Home ಬೆಂಗಳೂರು ನಗರ ಯಶವಂತಪುರ ಕ್ಷೇತ್ರದಲ್ಲಿ ಜುಲೈ ಅಂತ್ಯದೊಳಗೆ ಎಲ್ಲರಿಗೂ ವ್ಯಾಕ್ಸಿನೇಷನ್: ಸೋಮಶೇಖರ್

ಯಶವಂತಪುರ ಕ್ಷೇತ್ರದಲ್ಲಿ ಜುಲೈ ಅಂತ್ಯದೊಳಗೆ ಎಲ್ಲರಿಗೂ ವ್ಯಾಕ್ಸಿನೇಷನ್: ಸೋಮಶೇಖರ್

45
0

ಬೆಂಗಳೂರು:

ಈಗಾಗಲೇ ಯಶವಂತಪುರ ಕ್ಷೇತ್ರದ ಒಂದೂವರೆ ಲಕ್ಷ ಮಂದಿಗೆ ವ್ಯಾಕ್ಸಿನೇಶನ್ ನೀಡಲಾಗಿದೆ. ನಿನ್ನೆಯಿಂದ ಪ್ರತಿ ವಾರ್ಡ್ ನಲ್ಲಿಯೂ ಪ್ರತಿ ದಿನ ತಲಾ ಒಂದೊಂದು ಸಾವಿರ ವ್ಯಾಕ್ಸಿನೇಶನ್ ನೀಡುವ ಕಾರ್ಯಕ್ಕೆ ಚಾಲನೆಯನ್ನು ನೀಡಿದ್ದೇವೆ. ಹೀಗಾಗಿ 18ರಿಂದ 45 ವರ್ಷ ಹಾಗೂ 45 ವರ್ಷ ಮೇಲ್ಪಟ್ಟವರಿಗೂ ವ್ಯಾಕ್ಸಿನೇಶನ್ ಕೊಡಲಾಗಿದ್ದು, ಜುಲೈ ಅಂತ್ಯದ ವೇಳೆಗೆ ಇಡೀ ಯಶವಂತಪುರ ಕ್ಷೇತ್ರವನ್ನು ಸಂಪೂರ್ಣ ವ್ಯಾಕ್ಸಿನೇಟೆಡ್ ಕ್ಷೇತ್ರವನ್ನಾಗಿ ಮಾಡುವ ಗುರಿಯನ್ನು ಹಾಕಿಕೊಂಡಿದ್ದೇನೆ ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ತಿಳಿಸಿದರು.

ರಾಮೋಹಳ್ಳಿ ಗ್ರಾಮ ಪಂಚಾಯಿತಿಯ ಬೀಮನಕುಪ್ಪೆ ದೇವಸ್ಥಾನ ಬಳಿ ಏರ್ಪಡಿಸಲಾಗಿದ್ದ ಆಂಬುಲೆನ್ಸ್ ಉದ್ಘಾಟನೆ, ಪಡಿತರ ವಿತರಣೆ ಕಾರ್ಯಕ್ರಮ ಹಾಗೂ ಕೊರೋನಾ ವಾರಿಯರ್ಸ್ ಗಳಿಗೆ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ಈ ನಿಟ್ಟಿನಲ್ಲಿ ನಮ್ಮ ಕೊರೋನಾ ವಾರಿಯರ್ಸ್ ಗಳ ತಂಡ, ವೈದ್ಯರು, ನರ್ಸ್ ಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು, ಬಿಜೆಪಿ ಮುಖಂಡರು, ಕಾರ್ಯಕರ್ತರು ಶ್ರಮವಹಿಸುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.

