ಬೆಂಗಳೂರು:
ಕರ್ನಾಟಕ ಲಾಕ್ಡೌನ್ನ ಮೊದಲ ದಿನವಾದ ಇಂದು ಸೋಮವಾರದಂದು, ರಾಜ್ಯ ಪೊಲೀಸರು ದಿನಸಿ ಮತ್ತು ಇತರ ಅಗತ್ಯ ವಸ್ತುಗಳ ಖರೀದಿಗೆ ವಾಹನ ಬಳಸಬಹುದು, ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ನಿಮ್ಮ ಹತ್ತಿರದ ಸ್ಥಳಗಳಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಿ. ಅಗತ್ಯವಸ್ತು ಖರೀದಿಗೆ ಹಳ್ಳಿಗಳಿಂದ ಪಟ್ಟಣಕ್ಕೆ ಬರಬಹುದು. ತರಕಾರಿ, ಅಥವಾ ಅಗತ್ಯ ವಸ್ತುಗಳ ಖರೀದಿ ಮಾಡಲು ಮನೆ ಸಮೀಪದಲ್ಲಿ ವಾಹನ ಬಳಕೆ ಮಾಡಲು ನಿರ್ಬಂಧವಿಲ್ಲ. ಆದರೆ ಯಾರೂ ಸಹ ಈ ಅವಕಾಶವನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಅವರು ತಿಳಿಸಿದ್ದಾರೆ. ಈ ಮೂಲಕ ನೀಡಿರುವ ಅವಕಾಶವನ್ನು ದುರ್ಬಳಕೆ ಮಾಡಿಕೊಂಡರೆ ಸಮಸ್ಯೆ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ರವಾನಿಸಿದ್ದಾರೆ.