Home Uncategorized Urfi Javed: ದುಬೈನಲ್ಲಿ ಅರೆಬೆತ್ತಲಾಗಿ ಓಡಾಡಿದ್ದಕ್ಕೆ ಉರ್ಫಿ ಜಾವೇದ್​ ಪೊಲೀಸರ ವಶಕ್ಕೆ

Urfi Javed: ದುಬೈನಲ್ಲಿ ಅರೆಬೆತ್ತಲಾಗಿ ಓಡಾಡಿದ್ದಕ್ಕೆ ಉರ್ಫಿ ಜಾವೇದ್​ ಪೊಲೀಸರ ವಶಕ್ಕೆ

1
0
bengaluru

ನಟಿ ಉರ್ಫಿ ಜಾವೇದ್ (Urfi Javed) ಅವರಿಗೆ ಇತ್ತೀಚೆಗೆ ಅರೆ ಬೆತ್ತಲಾಗಿ ಕಾಣಿಸಿಕೊಳ್ಳುವುದು ಹವ್ಯಾಸ ಆಗಿದೆ. ಚಿತ್ರ ವಿಚಿತ್ರ ಬಟ್ಟೆ ಧರಿಸಿ ಸಿಕ್ಕ ಸಿಕ್ಕಲ್ಲಿ ಅವರು ಪೋಸ್ ನೀಡುತ್ತಾರೆ. ಭಾರತದಲ್ಲಿ ಮಾತ್ರವಲ್ಲ ದುಬೈನಲ್ಲೂ (Dubai) ಇದೇ ರೀತಿ ಮಾಡಿದ್ದಾರೆ ಉರ್ಫಿ. ಇದರಿಂದ ಅವರಿಗೆ ಸಂಕಷ್ಟ ಎದುರಾಗಿದೆ. ಪೊಲೀಸರು ಉರ್ಫಿ ಅವರನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಹಲವು ಮಾಧ್ಯಮಗಳಲ್ಲಿ ವರದಿ ಆಗಿದೆ. ಆದರೆ, ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಮುಂದಿನ ಪ್ರಾಜೆಕ್ಟ್​​ನ ಕೆಲಸಕ್ಕೋಸ್ಕರ ಉರ್ಫಿ ಜಾವೇದ್ ಅವರು ಯುಎಇಗೆ ತೆರಳಿದ್ದಾರೆ. ಅಲ್ಲಿ ಕಳೆದ ಒಂದು ವಾರದಿಂದ ಸಮಯ ಕಳೆಯುತ್ತಿದ್ದಾರೆ. ಬಿಡುವಿದ್ದಾಗ ಅವರು ರೀಲ್ಸ್ ಮಾಡುತ್ತಿದ್ದಾರೆ. ಅರೆ ಬೆತ್ತಲಾಗಿ ಓಡಾಡಬಾರದು ಎಂದು ಸೂಚನೆ ಇರುವ ಪ್ರದೇಶಗಳಲ್ಲೂ ಉರ್ಫಿ ಹಾಗೆಯೇ ಓಡಾಟ ನಡೆಸಿದ್ದಾರೆ. ಹೀಗಾಗಿ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಅವರನ್ನು ಪ್ರಶ್ನೆ ಮಾಡಲಾಗುತ್ತಿದೆ.

ಉರ್ಫಿ ಜಾವೇದ್ ಅವರು ಕಿರುತೆರೆ ಮೂಲಕ ಗುರುತಿಸಿಕೊಂಡರು. ನಂತರ ಅವರು ಹಿಂದಿ ಬಿಗ್ ಬಾಸ್ ಒಟಿಟಿಗೆ ಕಾಲಿಟ್ಟರು. ಅಲ್ಲಿ ಕಸದ ಚೀಲದಿಂದ ಬಟ್ಟೆ ಮಾಡಿ ಹಾಕಿಕೊಂಡಿದ್ದರು. ಅವರಿಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಯಿತು. ಆ ಬಳಿಕ ಉರ್ಫಿ ಜಾವೇದ್ ಅವರು ಇದನ್ನೇ ಕಾಯಕ ಮಾಡಿಕೊಂಡರು. ತಮ್ಮ ಖಾಸಗಿ ಭಾಗವನ್ನು ಮಾತ್ರ ಮುಚ್ಚಿಕೊಂಡು ಪೋಸ್ ನೀಡುವುದನ್ನು ಅವರು ಮುಂದುವರಿಸಿದರು. ಇದನ್ನು ದುಬೈನಲ್ಲೂ ಮಾಡಲು ಹೋಗಿ ಸಂಕಷ್ಟ ಎದುರಿಸಿದ್ದಾರೆ.

‘ಉರ್ಫಿ ಬಟ್ಟೆ ಬಗ್ಗೆ ಯಾರಿಂದಲೂ ತಕರಾರು ಇಲ್ಲ. ಆದರೆ, ಅವರು ಶೂಟ್ ಮಾಡುತ್ತಿದ್ದ ಜಾಗದಲ್ಲಿ ಚಿತ್ರೀಕರಣಕ್ಕೆ ಅವಕಾಶ ಇರಲಿಲ್ಲ. ಈ ಕಾರಣದಿಂದ ದುಬೈ ಪೊಲೀಸರು ಉರ್ಫಿಯನ್ನು ವಶಕ್ಕೆ ಪಡೆದಿದ್ದಾರೆ’ ಎಂಬುದಾಗಿಯೂ ವರದಿ ಆಗಿದೆ. ಈ ಬಗ್ಗೆ ಉರ್ಫಿ ಅವರಿಂದಲೇ ಸ್ಪಷ್ಟನೆ ಸಿಗಬೇಕಿದೆ.

bengaluru

ಇದನ್ನೂ ಓದಿ: ತಮ್ಮ ಬಟ್ಟೆಯಿಂದ ಟ್ರೋಲ್​ಗೆ ಗುರಿಯಾದ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ: ಇದು ಉರ್ಫಿ ಜಾವೇದ್ ಪ್ರಭಾವ ಎಂದ ನೆಟ್ಟಿಗರು   

ಉರ್ಫಿ ಅವರು ಈ ಮೊದಲೂ ಕಾನೂನು ಸಮಸ್ಯೆ ಎದುರಿಸಿದ್ದರು. ಮ್ಯೂಸಿಕ್ ವಿಡಿಯೋದಲ್ಲಿ ಉರ್ಫಿ ಧರಿಸಿದ್ದ ಸೀರೆ ಬಗ್ಗೆ ಕೆಲವರು ದೂರು ನೀಡಿದ್ದರು. ಈ ವಿಚಾರದಲ್ಲಿ ಅವರು ಸಾಕಷ್ಟು ಸುದ್ದಿ ಆಗಿದ್ದರು. ಉರ್ಫಿ ಬಟ್ಟೆ ಬಗ್ಗೆ ಸಾಕಷ್ಟು ಮಂದಿ ಟ್ರೋಲ್ ಮಾಡಿದರೂ ಆ ಬಗ್ಗೆ ಅವರು ತಲೆಕೆಡಿಸಿಕೊಂಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

bengaluru

LEAVE A REPLY

Please enter your comment!
Please enter your name here