uncle, his brother's son died drowning in Raichur lake
ರಾಯಚೂರು:
ಮುಳುಗಿ ಇಬ್ಬರು ಸಾವನ್ನಪ್ಪಿರುವ ಘಟನೆ ರಾಯಚೂರು ತಾಲೂಕಿನ ಕೊರ್ತಕುಂದಾ ಕೆರೆಯಲ್ಲಿ ನಡೆದಿದೆ.
ಕೆರೆಯಲ್ಲಿ ಮುಳುಗಿ ಚಿಕ್ಕಪ್ಪ, ಆತನ ಸಹೋದರರನ ಮಗ ಮೃತ ಪಟ್ಟಿದ್ದಾರೆ.
ನಡೆದಿದೆ. ಸಲೀಂ ಹುಸೇನ್ಸಾಬ್(32), ಯಾಸೀನ್ ರಫೀ(13) ಮೃತ ದುರ್ದೈವಿಗಳು.
ನಿನ್ನೆ ಸಂಜೆ ಮೃತ ಬಾಲಕ ನರೇಗಾ ಕೆಲಸಕ್ಕೆ ಚಿಕ್ಕಪ್ಪನ ಜೊತೆಯಲ್ಲಿ ಹೋಗಿದ್ದ. ಈ ವೇಳೆ ಕುಡಿಯಲು ಕೆರೆಯಿಂದ ನೀರು ತುಂಬಿಕೊಂಡು ಬರಲು ಬಂದ ಬಾಲಕ ಯಾಸೀನ್ ರಫೀ ಕಾಲು ಜಾರಿ ಕೆರೆಯಲ್ಲಿ ಬಿದ್ದಿದ್ದಾನೆ. ಬಾಲಕನ ಕಿರುಚಾಟ ಕೇಳಿ ರಕ್ಷಣೆಗೆ ಹೋಗಿದ್ದ ಚಿಕ್ಕಪ್ಪ ಸಲೀಂ ಈಜು ಬಾರದ ಹಿನ್ನೆಲೆ ಇಬ್ಬರೂ ಮೃತಪಟ್ಟಿದ್ದಾರೆ. ಯಾಪಲದಿನ್ನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
