Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಮ್ಮ ಮನೆಗಳನ್ನು ಕಾಪಾಡಿಕೊಳ್ಳುವಂತೆ ಮಠಗಳನ್ನು ಕಾಪಾಡಿಕೊಳ್ಳಬೇಕು: ಡಿಸಿಎಂ ಡಿ.ಕೆ. ಶಿವಕುಮಾರ್
  • ಚಿಕ್ಕಮಗಳೂರು
  • ಕರ್ನಾಟಕ

ನಮ್ಮ ಮನೆಗಳನ್ನು ಕಾಪಾಡಿಕೊಳ್ಳುವಂತೆ ಮಠಗಳನ್ನು ಕಾಪಾಡಿಕೊಳ್ಳಬೇಕು: ಡಿಸಿಎಂ ಡಿ.ಕೆ. ಶಿವಕುಮಾರ್

The Bengaluru Live January 11, 2025 4:10 PM 1 minute read
ನಮ್ಮ ಮನೆಗಳನ್ನು ಕಾಪಾಡಿಕೊಳ್ಳುವಂತೆ ಮಠಗಳನ್ನು ಕಾಪಾಡಿಕೊಳ್ಳಬೇಕು: ಡಿಸಿಎಂ ಡಿ.ಕೆ. ಶಿವಕುಮಾರ್

ನಮ್ಮ ಮನೆಗಳನ್ನು ಕಾಪಾಡಿಕೊಳ್ಳುವಂತೆ ಮಠಗಳನ್ನು ಕಾಪಾಡಿಕೊಳ್ಳಬೇಕು: ಡಿಸಿಎಂ ಡಿ.ಕೆ. ಶಿವಕುಮಾರ್

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಶೃಂಗೇರಿ (ಚಿಕ್ಕಮಗಳೂರು), ಜ.11: “ನಾವು ನಮ್ಮ ಮನೆಗಳನ್ನು ಕಾಪಾಡಿಕೊಳ್ಳುವಂತೆ, ನಮ್ಮ ಮಠಗಳನ್ನು ಕಾಪಡಿಕೊಳ್ಳಬೇಕು. ಧರ್ಮ ಕಾಪಾಡುವ ಮಠಕ್ಕೆ ನಮ್ಮ ಕೈಲಾದ ನೆರವು ನೀಡಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿಗಳು ಸನ್ಯಾಸ ಸ್ವೀಕಾರ ಮಾಡಿ 50 ವರ್ಷಗಳು ಪೂರೈಸಿರುವ ಶುಭ ಸಂವತ್ಸರದ ಸಂದರ್ಭದಲ್ಲಿ ಶೃಂಗೇರಿಯಲ್ಲಿ ಶನಿವಾರ ಏರ್ಪಡಿಸಿದ್ದ “ಸುವರ್ಣ ಭಾರತೀ ಮಹೋತ್ಸವ” ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಶನಿವಾರ ಭಾಗವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಶ್ರೀಮಠದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳು, ಶ್ರೀ ಪುರುಷೋತ್ತಮ ಭಾರತೀ ಸ್ವಾಮಿಗಳು, ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮಿಗಳು, ಶ್ರೀ ಪರಮಾನಂದ ಜಿ ಮಹಾರಾಜ ಸ್ವಾಮಿಗಳು, ಶ್ರೀ ವೀರೇಶಾನಂದ ಸರಸ್ವತಿ ಸ್ವಾಮಿಗಳು, ಶ್ರೀ ಮಾಧವಾನಂದ ಭಾರತೀ ಸ್ವಾಮಿಗಳು, ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳು, ಶ್ರೀ ವೀರೇಶಾನಂದ ಸರಸ್ವತಿ ಸ್ವಾಮಿಗಳು, ಶ್ರೀ ವಾಮನಾಶ್ರಮ ಸ್ವಾಮಿಗಳು, ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮಿಗಳು ಉಪಸ್ಥಿತರಿದ್ದರು.