Vaccination for all by end of July in Yeshwanthpur constituency Somashekhar2

ಮೊದಲಿಗೆ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ವ್ಯಾಕ್ಸಿನೇಶನ್ ವ್ಯವಸ್ಥೆ ಮಾಡಿದರೂ ಸಹ ಕೆಲವು ಅಪಪ್ರಚಾರಗಳಿಂದ ಜನ ಮುಂದೆ ಬಂದಿರಲಿಲ್ಲ. ಈಗ ಎಲ್ಲರಿಗೂ ಅರಿವಾಗಿದ್ದು, ಜನಜಂಗುಳಿಯಾಗುತ್ತಿದೆ. ಆದರೆ, ಎಲ್ಲರಿಗೂ ವ್ಯಾಕ್ಸಿನೇಶನ್ ಕೊಡಿಸುವ ಕಾರ್ಯಕ್ಕೆ ಮುಂದಾಗಿದ್ದು, ಇನ್ನೆರೆಡು ದಿನದಲ್ಲಿ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಸುಲಲಿತ ವ್ಯಾಕ್ಸಿನೇಶನ್ ಪ್ರಕ್ರಿಯೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

ಕೊರೋನಾ ಸೋಂಕು ಸದ್ಯ ನಮ್ಮಿಂದ ದೂರವಾಗುವುದಲ್ಲ. ಹೀಗಾಗಿ ಕೊರೋನಾ ಜೊತೆ ಜೀವನ ಎಂಬ ತತ್ವವನ್ನು ನಾವು ಅರಿಯಬೇಕು. ಲಾಕ್ಡೌನ್ ನಿಂದ ಈಗ ಸೋಂಕು ಇಳಿಮುಖವಾಗಿರಬಹುದು. ಆದರೆ, ಲಾಕ್ಡೌನ್ ಪರಿಹಾರ ಎಂದು ನಾನು ನಂಬಿದವನಲ್ಲ. ಜನರಿಗೆ ಅರಿವು ಮೂಡಬೇಕು. ಲಾಕ್ಡೌನ್ ಬಳಿಕ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸೋಂಕಿನ ಲಕ್ಷಣ ಬಂದರೆ ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ಸರ್ಕಾರದ ಜೊತೆಗೆ ಕೈಜೋಡಿಸಬೇಕು ಎಂದು ಸಚಿವರಾದ ಸೋಮಶೇಖರ್ ಕಿವಿಮಾತು ಹೇಳಿದರು.

Vaccination for all by end of July in Yeshwanthpur constituency Somashekhar3

ವೈದ್ಯರ ನಡಿಗೆ ಹಳ್ಳಿ ಕಡೆಗೆ ಎಂಬ ಕಾರ್ಯಕ್ರಮದ ಉದ್ದೇಶವೇ ಹಳ್ಳಿಗಳಲ್ಲಿ ಕೊರೋನಾ ಸೋಂಕಿನ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವುದಾಗಿದೆ. ಅವರಲ್ಲಿರುವ ತಪ್ಪು ಕಲ್ಪನೆ ದೂರ ಮಾಡಿ, ಸೋಂಕು ಕಾಣಿಸಿಕೊಂಡ ತಕ್ಷಣ ಚಿಕಿತ್ಸೆ ಪಡೆಯುವಂತೆ ಮಾಡುವ ಉದ್ದೇಶವನ್ನು ಹೊಂದಿದ್ದು, ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ 17 ಗ್ರಾಮ ಪಂಚಾಯಿತಿಯ ಬಹುತೇಕ ಕಡೆ ವೈದ್ಯರು ಭೇಟಿ ಕೊಟ್ಟಿದ್ದಾರೆ. ವೈದ್ಯರು ಭೇಟಿ ಕೊಟ್ಟಾಗ ಜನತೆ ಸಹಕರಿಸಬೇಕು ಎಂದು

ರಾಜ್ಯದಲ್ಲಿ ಎರಡನೇ ಅಲೆ ಪ್ರಭಾವ ಹೆಚ್ಚಿದ್ದು, ಎಲ್ಲ ಕಡೆಯೂ ಸಾವು-ನೋವುಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿತ್ತು. ಬೆಂಗಳೂರಿನಲ್ಲಿ ದಿನವೊಂದಕ್ಕೆ 30-35 ಸಾವಿರ ಬರುತ್ತಿದ್ದ ಪ್ರಕರಣಗಳು ಈಗ ಎರಡು-ಎರಡೂವರೆ ಸಾವಿರಕ್ಕೆ ಬಂದು ನಿಂತಿದೆ. ಸಾವುಗಳ ಪ್ರಮಾಣದಲ್ಲಿಯೂ ಸ್ವಲ್ಪ ಕಡಿಮೆಯಾಗಿದೆ. ಯಶವಂತಪುರ ಕ್ಷೇತ್ರದಲ್ಲಿಯೇ ಸುಮಾರು ಏಳೂವರೆ ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿತ್ತು. ಅದರಲ್ಲಿ ಆರೂವರೆ ಸಾವಿರಕ್ಕೂ ಮೇಲ್ಪಟ್ಟು ಗುಣಮುಖರಾಗಿದ್ದಾರೆ. ಇದಕ್ಕೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದಿರುವುದೇ ಕಾರಣ ಎಂದು ಸಚಿವರು ತಿಳಿಸಿದರು.

