ವರ್ತೂರು–ಗುಂಜೂರು ರಸ್ತೆಯಲ್ಲಿ ಶಾಲಾ ಬಸ್ಗಳು ಹೊರಡುವ ವೇಳೆ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ
ಬೆಂಗಳೂರು: ವೈಟ್ ಟಾಪಿಂಗ್ ಕಾಮಗಾರಿಗಾಗಿ ಗುಂಜೂರು ಕ್ಲಬ್ ರಸ್ತೆ ಮುಚ್ಚಿರುವ ಹಿನ್ನೆಲೆಯಲ್ಲಿ, ಶಾಲಾ ಬಸ್ಗಳು ಶಾಲೆಗಳಿಂದ ಹೊರಡುವ ಸಮಯದಲ್ಲಿ ವರ್ತೂರು–ಗುಂಜೂರು ರಸ್ತೆಯಲ್ಲಿ (ಎಸ್ಎಚ್–35) ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗುವುದು ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.
ರಸ್ತೆಯ ಹದಗೆಟ್ಟ ಸ್ಥಿತಿ ಮತ್ತು ಗುಂಜೂರು ಕ್ಲಬ್ ರಸ್ತೆ ಮುಚ್ಚಿರುವುದರಿಂದ ಈ ಮಾರ್ಗದಲ್ಲಿ ಸಂಚಾರ ದಟ್ಟಣೆ ಹಾಗೂ ನಿಧಾನಗತಿಯ ವಾಹನ ಸಂಚಾರ ನಿರೀಕ್ಷಿಸಲಾಗಿದೆ ಎಂದು ಎಕ್ಸ್ನಲ್ಲಿ ಪ್ರಕಟಿಸಿದ ಸಂಚಾರ ಸಲಹೆಯಲ್ಲಿ ಪೊಲೀಸರು ತಿಳಿಸಿದ್ದಾರೆ.
ಸುಗಮ ಸಂಚಾರಕ್ಕೆ ನೆರವಾಗಲು ಹೆಚ್ಚುವರಿ ಸಂಚಾರ ಪೊಲೀಸರನ್ನು ನಿಯೋಜಿಸಲಾಗಿದೆ. ಶಾಲಾ ಬಸ್ಗಳು ಶಾಲೆಗಳಿಂದ ಹೊರಡುವ ಅವಧಿಯಲ್ಲಿ ಈ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಜಾರಿಯಾಗಲಿದೆ ಎಂದು ಸಲಹೆಯಲ್ಲಿ ತಿಳಿಸಲಾಗಿದೆ.