“ನಮ್ಮ ಹಿರಿಯರು, ಮನೆ ಹುಷಾರು, ಮಠ ಹುಷಾರು ಎಂದು ಹೇಳಿದ್ದಾರೆ. ನಾವು ನಮ್ಮ ಮನೆಗಳನ್ನು ಕಾಪಾಡಿಕೊಳ್ಳುವಂತೆ ನಮ್ಮ ಮಠಗಳನ್ನು ಕಾಪಾಡಿಕೊಳ್ಳಬೇಕು. ಇದು ನಮ್ಮೆಲ್ಲರ ಕರ್ತವ್ಯ. ನೀವು ಇಲ್ಲಿಗೆ ಬಂದು ಹಾಗೇ ಹೋಗಬೇಡಿ. ನೀವು ನೂರು ರೂಪಾಯಿ ಸಂಪಾದನೆ ಮಾಡಿದರೆ, ಒಂದು ರೂಪಾಯಿಯಾದರೂ ಧರ್ಮ ಉಳಿಸುವ ಮಠಕ್ಕೆ ನೀಡಬೇಕು. ಆಗ ಮಾತ್ರ ಮಠ ಉಳಿಯಲು ಸಾಧ್ಯ” ಎಂದು ಕರೆ ನೀಡಿದರು.

“ಪ್ರವಚನ ಕೇಳಿ ನೆಮ್ಮದಿ ಪಡೆಯಲು ಬಂದಿದ್ದೇನೆ”

“ಇಲ್ಲಿ ಧರ್ಮ ಕಾಪಾಡುವ ಸಾಗರವೇ ಸೇರಿದೆ. ಇದು ಭಾಗ್ಯ ಇದು ಭಾಗ್ಯ, ಇದು ಭಾಗ್ಯವಯ್ಯ, ಪದುಮನಾಭನ ಪಾದ ಭಜನೆ ಪರಮ ಸುಖವಯ್ಯ ಎಂಬ ಪುರಂದರ ದಾಸರ ಪದಗಳಂತೆ ಇಂತಹ ದೊಡ್ಡ ಭಕ್ತಿ ಸಾಗರದಲ್ಲಿ ವಿಧುಶೇಖರಭಾರತೀ ಮಹಾಸ್ವಾಮೀಜಿಗಳು ನೀಡಿರುವ ಪ್ರವಚನ ಕೇಳಿ ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ನೆಮ್ಮದಿ ಪಡೆದುಕೊಳ್ಳಲು ನಾನು ಭಾಗವಹಿಸಿರುವುದು ನನ್ನ ಭಾಗ್ಯವಾಗಿದೆ” ಎಂದರು.

“ಭಾರತೀತೀರ್ಥ ಮಹಾಸ್ವಾಮೀಜಿಗಳು ಸಮಾಜದಲ್ಲಿ ಧರ್ಮವನ್ನು ಉಳಿಸಲು ಸನ್ಯಾಸತ್ವ ಸ್ವೀಕರಿಸಿ 50 ವರ್ಷಗಳು ಪೂರೈಸಿವೆ. ಇವರು ಶಾರದ ಪೀಠದ 36ನೇ ಅಧ್ಯಕ್ಷರಾಗಿ ನಮ್ಮ ಕಣ್ಣಿಗೆ ದೇವರ ರೂಪದಲ್ಲಿ ಕಾಣುತ್ತಿದ್ದಾರೆ. ಅವರಲ್ಲಿ ನಾವು ಶಂಕರಚಾರ್ಯರನ್ನು ಕಾಣುತ್ತಿದ್ದೇವೆ. ವಿಧುಶೇಖರಭಾರತೀ ಸ್ವಾಮೀಜಿಗಳು ದೇಶ ಸುತ್ತಿ ನಮ್ಮ ಧರ್ಮ ಕಾಪಾಡಲು ಮಾರ್ಗದರ್ಶನ ನೀಡುತ್ತಿದ್ದಾರೆ” ಎಂದು ತಿಳಿಸಿದರು.

