Home Uncategorized Tejashwi Yadav: ಮದ್ಯ ಮುಕ್ತ ಬಿಹಾರದಲ್ಲಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರೇ ಮದ್ಯ ಸೇವಿಸುತ್ತಾರೆ:...

Tejashwi Yadav: ಮದ್ಯ ಮುಕ್ತ ಬಿಹಾರದಲ್ಲಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರೇ ಮದ್ಯ ಸೇವಿಸುತ್ತಾರೆ: RJD ಎಂಎಲ್‌ಸಿ ಆರೋಪ

1
0
bengaluru

ಮದ್ಯ ಮುಕ್ತ ಬಿಹಾರದಲ್ಲಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ (Tejashwi Yadav) ಅವರೇ ಮದ್ಯಪಾನ ಮಾಡುತ್ತಾರೆ ಎಂದು ಆರ್​ಜೆಡಿ ಎಂಎಲ್​ಸಿ ರಾಂಬಾಲಿ ಸಿಂಗ್ ಚಂದ್ರವಂಶಿ ಆರೋಪಿಸಿದ್ದಾರೆ. ಖಾಸಗಿ ಸುದ್ದಿ ವಾಹಿನಿಯೊಂದರ ಕುಟುಕು ಕಾರ್ಯಾಚರಣೆಯ ವೇಳೆ ಈ ವಿಷಯ ಬಹಿರಂಗವಾಗಿದ್ದು,  ಬಿಹಾರದಲ್ಲಿ ಎಲ್ಲೆಂದರಲ್ಲಿ ಮದ್ಯ ಲಭ್ಯವಿದ್ದು, ಹೋಂ ಡೆಲಿವರಿ ಪಡೆಯಲು ಕೇವಲ ಒಂದು ಫೋನ್ ಮಾಡಿದರೆ ಸಾಕು ಎಂದಿದ್ದಾರೆ.

ಬಿಹಾರದ ಛಾಪ್ರಾದಲ್ಲಿ ನಕಲಿ ಮದ್ಯ ಸೇವಿಸಿ ಈವರೆಗೆ 60 ಮಂದಿ ಮೃತಪಟ್ಟಿದ್ದಾರೆ. ತೇಜಸ್ವಿ ಯಾದವ್ ಮದ್ಯ ಸೇವಿಸುತ್ತಾರೆ ಎಂಬ ಆರ್‌ಜೆಡಿ ಎಂಎಲ್‌ಸಿ ರಾಂಬಾಲಿ ಸಿಂಗ್ ಹೇಳಿಕೆಗೆ ಬಿಜೆಪಿಯು ನಿತೀಶ್ ಕುಮಾರ್ ಅವರಿಂದ ಉತ್ತರ ಕೇಳಿದೆ.

ಮಂಗಳವಾರ ಬಿಜೆಪಿ ರಾಜ್ಯ ಕಚೇರಿಯಲ್ಲಿ ಪಕ್ಷದ ವತಿಯಿಂದ ಸುದ್ದಿಗೋಷ್ಠಿ ನಡೆಸಲಾಯಿತು. ಈ ವೇಳೆ ರಾಜ್ಯಾಧ್ಯಕ್ಷ ವಿಜಯ್ ಕುಮಾರ್ ಸಿನ್ಹಾ ಉಪಸ್ಥಿತರಿದ್ದರು. ಬಿಹಾರದ ಉಪಮುಖ್ಯಮಂತ್ರಿ ಮದ್ಯಪಾನ ಮಾಡುತ್ತಾರೆ ಎಂದು ಆರ್‌ಜೆಡಿಯ ಎಂಎಲ್‌ಸಿ ಹೇಳಿದ್ದಾರೆ ಎಂದು ಸಾಮ್ರಾಟ್ ಚೌಧರಿ ಮಾಹಿತಿ ನೀಡಿದ್ದಾರೆ.

