Home ಕರ್ನಾಟಕ ಕನ್ನಡದ ಹಿರಿಯ ಪತ್ರಕರ್ತ ವಸಂತ ನಾಡಿಗೇರ್ ವಿಧಿವಶ

ಕನ್ನಡದ ಹಿರಿಯ ಪತ್ರಕರ್ತ ವಸಂತ ನಾಡಿಗೇರ್ ವಿಧಿವಶ

34
0

ಬೆಂಗಳೂರು: ತೀವ್ರ ಹೃದಯಾಘಾತದಿಂದ ಕನ್ನಡದ ಹಿರಿಯ ಪತ್ರಕರ್ತ ವಸಂತ ನಾಡಿಗೇರ್ ವಿಧಿವಶರಾಗಿದ್ದಾರೆ.

ಮೂರುವರೆ ದಶಕದಿಂದ ಕನ್ನಡ ಪತ್ರಿಕೋದ್ಯಮದಲ್ಲಿ ಕೆಲಸ ಮಾಡುತ್ತಿದ್ದ ವಸಂತ್​ ನಾಡಿಗೇರ ಅವರು ಪನ್​ ಹೆಡ್ಡಿಂಗ್​ಗಳ ಮೂಲಕವೇ ಜನಪ್ರಿಯರಾಗಿದ್ದರು. ವಸಂತ ನಾಡಿಗೇರ ಅವರು ಕನ್ನಡ ಪ್ರಭ, ವಿಜಯಕರ್ನಾಟಕ, ವಿಶ್ವವಾಣಿ ನಂತರ ಎರಡು ವರ್ಷಗಳಿಂದ ಸಂಯುಕ್ತ ಕರ್ನಾಟಕ ಸಂಪಾದರಕಾರಗಿ ಕಾರ್ಯ ನಿರ್ವಹಿಸಿದ್ದರು. ಇವರಿಗೆ ಪತ್ನಿ, ಪುತ್ರಿ ಹಾಗೂ ಪುತ್ರ ಇದ್ದಾರೆ.

ವಸಂತ ನಾಡಿಗೇರ ಅವರು ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನವರು. ಇಲ್ಲಿಯೇ ಪ್ರಾಥಮಿಕ ಶಿಕ್ಷಣ, ಪೌಢ ಶಿಕ್ಷಣ ಪಡೆದು ಧಾರವಾಡದಲ್ಲಿ ಬಿಎಸ್​ಸಿ, ಎಂಎಸ್​ಸಿ ಪದವಿ ಪಡೆದರು. ಎಂಬತ್ತರ ದಶಕದಲ್ಲಿ ಸಂಯುಕ್ತ ಕರ್ನಾಟಕದಿಂದ ವೃತ್ತಿ ಜೀವನ ಆರಂಭಿಸಿದ ವಸಂತ ನಾಡಿಗೇರ ಅವರು ಕನ್ನಡಪ್ರಭ, ವಿಜಯಕರ್ನಾಟಕ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ವಿಜಯ ಕರ್ನಾಟಕದಲ್ಲಿದ್ದಾಗ ಅವರ ಬಡಿಗೇರ್​ ಹಾಗೂ ನಾಡಿಗೇರ್​ ಎನ್ನುವ ಹಾಸ್ಯ ಅಂಕಣವೂ ಜನಪ್ರೀಯವಾಗಿತ್ತು.

LEAVE A REPLY

Please enter your comment!
Please enter your name here