Vaccination for all by end of July in Yeshwanthpur constituency Somashekhar4

ಬಹಳಷ್ಟು ಮಂದಿ ತಮಗೆ ಪಾಸಿಟಿವ್ ಬಂದಿರುವುದನ್ನು ಹೇಳಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಆದರೆ, ಪ್ರಪಂಚಕ್ಕೆ ಕೊರೋನಾ ಬಂದಿರುವುದರಿಂದ ಯಾರೂ ಆತಂಕಗೊಳ್ಳುವ, ಮುಜುಗರ ಪಡುವ ಅಗತ್ಯವಿಲ್ಲ. ಸೋಂಕಿನ ಲಕ್ಷಣಗಳು ಕಂಡುಬಂದ ಕೂಡಲೇ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದು, ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕು. ಒಂದು ವೇಳೆ ಪಾಸಿಟಿವ್ ಬಂದರೆ ಸೂಕ್ತ ಚಿಕಿತ್ಸೆ ಪಡೆಯಬೇಕು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು “ವೈದ್ಯರ ನಡಿಗೆ ಹಳ್ಳಿ ಕಡೆಗೆ” ಎಂಬ ಕಾರ್ಯಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಇವರಲ್ಲಿ ವೈದ್ಯರು, ನರ್ಸ್ ಗಳು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರು ಇರುತ್ತಾರೆ. ಇನ್ನು ಗ್ರಾಮೀಣ ಭಾಗದಲ್ಲಿ ಸಮಸ್ಯೆಯಾಗಬಾರದು ಎಂಬ ನಿಟ್ಟಿನಲ್ಲಿ ಇವರ ಜೊತೆ ಪೊಲೀಸ್ ಕಾನ್ಸ್ ಸ್ಟೇಬಲ್ ಒಬ್ಬರನ್ನು ಸಹ ನಿಯೋಜಿಸಲಾಗಿದೆ ಎಂದು ಸಚಿವರಾದ ಸೋಮಶೇಖರ್ ಅವರು ತಿಳಿಸಿದರು.

ಪಾಸಿಟಿವ್ ಬಂದವರಿಗೆ ಜನಸೇವಾ ಕೇಂದ್ರವನ್ನು ತೆರೆಯಲಾಗಿದ್ದು, ಅಲ್ಲಿ ಈಗಾಗಲೇ 300ಕ್ಕೂ ಅಧಿಕ ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 370 ಹಾಸಿಗೆಯುಳ್ಳ ಜ್ಞಾನ ಭಾರತಿ ಕೋವಿಡ್ ಕೇರ್ ಸೆಂಟರ್ ನಲ್ಲಿ ಸಹ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇನ್ನು ಕೆಂಗೇರಿ ಹಾಗೂ ಹೇರೋಹಳ್ಳಿಯಲ್ಲಿ ಟ್ರಯಾಜ್ ಸೆಂಟರ್ ಅನ್ನು ತೆರೆಯಲಾಗಿದ್ದು, ಅಲ್ಲಿ ಸೋಂಕಿತರು ಸೂಕ್ತ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ಸಚಿವರಾದ ಸೋಮಶೇಖರ್ ಅವರು ತಿಳಿಸಿದರು.

