Home ರಾಜಕೀಯ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: ಕೋಟ ಶ್ರೀನಿವಾಸ ಪೂಜಾರಿಗೆ 259175 ಲಕ್ಷ ಮತಗಳ ಅಂತರದ ಗೆಲುವು

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: ಕೋಟ ಶ್ರೀನಿವಾಸ ಪೂಜಾರಿಗೆ 259175 ಲಕ್ಷ ಮತಗಳ ಅಂತರದ ಗೆಲುವು

46
0
Udupi-Chikkamagaluru Lok Sabha constituency: Kota Srinivas Pujari wins by a margin of 259175 lakh votes

ಉಡುಪಿ: ಬಿಜೆಪಿಯ ಭದ್ರಕೋಟೆ ಎಂದೇ ಇತ್ತೀಚಿನ ವರ್ಷಗಳಲ್ಲಿ ಕರೆಸಿಕೊಳ್ಳುತ್ತಿರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಮತ್ತೊಮ್ಮೆ ತಮ್ಮ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ತನ್ನ ಪ್ರಬಲ ಎದುರಾಳಿ ಕಾಂಗ್ರೆಸ್ ಪಕ್ಷದ ಕೆ.ಜಯಪ್ರಕಾಶ್ ಹೆಗ್ಡೆ ಅವರನ್ನು ಯಾರೂ ಸಹ ಊಹಿಸದ ರೀತಿಯಲ್ಲಿ 259175 ಮತಗಳ ಅಂತರದಿಂದ ಪರಾಭವಗೊಳಿಸಿ ಕರಾವಳಿಯಲ್ಲಿ ಬಿಜೆಪಿಯ ಪಾರಮ್ಯವನ್ನು ಮತ್ತೊಮ್ಮೆ ಸಾಬೀತು ಪಡಿಸಿದರು.

Udupi-Chikkamagaluru Lok Sabha constituency: Kota Srinivas Pujari wins by a margin of 259175 lakh votes

ಶೋಭಾ ಕರಂದ್ಲಾಜೆ ಅವರು ಬಿಜೆಪಿಯ ಕಾರ್ಯಕರ್ತರಿಂದಲೇ ಸ್ಪರ್ಧೆಗೆ ತೀವ್ರ ಪ್ರತಿರೋಧವನ್ನು ಎದುರಿಸಿದ್ದರಿಂದ ಕಟ್ಟಾ ಬಿಜೆಪಿ ಬೆಂಬಲಿಗರೂ ನಿರೀಕ್ಷೆ ಮಾಡಿರದ ರೀತಿಯಲ್ಲಿ ಕೊನೆಯ ಕ್ಷಣದಲ್ಲಿ ಟಿಕೇಟ್ ಪಡೆದ ವಿಧಾನ ಪರಿಷತ್‌ನ ಪ್ರತಿಪಕ್ಷ ನಾಯಕರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಮೊದಲ ಸುತ್ತಿನಿಂದಲೇ ಮುನ್ನಡೆ ಸಾಧಿಸುತ್ತಾ, ಪ್ರತಿ ಸುತ್ತಿ ನಲ್ಲೂ ಮುನ್ನಡೆಯನ್ನು ಹೆಚ್ಚಿಸಿಕೊಳ್ಳುತ್ತಾ 6ನೇ ಸುತ್ತಿನಲ್ಲಿ ತನ್ನ ಮುನ್ನಡೆಯನ್ನು ಒಂದು ಲಕ್ಷದ ಗಡಿ ದಾಟಿಸಿಕೊಂಡರು. ಈ ಮುನ್ನಡೆ 11ನೇ ಸುತ್ತಿನಲ್ಲಿ ಎರಡು ಲಕ್ಷ ಮತಗಳ ಅಂತರಕ್ಕೇರಿತು. ಅಂತಿಮವಾಗಿ ಅವರು ಅಂಚೆ ಮತಗಳೂ ಸೇರಿದಂತೆ ಜಯಪ್ರಕಾಶ್ ಹೆಗ್ಡೆ ಅವರನ್ನು 259175 ಮತಗಳ ಭರ್ಜರಿ ಅಂತರದಿಂದ ಪರಾಭವಗೊಳಿಸಿದರು.

ಒಟ್ಟು 19 ಸುತ್ತುಗಳ ಮತ ಎಣಿಕೆ ಹಾಗೂ ಅಂಚೆ ಮತಗಳ ಎಣಿಕೆ ಪೂರ್ಣ ಗೊಂಡಾಗ ಕೋಟ ಶ್ರೀನಿವಾಸ ಪೂಜಾರಿ ಅವರು ಅಂತಿಮವಾಗಿ 732234 ಮತಗಳನ್ನು ಪಡೆದರೆ, ಅವರ ಸಮೀಪದ ಪ್ರತಿಸ್ಪರ್ಧಿ ಜಯಪ್ರಕಾಶ್ ಹೆಗ್ಡೆ 473059  ಮತಗಳನ್ನು ಪಡೆದರು.

LEAVE A REPLY

Please enter your comment!
Please enter your name here