ಹೈಕೋರ್ಟ್ ನೇತೃತ್ವದಲ್ಲಿ ಎಸ್‌ಐಟಿ ರಚನೆಯಾಗಬೇಕು
ನಿಮ್ಮ ಉಪಮುಖ್ಯಮಂತ್ರಿ ಅವರು ಮದ್ಯಪಾನ ಮಾಡುತ್ತಾರೆ ಎಂದು ವಿಧಾನಪರಿಷತ್ ಸದಸ್ಯರೊಬ್ಬರು ಆರೋಪಿಸಿದ್ದಾರೆ ಎಂದರೆ ನಿತೀಶ್ ಕುಮಾರ್ ಅವರೇ ಉತ್ತರಿಸಬೇಕು. ಹೈಕೋರ್ಟ್ ನೇತೃತ್ವದಲ್ಲಿ ಎಸ್‌ಐಟಿ ರಚನೆಯಾಗಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

bengaluru

ಅವರ ಪಕ್ಷದ ಬಿಜೆಪಿಯ ಶಾಸಕ ನಾರಾಯಣ ಪ್ರಸಾದ್ ಕೂಡ ಸತ್ಯವನ್ನೇ ಹೇಳಿದ್ದಾರೆ. ಆ ಸತ್ಯವನ್ನೂ ಮುನ್ನೆಲೆಗೆ ತರಬೇಕು. ಬಿಹಾರದ ಉಪಮುಖ್ಯಮಂತ್ರಿ ಮದ್ಯಪಾನ ಮಾಡುತ್ತಾರೆ ಎಂಬುದು ದೊಡ್ಡ ಆರೋಪ. ಇದಕ್ಕೆ ಆರ್‌ಜೆಡಿ ಮತ್ತು ನಿತೀಶ್‌ ಕುಮಾರ್‌ ಉತ್ತರ ನೀಡಬೇಕು.

ಮತ್ತಷ್ಟು ಓದಿ: ಮದ್ಯ ನಿಷೇಧ ನೀತಿ ಬಗ್ಗೆ ಪ್ರಶ್ನಿಸಿದ ಬಿಜೆಪಿ; ಬಿಹಾರ ವಿಧಾನಸಭೆಯಲ್ಲಿ ನಿತೀಶ್ ಕುಮಾರ್ ಸಿಡಿಮಿಡಿ

ಉಪಮುಖ್ಯಮಂತ್ರಿ ತೇಜಸ್ವಿ ಯಾದವ್‌ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯವನ್ನು ನಿತೀಶ್‌ ಕುಮಾರ್‌ ಅವರು ತೋರಿಸಬಹುದೇ? ಬಿಹಾರದ ಜನತೆ ಎಲ್ಲವನ್ನೂ ಗಮನಿಸುತ್ತಿದೆ. ಆರು ವರ್ಷಗಳಲ್ಲಿ ಕೇವಲ 83 ಮದ್ಯ ಸಾಗಾಣಿಕೆದಾರರ ವಿರುದ್ಧ ಮಾತ್ರ ಕ್ರಮ ಜರುಗಿಸಿರುವುದು ಮದ್ಯ ನಿಷೇಧವೆಂಬ ನಿತೀಶ್ ಸರ್ಕಾರದ ಸಾಧನೆಯಾಗಿದೆ ಎಂದು ಹೇಳಲಾಗುತ್ತಿದೆ.

ಆರೋಪಗಳಿಗೆ ಪ್ರತಿಕ್ರಿಯಿಸಿದ ತೇಜಸ್ವಿ ಯಾದವ್, ಇದು ನಮ್ಮ ವಿರುದ್ಧ ನಡೆಯುತ್ತಿರುವ ಅಪಪ್ರಚಾರ, ನಾವು ಬಿಹಾರದ ಜನರಿಗೆ ಹೇಗೆ ಉದ್ಯೋಗ ನೀಡುತ್ತೇವೆ ಎಂಬುದನ್ನು ಅವರು ನೋಡುತ್ತಿಲ್ಲ. ಇಂದು ನಾವು ಗೃಹ ಇಲಾಖೆಗೆ 85,000 ಹುದ್ದೆಗಳನ್ನು ಘೋಷಿಸಿದ್ದೇವೆ, ಶಿಕ್ಷಣ ಇಲಾಖೆಯಲ್ಲಿ 2 ಲಕ್ಷ ಹುದ್ದೆಗಳು ಮತ್ತು ಆರೋಗ್ಯ ಕ್ಷೇತ್ರದಲ್ಲಿ 1.4 ಲಕ್ಷ ಹುದ್ದೆಗಳು ಬರಲಿವೆ. ಅವರು ನಮ್ಮನ್ನು ದೂಷಿಸಲು ಬಯಸುತ್ತಾರೆ ಎಂದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

bengaluru

LEAVE A REPLY

Please enter your comment!
Please enter your name here