Home ಅಪರಾಧ ವಾಹನ ಸವಾರರ ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ಇಬ್ಬರು ಬಂಧನ

ವಾಹನ ಸವಾರರ ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ಇಬ್ಬರು ಬಂಧನ

18
0
Two arrested for extorting motorists in Bengaluru
bengaluru

ಬೆಂಗಳೂರು:

ದ್ವಿಚಕ್ರ ವಾಹನ ಸವಾರರನ್ನು ಅಡ್ಡಗಟ್ಟಿ ಚಾಕು ತೋರಿಸಿ ಹೆದರಿಸಿ ಹಣ, ಮೊಬೈಲ್ ಫೋನ್ಗಳನ್ನು ಸುಲಿಗೆ ಮಾಡುತ್ತಿದ್ದ ಇಬ್ಬರು ದರೋಡೆಕೋರರನ್ನು ಕಲಾಸಿಪಾಳ್ಯಠಾಣೆ ಪೊಲೀಸರು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ.

ಬಂಧಿತರನ್ನು ಕಾಟನ್‌ಪೇಟೆಯ ಸಿದ್ದಾರ್ಥ ನಗರದ ನಿವಾಸಿಗಳಾದ ಮೊಹಮ್ಮದ್ ಯುನೂಸ್ ಅಲಿಯಾಸ್ ಯುನೂಸ್ (35) ಮತ್ತು ಮೊಹ್ಮದ್ ಫಯಾಜ್ (20) ಎಂದು ಗುರ್ತಿಸಲಾಗಿದೆ. ಇಬ್ಬರಿಂದ ಪೊಲೀಸರು 45000 ರೂ. ನಗದು ಸೇರಿದಂತೆ ಒಟ್ಟು 7.20 ಲಕ್ಷ ರೂ. ಮೌಲ್ಯದ 4 ದ್ವಿಚಕ್ರ ವಾಹನಗಳು, 25 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ.

ಇವರಿಬ್ಬರು ಗೋವಿಂದರಾಜ ನಗರ, ಪುಟ್ಟೇನಹಳ್ಳಿ, ಎಂಐಸಿಒ ಲೇಔಟ್, ಆರ್‌ಟಿ ನಗರ, ಬ್ಯಾಟರಾಯನಪುರ, ಕೆಂಗೇರಿ, ಶಿವಾಜಿನಗರ, ಹೆಣ್ಣೂರು ಮತ್ತು ಕಲಾಸಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದರೋಡೆ ನಡೆಸಿದ್ದಾರೆಂದು ತಿಳಿದುಬಂದಿದೆ.

bengaluru
bengaluru

LEAVE A REPLY

Please enter your comment!
Please enter your name here