಭಾಗಿ

November 19, 2026 7:03 AM
ಮೈಸೂರಿನಲ್ಲಿ ನ.26ರ ಸಂವಿಧಾನ ದಿನಾಚರಣೆಗೆ ಸುಮಾರು ಒಂದು ಲಕ್ಷ ಜನ ನಿರೀಕ್ಷೆ: ಯತೀಂದ್ರ ಸಿದ್ದರಾಮಯ್ಯ ನೇತೃತ್ವದಲ್ಲಿ ಪೂರ್ವಭಾವಿ ಸಭೆ ಮೈಸೂರಿನ ಹೋಟೆಲ್‌ನ ಸಭಾಂಗಣದಲ್ಲಿ ಯು ಆಕಾರದ ಮೇಜಿನ ಸುತ್ತ ಕುಳಿತಿರುವ ಸಚಿವರು, ಶಾಸಕರು ಮತ್ತು ಅಧಿಕಾರಿಗಳು
  • ಕರ್ನಾಟಕ

ಮೈಸೂರಿನಲ್ಲಿ ನ.26ರ ಸಂವಿಧಾನ ದಿನಾಚರಣೆಗೆ ಸುಮಾರು ಒಂದು ಲಕ್ಷ ಜನ ನಿರೀಕ್ಷೆ: ಯತೀಂದ್ರ ಸಿದ್ದರಾಮಯ್ಯ ನೇತೃತ್ವದಲ್ಲಿ ಪೂರ್ವಭಾವಿ ಸಭೆ

November 19, 2026 6:59 AM
ಆರ್‌ಟಿಇ ಕಾಯ್ದೆಯಡಿ ಪೋಷಕರ ಆದಾಯ ಮಿತಿ ₹3.5 ಲಕ್ಷದಿಂದ ₹8 ಲಕ್ಷಕ್ಕೆ ಹೆಚ್ಚಳ ಕೆಂಪು ಸೋಫಾಗಳ ಮೇಲೆ ಕುಳಿತಿರುವ ಇಬ್ಬರು, ಒಬ್ಬರು ಬಿಳಿ ಅಂಗಿಯಲ್ಲಿ ಮತ್ತೊಬ್ಬರು ಕಪ್ಪು ಜಾಕೆಟ್‌ನಲ್ಲಿ ಕಾಗದ ಹಿಡಿದು ಮಾತನಾಡುತ್ತಿದ್ದಾರೆ
  • ಕರ್ನಾಟಕ

ಆರ್‌ಟಿಇ ಕಾಯ್ದೆಯಡಿ ಪೋಷಕರ ಆದಾಯ ಮಿತಿ ₹3.5 ಲಕ್ಷದಿಂದ ₹8 ಲಕ್ಷಕ್ಕೆ ಹೆಚ್ಚಳ

November 19, 2026 6:54 AM
ಯು.ಬಿ ಸಿಟಿಯ 21 ಸ್ವತ್ತುಗಳ ಆಸ್ತಿ ತೆರಿಗೆ: ₹2.65 ಕೋಟಿ ಮೊತ್ತದ ಡಿ.ಡಿ. ಸಲ್ಲಿಸಿದ ಅಧಿಕೃತ ಲಿಕ್ವಿಡೇಟರ್ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಲಾಂಛನದ ಮುಂದೆ ಕಚೇರಿಯಲ್ಲಿ ಏಳು ಮಂದಿ ನಿಂತಿದ್ದು ಒಬ್ಬರು ದಾಖಲೆಯೊಂದನ್ನು ಸ್ವೀಕರಿಸುತ್ತಿದ್ದಾರೆ
  • ಬೆಂಗಳೂರು ನಗರ

ಯು.ಬಿ ಸಿಟಿಯ 21 ಸ್ವತ್ತುಗಳ ಆಸ್ತಿ ತೆರಿಗೆ: ₹2.65 ಕೋಟಿ ಮೊತ್ತದ ಡಿ.ಡಿ. ಸಲ್ಲಿಸಿದ ಅಧಿಕೃತ ಲಿಕ್ವಿಡೇಟರ್

