Home ಬೆಂಗಳೂರು ನಗರ ಮಲ್ಲೇಶ್ವರದಲ್ಲಿ ವರ್ಚುಯಲ್‌ ಉದೋಗ್ಯ ಮೇಳ;‌ 130 ಅಭ್ಯರ್ಥಿಗಳಿಗೆ ವಿವಿಧ ಕಂಪನಿಗಳಲ್ಲಿ ಉದ್ಯೋಗ

ಮಲ್ಲೇಶ್ವರದಲ್ಲಿ ವರ್ಚುಯಲ್‌ ಉದೋಗ್ಯ ಮೇಳ;‌ 130 ಅಭ್ಯರ್ಥಿಗಳಿಗೆ ವಿವಿಧ ಕಂಪನಿಗಳಲ್ಲಿ ಉದ್ಯೋಗ

39
0
Advertisement
bengaluru

ಬೆಂಗಳೂರು:

ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ನೇತೃತ್ವದಲ್ಲಿ ಮಲ್ಲೇಶ್ವರ ಕ್ಷೇತ್ರದವರಿಗಾಗಿ ರಾಜ್ಯ ಕೌಶಲ ಅಭಿವೃದ್ಧಿ ನಿಗಮ (ಕೆಎಸ್‌ಡಿಸಿ) ವತಿಯಿಂದ ವರ್ಚುಯಲ್‌ ಉದ್ಯೋಗ ಮೇಳವನ್ನು ಬುಧವಾರ ಆಯೋಜಿಸಲಾಗಿತ್ತು.

ವಿವಿಧ ಕ್ಷೇತ್ರಗಳ ಪ್ರತಿಷ್ಠಿತ 17 ಕಂಪನಿಗಳು ಮೇಳದಲ್ಲಿ ಭಾಗಿಯಾಗಿದ್ದವಲ್ಲದೆ, 130 ಅಭ್ಯರ್ಥಿಗಳು ವಿವಿಧೆಡೆ ಉದ್ಯೋಗಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಡಿಸಿಎಂ ಡಾ.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಈ ವರ್ಚುವಲ್ ಜಾಬ್ ಫೇರ್‌ನಲ್ಲಿ, 1800 ಅಭ್ಯರ್ಥಿಗಳು ತಮ್ಮ ಎನ್‌ರೋಲ್‌ ಮಾಡಿಕೊಂಡಿದ್ದರು. ಆರಂಭಿಕ ಕೌನ್ಸೆಲಿಂಗ್ ನಂತರ 825 ಅಭ್ಯರ್ಥಿಗಳನ್ನು ಮೇಲಿನ ಉದ್ಯೋಗದಾತರ ಅಗತ್ಯಕ್ಕೆ ಅನುಗುಣವಾಗಿ ಶಾರ್ಟ್‌ಲಿಸ್ಟ್ ಮಾಡಲಾಗಿದೆ. ಮೊದಲ ವರ್ಚುವಲ್ ಉದ್ಯೋಗ ಮೇಳಕ್ಕೆ 450 ಅಭ್ಯರ್ಥಿಗಳನ್ನು ಆಹ್ವಾನಿಸಲಾಗಿದ್ದು, ಇಂದಿನ ವರ್ಚುವಲ್ ಉದ್ಯೋಗ ಮೇಳದಲ್ಲಿ 320 ಅಭ್ಯರ್ಥಿಗಳು ಭಾಗವಹಿಸಿದ್ದರು. ಸಂದರ್ಶನದ ನಂತರ 130 ಅಭ್ಯರ್ಥಿಗಳನ್ನು ಉದ್ಯೋಗದಾತರು ಶಾರ್ಟ್‌ಲಿಸ್ಟ್ ಮಾಡಿಕೊಂಡಿದ್ದಾರೆ.

bengaluru bengaluru

ಉಳಿದ ಅಭ್ಯರ್ಥಿಗಳನ್ನು ಸಂದರ್ಶಿಸಲು ಎರಡು ವರ್ಚುವಲ್ ಜಾಬ್ ಫೇರ್‌ಗಳನ್ನು ಮುಂದಿನ ವಾರ ಆಯೋಜಿಸಲಾಗುವುದು. ಕ್ವೆಸ್ ಕಾರ್ಪ್, ಫ್ಲಿಪ್‌ಕಾರ್ಟ್, ಲ್ಯಾಂಡ್‌ಮಾರ್ಕ್‌, ಅರವಿಂದ್ ಲಿಮಿಟೆಡ್, ರಿಲಯನ್ಸ್ ಜಿಯೋ, ರಿಲಯನ್ಸ್ ಸ್ಮಾರ್ಟ್, ಟೀಮ್‌ಲೀಸ್, ಎಲ್ಕಾಮಿನೋ ಸಾಫ್ಟ್‌ವೇರ್, ಪೋರ್ಟಿಯಾ ಮೆಡಿಕಲ್, ಏಷ್ಯನ್ ಪೇಂಟ್ಸ್, ಕ್ವಿಕ್‌ ಎಕ್ಸ್‌ಪ್ರೆಸ್‌, ಲಾಗ್‌ ಸ್ಕಿಮ್ ಸ್ಟ್ಯಾಫಿಂಗ್ ಸರ್ವೀಸಸ್ ಲಿಮಿಟೆಡ್, ನವಾಟಾ ರೋಡ್‌ ಟ್ರಾನ್ಸ್‌ಪೋರ್ಟ್‌, ವರ್ಕ್‌ ಇಂಡಿಯಾ, ಟಿಕೋನಾ, ಟೀಮ್‌ ರೋಲ್, ಸಿಗ್ನೋಡ್ರೈವ್ ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಘಿಯಾಗಿದ್ದವು ಎಂದು ಅವರು ಮಾಹಿತಿ ನೀಡಿದ್ದಾರೆ.


bengaluru

LEAVE A REPLY

Please enter your comment!
Please enter your name here