Home ಸಿನಿಮಾ ‘ಬಿಗ್ ಬಾಸ್’ ಶೋನಿಂದ ‘ಟಿಕ್‌ ಟಾಕ್‌ ಸ್ಟಾರ್’ ಧನುಶ್ರೀ ಔಟ್

‘ಬಿಗ್ ಬಾಸ್’ ಶೋನಿಂದ ‘ಟಿಕ್‌ ಟಾಕ್‌ ಸ್ಟಾರ್’ ಧನುಶ್ರೀ ಔಟ್

125
0
Advertisement
bengaluru

ಬೆಂಗಳೂರು:

ಬಿಗ್ ಬಾಸ್ ಕನ್ನಡ ಸೀಸನ್ 8 ರಿಯಾಲಿಟಿ ಶೋ ಮನೆಯೊಳಗೆ ಹೋಗಿರುವ 17 ಸ್ಪರ್ಧಿಗಳಲ್ಲಿ ಟಿಕ್‌ ಟಾಕ್‌ ಸ್ಟಾರ್’ ಧನುಶ್ರೀ ಔಟ್ ಆಗಿದ್ದಾರೆ. ಕಿಚ್ಚ ಸುದೀಪ್ ಘೋಷಣೆ ಮಾಡಿದರು.

ಮೊದಲ ವಾರ ಎಲಿಮಿನೇಷನ್‌ ಬಗ್ಗೆ ತೀವ್ರ ಕುತೂಹಲ ಇರುವುದು ಸಹಜ. ಇ ಪ್ರಕ್ರಿಯೆ ನಡೆದಿದ್ದು, ಧನುಶ್ರೀ ಮನೆಯಿಂದ ಹೊರಬಂದಿದ್ದಾರೆ.

ಮೊದಲ ವಾರ ಎಲಿಮಿನೇಷನ್‌ ಪಟ್ಟಿಯಲ್ಲಿ ಶುಭಾ ಪೂಂಜಾ, ಧನುಶ್ರೀ, ರಘು ಗೌಡ, ವಿಶ್ವನಾಥ್‌ ಹಾವೇರಿ, ನಿರ್ಮಲಾ ಚೆನ್ನಪ್ಪ ಹೆಸರು ಇದ್ದವು. ಆದರೆ, ಈ ಐವರಲ್ಲಿ ಶುಭಾ ಮತ್ತು ವಿಶ್ವ ಮೊದಲೇ ಸೇಫ್ ಆಗಿದ್ದರು. ಅಂತಿಮವಾಗಿ ಉಳಿದುಕೊಂಡಿದ್ದು ರಘು, ಧನುಶ್ರೀ ಮತ್ತು ನಿರ್ಮಲಾ ಚೆನ್ನಪ್ಪ. ಇದೀಗ ಈ ಮೂವರಲ್ಲಿ ಧನುಶ್ರೀ ಎಲಿಮಿನೇಷನ್‌ ಆಗಿ, ಮನೆಯಿಂದ ಹೊರಬಿದ್ದಿದ್ದಾರೆ.

bengaluru bengaluru

ಶೋಗೆ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟವರು ಧನುಶ್ರೀ. ಆದರೆ, ಇಂದು ಅವರೇ ಮೊದಲು ಶೋನಿಂದ ಹೊರಬಂದಿದ್ದು. ನಾಮಿನೇಷನ್ನಿಂದ ತಪ್ಪಿಸಿಕೊಳ್ಳಲು ಅವರಿಗೆ ಎರಡು ಬಾರಿ ಬಿಗ್ ಬಾಸ್ ಚಾನ್ಸ್ ನೀಡಿತ್ತು. ಅಲ್ಲಿಯೂ ಫೇಲ್ ಆಗಿಬಿಟ್ಟರು ಅವರು. ಕೊನೆಗೆ ಅವರ ಪರ್ಫಾಮೆನ್ಸ್ ತುಂಬ ಕಳಪೆ ಎಂದು ತಿರ್ಮಾನಿಸಿ, ಒಂದು ದಿನ ಜೈಲಿನಲ್ಲಿಯೂ ಇರಿಸಲಾಗಿತ್ತು. ಒಂದೇ ವಾರಕ್ಕೆ ಆಟ ಮುಗಿಸಿ, ಹೊರಬಂದಿದ್ದಾರೆ.


bengaluru

LEAVE A REPLY

Please enter your comment!
Please enter your name here