ಸಂಗ್ರಹ ಚಿತ್ರ: ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ.
ಬೆಂಗಳೂರು: ಯುಜಿ ಆಯುಷ್ ಕೋರ್ಸ್‌ಗಳ ಪ್ರವೇಶಕ್ಕೆ ಸ್ಟ್ರೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಕಟಿಸಿದೆ.
ಈ ಸುತ್ತಿನಲ್ಲಿ ಒಟ್ಟು 507 ಮಂದಿಗೆ ಸೀಟು ಹಂಚಿಕೆಯಾಗಿದೆ. ಇನ್ನೂ 1,394 ಸೀಟು ಹಾಗೆಯೇ ಉಳಿದಿವೆ.

ಸೀಟು ಸಿಕ್ಕ ಅಭ್ಯರ್ಥಿಗಳು ನವೆಂಬರ್ 30ರೊಳಗೆ ಶುಲ್ಕ ಪಾವತಿಸಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೆಇಎ ಈ ಹಿಂದೆ ಪ್ರಕಟಿಸಿದ್ದ ತಾತ್ಕಾಲಿಕ ಸ್ಟ್ರೇ ವೇಕೆನ್ಸಿ ಸೀಟು ಹಂಚಿಕೆಯ ನಂತರ ಈ ಅಂತಿಮ ಫಲಿತಾಂಶ ಬಂದಿದೆ. ನವೆಂಬರ್ 29ರ ಎಕ್ಸ್ ಪೋಸ್ಟ್‌ನಲ್ಲಿ ಪ್ರಾಧಿಕಾರವು ಸೀಟು ಹಂಚಿಕೆಯಾದವರ ಪಟ್ಟಿಯ ಲಿಂಕ್ ಅನ್ನೂ ಹಂಚಿಕೊಂಡಿದೆ.
ಇದನ್ನೂ ಓದಿ: ಯುಜಿ ಆಯುಷ್ 2026: ಸ್ಟ್ರೇ ವೇಕೆನ್ಸಿ ಸುತ್ತಿನ ತಾತ್ಕಾಲಿಕ ಫಲಿತಾಂಶ ಪ್ರಕಟ; ನ.29ರ ಬೆಳಿಗ್ಗೆ 10ಕ್ಕೆ ಅಂತಿಮ ಫಲಿತಾಂಶ