“ಇಲ್ಲಿಗೆ ಬಂದಾಗ ನನಗೆ ಶಾಲೆಯಲ್ಲಿ ಕಲಿತ ಶ್ಲೋಕ ನೆನಪಾಯಿತು. ವಿದ್ಯಾ ದದಾತಿ ವಿನಯಂ ವಿನಯಾ ದದಾತಿ ಪಾತ್ರತಾಂ। ಪಾತ್ರತ್ವಂ ಧನಮಾಪ್ನೋತಿ ಧನಧರ್ಮಂ ತತಃ ಸುಖಮ್. ಅಂದರೆ ಮನುಷ್ಯನಿಗೆ ವಿದ್ಯೆ ಇದ್ದರೆ ವಿನಯ ಬರುತ್ತದೆ. ವಿನಯವಿದ್ದರೆ ಯೋಗ್ಯತೆ ಬರುತ್ತದೆ. ಯೋಗ್ಯತೆಯಿಂದ ಹಣ, ಹಣದಿಂದ ಧರ್ಮ, ಧರ್ಮದಿಂದ ಸುಖ ಪಡೆಯುತ್ತೇವೆ. ಅದರಂತೆ ಸುಖ ಪಡೆಯಲು ನಾವು ಇಲ್ಲಿಗೆ ಬಂದಿದ್ದೇವೆ. ನಾವು ನಮ್ಮ ಮನಸ್ಸಿನ ಶಾಂತಿ ಪಡೆಯಲು, ನಮ್ಮ ಕಷ್ಟಗಳ ನಿವಾರಣೆಗೆ ದೇವಾಲಯಕ್ಕೆ ಹೋಗುತ್ತೇವೆ. ಇಂತಹ ಪವಿತ್ರ ಶಾರದ ಪೀಠ ಸನ್ನಿದಿಯಲ್ಲಿ ನಾವೆಲ್ಲರೂ ಸೇರಿರುವುದು ನಮ್ಮ ಭಾಗ್ಯ” ಎಂದರು.

“ಇಲ್ಲಿ ಶ್ರೀಗಳು ಹೇಳಿಕೊಟ್ಟ ಪಾಠ ಕಲಿತು, ಅವರು ಹೇಳಿದ ಸ್ತೋತ್ರಗಳನ್ನು ಅರ್ಥ ಮಾಡಿಕೊಂಡು ಬದುಕಿನಲ್ಲಿ ಬದಲಾವಣೆ ಮಾಡಿಕೊಳ್ಳಲು ಪ್ರಯತ್ನಿಸಿದ್ದೇವೆ. ನಾನು ಇಲ್ಲಿಗೆ ಬಂದಾಗ ಶ್ರೀಗಳು ಮಾತನಾಡುತ್ತಿದ್ದರು. ಮಾನವ ಧರ್ಮಕ್ಕೆ ಜಯವಾಗಲಿ, ವಿಶ್ವಕ್ಕೆ ಧರ್ಮದಿಂದ ಶಾಂತಿ ಸಿಗಲಿ ಎಂದು ಸಂದೇಶ ಸಾರಿದರು. ನಾನು ಗಂಟೆಗಟ್ಟಲೆ ಧರ್ಮದ ವಿಚಾರವಾಗಿ ಮಾತನಾಡಬಲ್ಲೆ. ನಮ್ಮ ಅನುಷ್ಠಾನ ಮಾಡುವಲ್ಲಿ ಮಠ ಕೆಲಸ ಮಾಡಿಕೊಂಡು ಬಂದಿದೆ” ಎಂದು ಹೇಳಿದರು.

