Home ಬೆಂಗಳೂರು ನಗರ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾಗಿ ವಿವೇಕ ಸುಬ್ಬಾರೆಡ್ಡಿ ಆಯ್ಕೆ

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾಗಿ ವಿವೇಕ ಸುಬ್ಬಾರೆಡ್ಡಿ ಆಯ್ಕೆ

127
0
Vivek Subba Reddy
bengaluru

ಬೆಂಗಳೂರು:

ಬೆಂಗಳೂರು ವಕೀಲರ ಸಂಘದ ಚುನಾವಣೆಯಲ್ಲಿ ನ್ಯಾಯವಾದಿ ವಿವೇಕ್ ಸುಬ್ಬಾರೆಡ್ಡಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಟಿ.ಜಿ.ರವಿ ಮತ್ತು ಖಜಾಂಚಿಯಾಗಿ ಹರೀಶ್ ಎಂ.ಟಿ. ಚುನಾಯಿತರಾಗಿದ್ದಾರೆ.

2021-24ರ ಅವಧಿಗೆ ಬೆಂಗಳೂರು ವಕೀಲರ ಸಂಘಕ್ಕೆ ಭಾನುವಾರ ಮತದಾನ ನಡೆಯಿತು. ಸುಮಾರು 16,500 ವಕೀಲರು ಮತದಾನದ ಹಕ್ಕು ಹೊಂದಿದ್ದರು, ಈ ಪೈಕಿ ಸುಮಾರು 11,500 ಮಂದಿ ಮತ ಚಲಾಯಿಸಿದ್ದರು.

Vivek Subba Reddy

ಸಂಘದ ಮಾಜಿ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ ಅವರ ಪುತ್ರರಾಗಿರುವ ಮತ್ತು ಬಿಜೆಪಿಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ವಿವೇಕ್ 1,900ಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

bengaluru

ಒಟ್ಟು ಚಲಾವಣೆಯಾಗಿರುವ ಮತಗಳ ಪೈಕಿ ವಿವೇಕ್ ರೆಡ್ಡಿ 4,804 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಮತ್ತು ಹಾಲಿ ಅಧ್ಯಕ್ಷರಾಗಿದ್ದ ಎ.ಪಿ.ರಂಗನಾಥ್ 2,894 ಮತಗಳನ್ನು ಪಡೆದಿದ್ದಾರೆ. ಆರ್.ರಾಜಣ್ಣ 2,545 ಹಾಗೂ ಎಚ್.ಸಿ.ಶಿವರಾಮ್ 876 ಮತಗಳನ್ನು ಗಳಿಸಿದ್ದಾರೆ.

bengaluru

LEAVE A REPLY

Please enter your comment!
Please enter your name here