Home ಆರೋಗ್ಯ 2 ಕೋಟಿ ವ್ಯಾಕ್ಸಿನ್ ವಿತರಣೆ ಮುಗಿಸಿದ ಕರ್ನಾಟಕ

2 ಕೋಟಿ ವ್ಯಾಕ್ಸಿನ್ ವಿತರಣೆ ಮುಗಿಸಿದ ಕರ್ನಾಟಕ

49
0

ಬೆಂಗಳೂರು:

ಕೋವಿಡ್ -19 ವಿರುದ್ಧ ಲಸಿಕೆ ಕಾರ್ಯಕ್ರಮದಲ್ಲಿ ಕರ್ನಾಟಕ ಮಂಗಳವಾರ ಎರಡು ಕೋಟಿಯ ಮೈಲಿಗಲ್ಲು ದಾಟಿದೆ.

“ಕೋವಿಡ್ -19 ಲಸಿಕೆ ಅಭಿಯಾನದಲ್ಲಿ ಕರ್ನಾಟಕವು ಇಂದು 2 ಕೋಟಿ ಸಂಖ್ಯೆ ದಾಟುವ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಈ ವರ್ಷದ ಅಂತ್ಯದ ವೇಳೆಗೆ ಅರ್ಹ ಪ್ರತಿಯೊಬ್ಬ ನಾಗರಿಕರಿಗೂ ಲಸಿಕೆ ನೀಡುವುದು ನಮ್ಮ ಉದ್ದೇಶವಾಗಿದೆ ಮತ್ತು ಅದನ್ನು ಸಾಧಿಸಲು ನಾವು ಸದಾ ಸಿದ್ದವಿದ್ದೇವೆ.” ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕೂಡ ಈ ಮಾಹಿತಿಯನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

“ಕರ್ನಾಟಕ ಇಂದು 2 ಕೋಟಿ ವ್ಯಾಕ್ಸಿನ್ ವಿತರಣೆ ಮುಗಿಸಿತು. ಲಸಿಕೆ ವಿತರಣೆಯಲ್ಲಿ ಕರ್ನಾಟಕ ದಕ್ಷಿಣ ಭಾರತದಲ್ಲಿ No.1 ರಾಜ್ಯವಾಗಿದೆ. ಈ ವರ್ಷದ ಡಿಸೆಂಬರ್ 31ರ ಒಳಗೆ ಕರ್ನಾಟಕದ ಎಲ್ಲ ವಯಸ್ಕರಿಗೂ ವ್ಯಾಕ್ಸಿನ್ ಹಾಕುವ ಗುರಿಗೆ ನಾವು ಬದ್ಧರಾಗಿದ್ದೇವೆ. ಧನ್ಯವಾದಗಳು ನರೇಂದ್ರ ಮೋದಿಜಿ.” ಎಂದು ಸುಧಾಕರ್ ಟ್ವೀಟ್ ಮಾಡಿದ್ದಾರೆ.

ರಾಜ್ಯವು ಮಂಗಳವಾರ 3,709 ಹೊಸ ಕೊರೋನಾ ಕೇಸ್ ಹಾಗೂ 139 ಸಾವುಗಳನ್ನು ವರದಿ ಮಾಡಿದೆ. ಒಟ್ಟು ಸೋಂಕು ಸಂಖ್ಯೆ 28,15,029 ಮತ್ತು ಸಾವಿನ ಪ್ರಮಾಣ 34,164 ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಒಟ್ಟು ಸಂಖ್ಯೆ 1,18,592.

LEAVE A REPLY

Please enter your comment!
Please enter your name here