1 ಲಕ್ಷ ರೂ. ವೈಯಕ್ತಿಕ ನೆರವು ಅತ್ಯುತ್ತಮ ಕಾರ್ಯ; ನಿರಂಜನಾಂದಪುರಿ ಮಹಾಸ್ವಾಮೀಜಿ

ಮಹಾಸಂಸ್ಥಾನ ಕಾಗಿನೆಲೆ ಪೀಠದ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ನಿರಂಜನಾಂದಪುರಿ ಮಹಾಸ್ವಾಮೀಜಿಯವರು ಮಾತನಾಡಿ, ಕೊರೋನಾ ಬಗ್ಗೆ ಜನರಲ್ಲಿ ಜಾಗೃತಿ ಅಗತ್ಯ. ಸ್ವಲ್ಪ ಎಚ್ಚರ ತಪ್ಪಿದರೂ ಸೋಂಕನ್ನು ಸ್ವಯಂ ನಾವೇ ತಗುಲಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಅತಿ ಮುಖ್ಯವಾಗಿದೆ. ಯಶವಂತಪುರ ಕ್ಷೇತ್ರದಲ್ಲಿ ಮಾದರಿ ಕಾರ್ಯಕ್ರಮವನ್ನು ಕ್ಷೇತ್ರದ ಶಾಸಕರು, ಸಚಿವರಾದ ಸೋಮಶೇಖರ್ ಅವರು ಮಾಡುತ್ತಿದ್ದಾರೆ. ಪ್ರತಿಯೊಬ್ಬರನ್ನೂ ಮಾನವೀಯ ನೆಲೆಯಲ್ಲಿ ನೋಡುವ ಮೂಲಕ ಮಾದರಿಯಾಗಿದ್ದಾರೆ. ಅವರು ಕೋವಿಡ್ ನಿಂದ ಮೃತಪಟ್ಟ ಆರ್ಥಿಕವಾಗಿ ಹಿಂದುಳಿದ ಕುಟುಂಬದವರಿಗೆ 1 ಲಕ್ಷ ರೂ. ವೈಯಕ್ತಿಕ ನೆರವು ನೀಡುತ್ತಿರುವುದು ಅತ್ಯುತ್ತಮ ಕಾರ್ಯವಾಗಿದೆ ಎಂದು ತಿಳಿಸಿದರು.

Vaccination for all by end of July in Yeshwanthpur constituency Somashekhar

ಜನತೆಗೆ ಹೆಮ್ಮೆ ತರುವ ಜನನಾಯಕ; ಶ್ರೀ ಈಶ್ವರಾನಂದಪುರಿ ಸ್ವಾಮೀಜಿ

ಕನಕಗುರು ಪೀಠದ ಶಾಖಾ ಮಠ ಹೊಸದುರ್ಗದ ಪರಮಪೂಜ್ಯ ವಸಂತಪುರ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿಯವರು ಮಾತನಾಡಿ, ಇಡೀ ಜಗತ್ತು ಕೊರೋನಾ ಸೋಂಕಿಗೆ ಒಳಗಾಗಿದೆ. ದೊಡ್ಡ ದೊಡ್ಡ ದೇಶಗಳು ಸಹ ಪರಿತಪಿಸಿವೆ. ನಮ್ಮ ದೇಶದಲ್ಲೂ ಸಹ ಸಾಕಷ್ಟು ಹಾನಿಯನ್ನು ಮಾಡಿದೆ. ಸರ್ಕಾರ ಸಹ ಬಹಳಷ್ಟು ಕ್ರಮಗಳನ್ನು ಕೈಗೊಂಡಿದೆ. ಇದರ ಜೊತೆಗೆ ಮಾನವೀಯತೆ ನೆಲೆಯಲ್ಲಿ ಜನ ನೋಡಬೇಕಿದೆ. ಈ ಕೆಲಸವನ್ನು ಒಬ್ಬ ಜನಪ್ರತಿನಿಧಿಯಾಗಿ ಸಚಿವರಾದ ಸೋಮಶೇಖರ್ ಅವರು ಮಾಡುತ್ತಿರುವುದು ಜನತೆಗೆ ಬಹಳ ಹೆಮ್ಮೆ ತರುವಂತಹ ಸಂಗತಿ ಎಂದು ಹೇಳಿದರು.