November 19, 2026 2:28 AM
ಬೆಂಗಳೂರು ಕೇಂದ್ರ ನಗರ ಪಾಲಿಕೆಯಿಂದ ₹36,700 ದಂಡ: ಕಾಟನ್ ಪೇಟೆಯಲ್ಲಿ ರಸ್ತೆ ಬದಿ ತ್ಯಾಜ್ಯ ಸುರಿದ ಔಷಧಿ ಅಂಗಡಿಗೆ ₹20,000 ಬೆಂಗಳೂರಿನ ವಸಂತನಗರದಲ್ಲಿ ರಾತ್ರಿ ಕೆಂಪು ಮತ್ತು ಹಸಿರು ತ್ಯಾಜ್ಯ ತೊಟ್ಟಿಗಳ ಪಕ್ಕದ ಪಾದಚಾರಿ ಮಾರ್ಗದಲ್ಲಿ ಕಾಮಫ್ಲಾಜ್ ಸಮವಸ್ತ್ರದ ವ್ಯಕ್ತಿ ಮತ್ತು ಇತರರು
  • ಬೆಂಗಳೂರು ನಗರ

ಬೆಂಗಳೂರು ಕೇಂದ್ರ ನಗರ ಪಾಲಿಕೆಯಿಂದ ₹36,700 ದಂಡ: ಕಾಟನ್ ಪೇಟೆಯಲ್ಲಿ ರಸ್ತೆ ಬದಿ ತ್ಯಾಜ್ಯ ಸುರಿದ ಔಷಧಿ ಅಂಗಡಿಗೆ ₹20,000

November 19, 2026 2:24 AM
ಭಾಷೆಯ ಅಡೆತಡೆ ನಿವಾರಣೆ: ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಕ-ನಾದ ಫೋನೆಟಿಕ್ಸ್‌ನ ಸಾರ್ವತ್ರಿಕ ಭಾರತೀಯ ಭಾಷಾ ಕೀಬೋರ್ಡ್ ಅನಾವರಣ ಬೆಂಗಳೂರು ಟೆಕ್ ಸಮಿಟ್ ಹಿನ್ನೆಲೆ ಫಲಕಗಳ ಮುಂದೆ ವೇದಿಕೆಯಲ್ಲಿ ಸಾಲಾಗಿ ನಿಂತು ನೀಲಿ ವರದಿ ಪ್ರತಿಗಳನ್ನು ಹಿಡಿದಿರುವ ಎಂಟು ಮಂದಿ
  • ಕರ್ನಾಟಕ

ಭಾಷೆಯ ಅಡೆತಡೆ ನಿವಾರಣೆ: ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಕ-ನಾದ ಫೋನೆಟಿಕ್ಸ್‌ನ ಸಾರ್ವತ್ರಿಕ ಭಾರತೀಯ ಭಾಷಾ ಕೀಬೋರ್ಡ್ ಅನಾವರಣ

November 19, 2026 2:18 AM

ನೀವು ತಪ್ಪಿಸಿಕೊಂಡಿರಬಹುದು

ನೇರಳೆ ಮತ್ತು ಬಿಳಿ ಚಪ್ಪರದ ಅಡಿ ದೇವಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮೈಕ್‌ನಲ್ಲಿ ಮಾತನಾಡುತ್ತಿರುವ ಬಿಳಿ ಅಂಗಿ, ಶಾಲು ಧರಿಸಿದ ವ್ಯಕ್ತಿ
  • ಕರ್ನಾಟಕ

ನರಸೀಪುರ ತಾಲೂಕಿನ ನೂತನ ಶ್ರೀ ಮೂಗ ಮಾರಮ್ಮ ದೇವಾಲಯ ಉದ್ಘಾಟನೆಯಲ್ಲಿ ಸಿದ್ದರಾಮಯ್ಯ ಭಾಗಿ

The Bengaluru Live November 19, 2026 7:03 AM
ಮೈಸೂರಿನ ಹೋಟೆಲ್‌ನ ಸಭಾಂಗಣದಲ್ಲಿ ಯು ಆಕಾರದ ಮೇಜಿನ ಸುತ್ತ ಕುಳಿತಿರುವ ಸಚಿವರು, ಶಾಸಕರು ಮತ್ತು ಅಧಿಕಾರಿಗಳು
  • ಕರ್ನಾಟಕ

