ಬೆಂಗಳೂರು: ಹಿಂದುಪುರ ಪ್ರದೇಶದ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ, ದಕ್ಷಿಣ ಪಶ್ಚಿಮ ರೈಲ್ವೆಯು ಯಶವಂತಪುರ–ಕಾಚಿಗುಡ–ಯಶವಂತಪುರ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಹಿಂದುಪುರ ರೈಲು ನಿಲ್ದಾಣದಲ್ಲಿ ಎರಡು ನಿಮಿಷಗಳ ನಿಲುಗಡೆ ನೀಡಲು ರೈಲ್ವೆ ಮಂಡಳಿಯಿಂದ ಅನುಮೋದನೆ ದೊರೆತಿದೆ. ಈ ನಿಲುಗಡೆ ಡಿಸೆಂಬರ್ 27, 2025ರಿಂದ ಪ್ರಯೋಗಾತ್ಮಕವಾಗಿ ಜಾರಿಯಾಗಲಿದೆ.
ಹಿಂದುಪುರ ನಿಲ್ದಾಣದಲ್ಲಿ ರೈಲಿನ ಆಗಮನ–ಪ್ರಸ್ಥಾನ ಸಮಯ
ರೈಲ್ವೆ ಪ್ರಕಟಣೆಯಂತೆ, ಹಿಂದುಪುರದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಸಮಯ ಪಟ್ಟಿ ಹೀಗಿದೆ:
- ರೈಲು ಸಂಖ್ಯೆ 20703 (ಕಾಚಿಗುಡ–ಯಶವಂತಪುರ ವಂದೇ ಭಾರತ್ ಎಕ್ಸ್ಪ್ರೆಸ್)
➤ ಆಗಮನ: ಮಧ್ಯಾಹ್ನ 12:08
➤ ಪ್ರಸ್ಥಾನ: ಮಧ್ಯಾಹ್ನ 12:10 - ರೈಲು ಸಂಖ್ಯೆ 20704 (ಯಶವಂತಪುರ–ಕಾಚಿಗುಡ ವಂದೇ ಭಾರತ್ ಎಕ್ಸ್ಪ್ರೆಸ್)
➤ ಆಗಮನ: ಮಧ್ಯಾಹ್ನ 03:48
➤ ಪ್ರಸ್ಥಾನ: ಮಧ್ಯಾಹ್ನ 03:50
ಈ ಹೊಸ ನಿಲುಗಡೆಯಿಂದ ಹಿಂದುಪುರ ಹಾಗೂ ಸುತ್ತಮುತ್ತಲಿನ ಪ್ರದೇಶದ ಪ್ರಯಾಣಿಕರಿಗೆ ವೇಗದ ಮತ್ತು ಸುಲಭ ಸಂಚಾರ ಸೌಲಭ್ಯ ದೊರೆಯಲಿದ್ದು, ಈ ಭಾಗದ ರೈಲು ಸಂಪರ್ಕವನ್ನು ಇನ್ನಷ್ಟು ಬಲಪಡಿಸುವ ನಿರೀಕ್ಷೆ ಇದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವವರು ಡಾ. ಮಂಜುನಾಥ್ ಕನಮಾಡಿ, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ, ದಕ್ಷಿಣ ಪಶ್ಚಿಮ ರೈಲ್ವೆ, ಹುಬ್ಬಳ್ಳಿ.
