Home ಬೆಂಗಳೂರು ನಗರ ನಮ್ಮ ಮೆಟ್ರೋ: ವೈಟ್‌ಫೀಲ್ಡ್-ಕೆಆರ್ ಪುರಂ ಮಾರ್ಗದಲ್ಲಿ ಮೊದಲ ಬಾರಿಗೆ ಗಂಟೆಗೆ 80 ಕಿಮೀ ವೇಗದಲ್ಲಿ ಪ್ರಾಯೋಗಿಕ...

ನಮ್ಮ ಮೆಟ್ರೋ: ವೈಟ್‌ಫೀಲ್ಡ್-ಕೆಆರ್ ಪುರಂ ಮಾರ್ಗದಲ್ಲಿ ಮೊದಲ ಬಾರಿಗೆ ಗಂಟೆಗೆ 80 ಕಿಮೀ ವೇಗದಲ್ಲಿ ಪ್ರಾಯೋಗಿಕ ಸಂಚಾರ

43
0
Test run of metro train running at 80 kmph between Whitefield and KR Puram metro stations

ಬೆಂಗಳೂರು:

ವೈಟ್‌ಫೀಲ್ಡ್ ಮತ್ತು ಕೆಆರ್ ಪುರಂ ಮೆಟ್ರೋ ನಿಲ್ದಾಣಗಳ ನಡುವೆ ಗಂಟೆಗೆ 80 ಕಿಮೀ ವೇಗದಲ್ಲಿ ಮೊದಲ ಮೆಟ್ರೋ ರೈಲಿನ ಪ್ರಾಯೋಗಿಕ ಸಂಚಾರ ಭಾನುವಾರ ಮಧ್ಯಾಹ್ನ ಸರಾಗವಾಗಿ ನಡೆಯಿತು. ಮಾರ್ಚ್ ವೇಳೆಗೆ ಈ ಪರ್ಪಲ್ ಲೈನ್ ವಿಸ್ತರಣೆಯಲ್ಲಿ ಮೆಟ್ರೋ ಕಾರ್ಯಾಚರಣೆಗಳ ಪ್ರಸ್ತಾವಿತ ಕಾರ್ಯಾರಂಭದ ಕಡೆಗೆ ಇದು ಮಹತ್ವದ ಹೆಜ್ಜೆಯಾಗಿದೆ. 

ಮೆಟ್ರೋ ಅಧಿಕಾರಿಗಳು ಟಿಎನ್ಐಇ ಜೊತೆಗೆ ಮಾತನಾಡಿ, ಈ ಗರಿಷ್ಠ ವೇಗದಲ್ಲಿ 13-ಕಿಮೀ ವ್ಯಾಪ್ತಿಯನ್ನು 12 ನಿಮಿಷಗಳಲ್ಲಿ ಕ್ರಮಿಸಲಾಯಿತು. ಬೆಳಗ್ಗೆ 11 ಗಂಟೆಗೆ ಹೈಸ್ಪೀಡ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭವಾಯಿತು ಎಂದರು.

ರೋಲಿಂಗ್ ಸ್ಟಾಕ್, ಸಿಗ್ನಲಿಂಗ್, ಟ್ರಾಕ್ಷನ್ ಮತ್ತು ಟ್ರ್ಯಾಕ್ ತಂಡಗಳು ಸೇರಿದಂತೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ನ ಸುಮಾರು 50 ಅಧಿಕಾರಿಗಳು ಈ ವೇಳೆ ರೈಲಿನಲ್ಲಿ ಇದ್ದರು.

‘ಈ ಮಾರ್ಗದಲ್ಲಿ ಬರುವ ನಿಲ್ದಾಣಗಳಲ್ಲಿ ಯಾವುದೇ ನಿಲುಗಡೆಗಳಿಲ್ಲದೆ ಇಂದು ಪ್ರಾಯೋಗಿಕ ಸಂಚಾರವನ್ನು ನಡೆಸಲಾಗಿದೆ. ಆದ್ದರಿಂದ, ನಿಜವಾದ ಕಾರ್ಯಾಚರಣೆಗಳು ಪ್ರಾರಂಭವಾದಾಗ ಇನ್ನೂ ಕೆಲವು ನಿಮಿಷಗಳನ್ನು ಸೇರಿಸಬೇಕಾಗುತ್ತದೆ. ಫೆಬ್ರುವರಿ 11 ರಂದು ಸೇವೆಯು ಪ್ರಾರಂಭವಾದ ನಂತರವೇ ಎರಡು ಅಂತಿಮ ಬಿಂದುಗಳ ನಡುವೆ ತೆಗೆದುಕೊಳ್ಳಬೇಕಾದ ನಿಖರವಾದ ಸಮಯವು ಸ್ಪಷ್ಟವಾಗುತ್ತದೆ ಎಂದು ಉನ್ನತ ಅಧಿಕಾರಿಯೊಬ್ಬರು ಟಿಎನ್ಐಇಗೆ ತಿಳಿಸಿದರು.