ಮೈಸೂರಿನಲ್ಲಿ ನ.26ರ ಸಂವಿಧಾನ ದಿನಾಚರಣೆಗೆ ಸುಮಾರು ಒಂದು ಲಕ್ಷ ಜನ ನಿರೀಕ್ಷೆ: ಯತೀಂದ್ರ ಸಿದ್ದರಾಮಯ್ಯ ನೇತೃತ್ವದಲ್ಲಿ ಪೂರ್ವಭಾವಿ ಸಭೆ

The Bengaluru Live November 19, 2026 6:59 AM
ಕೆಂಪು ಸೋಫಾಗಳ ಮೇಲೆ ಕುಳಿತಿರುವ ಇಬ್ಬರು, ಒಬ್ಬರು ಬಿಳಿ ಅಂಗಿಯಲ್ಲಿ ಮತ್ತೊಬ್ಬರು ಕಪ್ಪು ಜಾಕೆಟ್‌ನಲ್ಲಿ ಕಾಗದ ಹಿಡಿದು ಮಾತನಾಡುತ್ತಿದ್ದಾರೆ
  • ಕರ್ನಾಟಕ

ಆರ್‌ಟಿಇ ಕಾಯ್ದೆಯಡಿ ಪೋಷಕರ ಆದಾಯ ಮಿತಿ ₹3.5 ಲಕ್ಷದಿಂದ ₹8 ಲಕ್ಷಕ್ಕೆ ಹೆಚ್ಚಳ

The Bengaluru Live November 19, 2026 6:54 AM
ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಲಾಂಛನದ ಮುಂದೆ ಕಚೇರಿಯಲ್ಲಿ ಏಳು ಮಂದಿ ನಿಂತಿದ್ದು ಒಬ್ಬರು ದಾಖಲೆಯೊಂದನ್ನು ಸ್ವೀಕರಿಸುತ್ತಿದ್ದಾರೆ
  • ಬೆಂಗಳೂರು ನಗರ

ಯು.ಬಿ ಸಿಟಿಯ 21 ಸ್ವತ್ತುಗಳ ಆಸ್ತಿ ತೆರಿಗೆ: ₹2.65 ಕೋಟಿ ಮೊತ್ತದ ಡಿ.ಡಿ. ಸಲ್ಲಿಸಿದ ಅಧಿಕೃತ ಲಿಕ್ವಿಡೇಟರ್

The Bengaluru Live November 19, 2026 2:28 AM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ನರಸೀಪುರ ತಾಲೂಕಿನ ನೂತನ ಶ್ರೀ ಮೂಗ ಮಾರಮ್ಮ ದೇವಾಲಯ ಉದ್ಘಾಟನೆಯಲ್ಲಿ ಸಿದ್ದರಾಮಯ್ಯ ಭಾಗಿ
  • ಮೈಸೂರಿನಲ್ಲಿ ನ.26ರ ಸಂವಿಧಾನ ದಿನಾಚರಣೆಗೆ ಸುಮಾರು ಒಂದು ಲಕ್ಷ ಜನ ನಿರೀಕ್ಷೆ: ಯತೀಂದ್ರ ಸಿದ್ದರಾಮಯ್ಯ ನೇತೃತ್ವದಲ್ಲಿ ಪೂರ್ವಭಾವಿ ಸಭೆ
  • ಆರ್‌ಟಿಇ ಕಾಯ್ದೆಯಡಿ ಪೋಷಕರ ಆದಾಯ ಮಿತಿ ₹3.5 ಲಕ್ಷದಿಂದ ₹8 ಲಕ್ಷಕ್ಕೆ ಹೆಚ್ಚಳ
  • ಯು.ಬಿ ಸಿಟಿಯ 21 ಸ್ವತ್ತುಗಳ ಆಸ್ತಿ ತೆರಿಗೆ: ₹2.65 ಕೋಟಿ ಮೊತ್ತದ ಡಿ.ಡಿ. ಸಲ್ಲಿಸಿದ ಅಧಿಕೃತ ಲಿಕ್ವಿಡೇಟರ್
©Copyright 2025 The Bengaluru Live All rights reserved. | MoreNews by AF themes.