Home ಬೆಂಗಳೂರು ನಗರ ಸಾರಿಗೆ ನೌಕರರ ಮುಷ್ಕರ: ನೈರುತ್ಯ ರೈಲ್ವೆಯಿಂದ ಹೆಚ್ಚುವರಿ ರೈಲು ಸಂಚಾರ

ಸಾರಿಗೆ ನೌಕರರ ಮುಷ್ಕರ: ನೈರುತ್ಯ ರೈಲ್ವೆಯಿಂದ ಹೆಚ್ಚುವರಿ ರೈಲು ಸಂಚಾರ

9
0
bengaluru

ಬೆಂಗಳೂರು:

ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಮತ್ತು ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಅನುಕೂಲವಾಗಲು ನೈರುತ್ಯ ರೈಲ್ವೆ ಗುರುವಾರದಿಂದ ಏಪ್ರಿಲ್ 14ರವರೆಗೆ ಹೆಚ್ಚುವರಿ ರೈಲಿನ ಸಂಚಾರ ನಡೆಸಲಿದೆ.

ಯುಗಾದಿ ಸಮಯದಲ್ಲಿ ಒಂದು ಊರಿನಿಂದ ಇನ್ನೊಂದು ಊರಿಗೆ ಪ್ರಯಾಣ ಮಾಡುವವರ ಸಂಖ್ಯೆ ಅಧಿಕವಾಗಿರುತ್ತದೆ. ಅಲ್ಲದೆ ಈಗ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ವೇತನ ಹೆಚ್ಚಳಕ್ಕೆ ಆಗ್ರಹಿಸಿ ಮುಷ್ಕರ ನಡೆಸುತ್ತಿದ್ದಾರೆ, ಇದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ ಈ ಕ್ರಮ ಕೈಗೊಂಡಿದೆ.

Screenshot 79
Screenshot 80
bengaluru

LEAVE A REPLY

Please enter your comment!
Please enter your name here