ಮತ್ತೊಬ್ಬ ಉನ್ನತ ಅಧಿಕಾರಿ ಮಾತನಾಡಿ, ಮೂರು ಬಾರಿ (ವೈಟ್‌ಫೀಲ್ಡ್‌ನಿಂದ ಕೆಆರ್ ಪುರಂ ಮತ್ತು ಕೆಆರ್‌ ಪುರಂನಿಂದ ವೈಟ್‌ಫೀಲ್ಡ್‌ಗೆ ಹಿಂತಿರುಗಿ) ಬೆಳಿಗ್ಗೆ 11 ರಿಂದ ಮಧ್ಯಾಹ್ನ 3.30ರವರೆ ಪ್ರಾಯೋಗಿಕ ಸಂಚಾರವನ್ನು ನಡೆಸಲಾಯಿತು. ನಿನ್ನೆ (ಶನಿವಾರ) ವರೆಗೆ ರೈಲುಗಳನ್ನು ಗಂಟೆಗೆ 25 ಕಿಮೀ ವರೆಗೆ ಮಾತ್ರ ಓಡಿಸಲಾಗುತ್ತಿತ್ತು. ನಾವು ಮೊದಲ ಟ್ರಿಪ್ ಅನ್ನು ಗಂಟೆಗೆ 40 ಕಿಮೀ ವೇಗದಲ್ಲಿ, ಎರಡನೆಯದು ಗಂಟೆಗೆ 60 ಕಿಮೀ ವೇಗದಲ್ಲಿ ಮತ್ತು ಅಂತಿಮ ಟ್ರಿಪ್ ಅನ್ನು ಗಂಟೆಗೆ 80 ಕಿಮೀ ವೇಗದಲ್ಲಿ ನಡೆಸಿದೆವು. ಈ ವೇಳೆ ನಾವು ಎಲ್ಲಾ ಸುರಕ್ಷತಾ ಕ್ರಮಗಳನ್ನು ಪರೀಕ್ಷಿಸಿದ್ದೇವೆ ಮತ್ತು ಪ್ಲಾಟ್‌ಫಾರ್ಮ್‌ಗಳಲ್ಲಿಯೂ ತಪಾಸಣೆ ನಡೆಸಿದ್ದೇವೆ’ ಎಂದು ಹೇಳಿದರು.

ಇದನ್ನೂ ಓದಿ: ಟ್ರೂಆಲ್ಟ್ ಬಯೋಎನರ್ಜಿಯ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಎಂ ನಿರಾಣಿಯನ್ನು ಕೊಂಡಾಡಿದ ಸಿಎಂ

ಬಿಎಂಆರ್‌ಸಿಎಲ್ ಈ ಮಾರ್ಗದ ಕಾರ್ಯಾಚರಣೆಯ ಅಂತಿಮ ಹಂತದಲ್ಲಿದೆ. ಮೆಟ್ರೋ ರೈಲು ಸುರಕ್ಷತೆಯ ಆಯುಕ್ತರಿಂದ ಬಹು ರೈಲು ಪ್ರಾಯೋಗಿಕ ಸಂಚಾರಗಳು, ಸೇವಾ ಪ್ರಯೋಗಗಳು ಮತ್ತು ತಪಾಸಣೆಗಳು ಸಾಲಿನಲ್ಲಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ಮಾರ್ಗದಲ್ಲಿ ಹತ್ತು ನಿಮಿಷಗಳ ಆವರ್ತನದೊಂದಿಗೆ ಐದು ರೈಲುಗಳನ್ನು ನಿಯೋಜಿಸುವ ನಿರೀಕ್ಷೆಯಿದೆ. ವೈಟ್‌ಫೀಲ್ಡ್, ಚನ್ನಸಂದ್ರ, ಕಾಡುಗೋಡಿ, ಪಟ್ಟಂದೂರು ಅಗ್ರಹಾರ, ಸದರಮಂಗಲ, ನಲ್ಲೂರಹಳ್ಳಿ, ಕುಂದಲಹಳ್ಳಿ, ಸೀತಾರಾಮ ಪಾಳ್ಯ, ಹೂಡಿ ಜಂಕ್ಷನ್, ಗರುಡಾಚಾರ್‌ಪಾಳ್ಯ, ಸರಸ್ವತಿ ನಗರ ಮತ್ತು ಕೆಆರ್ ಪುರಂ ಈ ಹೊಸ ಮಾರ್ಗದಲ್ಲಿವೆ. 

ಕೆಆರ್ ಪುರಂ ಮತ್ತು ಬೈಯಪ್ಪನಹಳ್ಳಿ ನಡುವಿನ ಉಳಿದ 2.5 ಕಿ.ಮೀ ಉದ್ದದ ಸಿವಿಲ್ ಕಾಮಗಾರಿಗಳು ಇನ್ನೂ ನಡೆಯುತ್ತಿರುವುದರಿಂದ ಸೇವೆಯನ್ನು ಪ್ರಾರಂಭಿಸಲು ಇನ್ನೂ ಕೆಲವು ತಿಂಗಳುಗಳು ಬೇಕಾಗುತ್ತವೆ.

LEAVE A REPLY

Please enter your comment!
Please enter your name here