ಸೋಮಶೇಖರ್ ಮಾದರಿ ಅನುಸರಿಸಿದರೆ ರಾಜ್ಯ ಕೊರೋನಾ ಮುಕ್ತ; ಈಶ್ವರಾನಂದಪುರಿ ಸ್ವಾಮೀಜಿ

ಯಶವಂತಪುರ ಕ್ಷೇತ್ರದ ಜನರ ಸಮಸ್ಯೆಗೆ ಸ್ಥಳೀಯ ಶಾಸಕರಾಗಿ ಸೋಮಶೇಖರ್ ಅವರು ಮಾಡುತ್ತಿರುವ ಕಾರ್ಯ ಶ್ಲಾಘನೀಯ. ಅವರು ಎಲ್ಲರಿಗೂ ಮಾದರಿಯಾಗಿ ನಿಂತಿದ್ದಾರೆ. ಸಚಿವ ಸೋಮಶೇಖರ್ ಅವರ ಮಾದರಿಯಲ್ಲಿ ಉಳಿದ ಶಾಸಕರು, ಸಚಿವರು ನಡೆದುಕೊಂಡರೆ ಇಡೀ ರಾಜ್ಯ ಕೊರೋನಾ ಮುಕ್ತವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇದೇ ಸಂದರ್ಭದಲ್ಲಿ ಜನತೆ ಸಹ ಸಹಕರಿಸಬೇಕಿದ್ದು, ಭಯ ಪಡದೆ, ಸೋಂಕು ಲಕ್ಷಣ ಕಂಡುಬಂದರೆ ಟೆಸ್ಟ್ ಮಾಡಿಸಿಕೊಳ್ಳಿ. ಸೋಂಕು ಕಂಡುಬಂದರೆ ತಕ್ಷಣ ಚಿಕಿತ್ಸೆ ಪಡೆದು ಗುಣಮುಖರಾಗಬೇಕು. ಒಂದು ವೇಳೆ ನಿಮ್ಮ ನೆರೆಹೊರೆಯವರಿಗೆ ಕೊರೋನಾ ಸೋಂಕು ತಗುಲಿದರೆ ಅವರನ್ನು ನಿಕೃಷ್ಟವಾಗಿ ಕಾಣುವುದು ಬೇಡ. ಅವರಿಗೆ ಸಾಧ್ಯವಾದಷ್ಟು ಸಹಕಾರ ನೀಡಿ, ಸೂಕ್ತ ಮಾರ್ಗದರ್ಶನ ನೀಡಿ, ಮಾನವೀಯತೆ ಮೆರೆಯಿರಿ ಎಂದು ಶ್ರೀ ಈಶ್ವರಾನಂದಪುರಿ ಸ್ವಾಮೀಜಿಯವರು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ತಾಲೂಕು ಉಪ ವಿಭಾಗಾಧಿಕಾರಿ ಡಾ. ಶಿವಣ್ಣ, ಸ್ಥಳೀಯ ಮುಖಂಡರಾದ ಬಿ.ಎಚ್. ಮಹೇಶ್ ಸೇರಿದಂತೆ ಇತರ ಪ್ರಮುಖರು ಹಾಜರಿದ್ದರು.

ಪಡಿತರ, ವೈದ್ಯಕೀಯ ಕಿಟ್ ವಿತರಣೆಗೆ ಚಾಲನೆ

ಹೆಮ್ಮಿಗೆಪುರ ವಾರ್ಡ್ ಸಂಖ್ಯೆ 198 ಬಿಎಚ್ಇಎಲ್ ಬಡಾವಣೆಯ ಸಾಯಿಮಂದಿರದ ಬಳಿ ಕೋವಿಡ್ ಸೋಂಕಿತ ಕುಟುಂಬಗಳಿಗೆ ಪಡಿತರ ಕಿಟ್, ವೈದ್ಯಕೀಯ ಕಿಟ್ ವಿತರಣೆ ಹಾಗೂ ಕಗಲಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗವಿಕಲರಿಗೆ ಪಡಿತರ ವಿತರಣೆಗೆ ಸಚಿವರಾದ ಎಸ್.ಟಿ.ಸೋಮಶೇಖರ್ ಚಾಲನೆ ನೀಡಿದರು.

LEAVE A REPLY

Please enter your comment!
Please enter your name here