ಬೆಂಗಳೂರು:
ಮಂಗಳೂರು ಹಾಗೂ ಬೆಂಗಳೂರು ನಡುವಿನ ವಿಸ್ಟಾಡೋಮ್ ವಿಶೇಷ ರೈಲು ಪ್ರಯಾಣಕ್ಕೆ ಸಂಸದ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಇಂದು ಚಾಲನೆ ನೀಡಿದರು.
ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಈ ವಿಶೇಷ ರೈಲಿಗೆ ಹಸಿರು ನಿಶಾನೆ ತೋರಿ ಮಾತನಾಡಿದ ಅವರು, ಕಳೆದ 7 ವರ್ಷಗಳಲ್ಲಿ ರೈಲ್ವೆ ಯೋಜನೆಗಳ ಅನುಷ್ಠಾನ, ವೇಗ ಪಡೆದುಕೊಂಡಿದೆ; ನೂತನ ವಿಸ್ಟಾಡೋಮ್ ರೈಲು ಸಂಚಾರ ಈ ಭಾಗದ ಪ್ರವಾಸೋದ್ಯಮಕ್ಕೆಒತ್ತು ನೀಡಲಿದೆ ಎಂದರು.
ನೈಋತ್ಯ ರೈಲ್ವೆಯಲ್ಲಿ ಮೊಟ್ಟಮೊದಲ ಬಾರಿಗೆ ವಿಸ್ಟಾ ಡೋಮ್ ಕೋಚ್ ಗಳು!
— South Western Railway (@SWRRLY) July 10, 2021
ಯಶವಂತಪುರ – ಮಂಗಳೂರು ಮಾರ್ಗದಲ್ಲಿ ಪ್ರಾರಂಭ.
ಸುಖಕರ ಪ್ರಯಾಣ ನಿಮ್ಮದಾಗಿಸುವ ಈ ಕೋಚ್ ನ ವೈಶಿಷ್ಟ್ಯಗಳ ಮೇಲೆ ಒಂದು ನೋಟ… https://t.co/BB8q60V1yw#vistadome #Mangaluru #Bengaluru
ವಿಸ್ಟಾಡೋಮ್ ಬೋಗಿ ರೈಲನ್ನು ಇದೇ ಪ್ರಥಮ ಬಾರಿಗೆ ದಕ್ಷಿಣ ಭಾರತದಲ್ಲಿ ಪರಿಚಯಿಸಲಾಗುತ್ತಿದೆ. ಮಂಗಳೂರು ಜಂಕ್ಷನ್ ಮತ್ತು ಯಶವಂತಪುರ ನಿಲ್ದಾಣಗಳ ನಡುವೆ ಸಂಚರಿಸುವ ಈ ಎಕ್ಸ್ಪ್ರೆಸ್ ರೈಲಿಗೆ ಅಳವಡಿಸಲಾದ ವಿಸ್ಟಾಡೋಮ್ ಬೋಗಿಗಳು ವಿಶಾಲವಾದ ದೊಡ್ಡ ಕಿಟಕಿಗಳನ್ನು ಹೊಂದಿದ್ದು, ಪ್ರಯಾಣದ ವೇಳೆ ಪ್ರಾಕೃತಿಕ ಸೊಬಗು ಸವಿಯಲು ಪೂರಕವಾಗಿವೆ. ಅಲ್ಲದೆ ಗಾಜಿನ ಮೇಲ್ಛಾವಣಿ ಹೊಂದಿದ್ದು, ಆಕಾಶದ ಸ್ಪಷ್ಟ ನೋಟವನ್ನು ಜೊತೆಗೆ ಪ್ರಕೃತಿ ಸೊಬಗು ಸವಿಯಬಹುದಾಗಿದೆ .