Tiger Nail seized from Nikhil Kumaraswamy, Darshan appears not to be original: IFS officer Kumar Pushkar
ಬೆಂಗಳೂರು:
ನಿಖಿಲ್ ಕುಮಾರಸ್ವಾಮಿ ಹಾಗೂ ದರ್ಶನ್ ಅವರಿಂದ ವಶಕ್ಕೆ ಪಡೆದ ಟೈಗರ್ ಉಗುರು ಮೇಲ್ನೋಟಕ್ಕೆ ಒರ್ಜಿನಲ್ ಅಲ್ಲಾ ಅಂತ ಅನಿಸ್ತಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಕುಮಾರ ಪುಷ್ಕರ್ ಹೇಳಿದ್ದಾರೆ.
ನಿನ್ನೆ ಬೆಂಗಳೂರಿನಲ್ಲಿ 5 ಕಡೆ ಸರ್ಚ್ ಮಾಡಿದ್ದೇವೆ. ಯಾರ ಮೇಲೆದೂರು ಬಂದಿತ್ತು ಅವರ ಮನೆ ಮೇಲೆ ದಾಳಿ ಮಾಡಿ ಉಗುರನ್ನ ವಶಕ್ಕೆ ಪಡೆದುಕೊಂಡು, ಎಫ್ಎಸ್ಎಲ್ಗೆ ಕಳುಹಿಸುತ್ತೇವೆ. ಅಲ್ಲಿಂದ ವರದಿ ಬಂದ ಮೇಲೆ ನಮಗೆ ಯಾವುದು ಹುಲಿ ಉಗುರು ಎನ್ನುವುದು ಖಾತರಿಯಾಗುತ್ತೆ ಎಂದಿದ್ದಾರೆ.
ಅಲ್ಲದೇ ಹುಲಿ ಉಗುರು ಧರಿಸಿದ್ದ ಪ್ರಕರಣ ಪ್ರಕರಣ ಸಂಬಂಧಿಸಿ ಸ್ಯಾಂಡಲ್ವುಡ್ ನಟರಾದ ದರ್ಶನ್, ನಿಖಿಲ್ ಕುಮಾರಸ್ವಾಮಿ, ಜಗ್ಗೇಶ್, ರಾಕ್ ಲೈನ್ ವೆಂಕಟೇಶ್ ಮನೆಗೆ ಹೋಗಿ ವಿಚಾರಣೆ ಮಾಡಿದ್ದೇವೆ. ನಿಖಿಲ್ , ದರ್ಶನ್ ಅವರಿಂದ ವಶಕ್ಕೆ ಪಡೆದ ಉಗುರು ಮೇಲ್ನೋಟಕ್ಕೆ ಒರ್ಜಿನಲ್ ಅಲ್ಲಾ ಅಂತ ಅನಿಸ್ತಿದೆ ಎಂದಿದ್ದಾರೆ.
ಜಗ್ಗೇಶ್ ಮನೆಯಲ್ಲಿ ಸಿಕ್ಕಿರುವುದು ತುಂಬಾ ಹಳೆಯದ್ದು , ಅದನ್ನು ಕೂಡ ಪರಿಶೀಲಿಸಲಾಗ್ತಿದೆ. ಉಗುರನ್ನ ಬದಲಾಯಿಸಿರುವ ಪ್ರಕರಣ ಕಂಡುಬಂದರೆ ಸಾಕ್ಷಿನಾಶದಡಿ ಪ್ರಕರಣ ದಾಖಲಿಸುತ್ತೇವೆ. ಸಂತೋಷ್ ಕೇಸ್ ಅಲ್ಲಿ ಹೊಸ ಹುಲಿ ಉಗುರವಾಗಿತ್ತು, ಹಾಗಾಗಿ ಬೇಗ ಪತ್ತೆಯಾಯ್ತು ಎಂದಿದ್ದಾರೆ.