ಭಾರತೀತೀರ್ಥ ಮಹಾಸ್ವಾಮಿಗಳ ಪವಾಡ ಕಣ್ಣಾರೆ ಕಂಡಿದ್ದೇನೆ

“ನಾನು ತಿರುಪತಿಗೆ ಹೋಗಿ ಮರಳುವಾಗ ನನ್ನ ಸ್ನೇಹಿತರು ಆದಿಕೇಶವಲು ಎಂಬುವವರ ಮನೆಗೆ ಭಾರತೀ ಶ್ರೀಗಳು ಹೋಗಿ ಅಲ್ಲಿ 2 ದಿನ ತಂಗಿದ್ದರು. ಅಲ್ಲಿ ದೇವಾಲಯದಲ್ಲಿ ಒಂದು ಹೂವಿನ ಹಾರ ಹಾಕಿದ್ದರು. 2 ದಿನಗಳ ನಂತರ ನಾನು ಕುಟುಂಬ ಸಮೇತರಾಗಿ ಹೋದಾಗ ಚಿತ್ತೂರಿನಲ್ಲಿ ಜನಸಾಗರವೇ ಸೇರಿತ್ತು. ಕಾರಣ ಅಲ್ಲಿ ಸ್ವಾಮೀಜಿಗಳು ಹಾಕಿದ್ದ ಹೂವಿನ ಹಾರ ಬೆಳೆಯುತ್ತಿತ್ತು. ಅದನ್ನು ನಾನು ಕಣ್ಣಾರೆ ಕಂಡಿದ್ದೆ. ಭಾರತೀ ಶ್ರೀಗಳ ಆ ಪವಾಡವನ್ನು ನಾನು ಕಣ್ಣಾರೆ ಕಂಡಿದ್ದೆ. ಅಷ್ಟು ದೊಡ್ಡ ಶಕ್ತಿ ಶಾರದ ಪೀಠದಲ್ಲಿದೆ” ಎಂದರು.

ವಿಧುಶೇಖರಭಾರತೀ ಸ್ವಾಮೀಜಿಗಳ ಪಾಂಡಿತ್ಯಕ್ಕೆ ಶರಣಾಗಿದ್ದೇನೆ

“ಯಾರ ಮಾತಿಗೂ ನಾವು ಅಂಜುವ ಅಗತ್ಯವಿಲ್ಲ. ನಾವು ಯಾರ ಅಣತಿಯಂತೆ ಇರುವುದು ಬೇಡ. ಯಾರನ್ನೂ ನಂಬಿ ನಾವು ಬದುಕುವುದು ಬೇಡ. ನಮ್ಮ ಜೀವನವನ್ನು ನಾವು ನಂಬೋಣ. ನಮ್ಮ ಧರ್ಮ, ದೇವರಲ್ಲಿ ವಿಶ್ವಾಸವಿಟ್ಟು ಬದುಕಿದಾಗ ಒಳ್ಳೆಯದಾಗುತ್ತದೆ. ಭಾರತೀ ಶ್ರೀಗಳು ಅನೇಕ ಶಿಷ್ಯಕೋಟಿಗಳನ್ನು ಬೆಳೆಸಿದ್ದಾರೆ, ವಿಧುಶೇಖರಭಾರತೀ ಸ್ವಾಮೀಜಿಗಳ ವಯಸ್ಸಿಗೆ ಅವರಲ್ಲಿರುವ ಪಾಂಡಿತ್ಯಕ್ಕೆ ನಾನು ಶರಣಾಗಿದ್ದೇನೆ. ಶ್ರೀಗಳ ಪಾದಗಳಿಗೆ ಸಾಷ್ಟಾಂಗ ನಮಸ್ಕಾರಗಳು. ಮುಂದಿನ ಐವತ್ತು ಅರವತ್ತು ವರ್ಷಗಳ ಕಾಲ ಈ ಮಠವನ್ನು ಇನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಿ, ಧರ್ಮ ಕಾಪಾಡುವ ಕೆಲಸ ಮುಂದುವರಿಯಲಿ. ನಮ್ಮ ಸಂಸ್ಕೃತಿ ಈ ದೇಶದ ಆಸ್ತಿ. ಅದನ್ನು ಕಾಪಾಡುವ ಕೆಲಸ ಮಠದಿಂದ ಆಗಲಿ. ನಾನು ಕೂಡ ಶ್ರೀಗಳ ಭಕ್ತನಾಗಿ ಅವರ ಪಾದಗಳ ಮುಂದೆ ಕೂತಿದ್ದೇನೆ” ಎಂದರು.

About the Author

The Bengaluru Live

Administrator

Visit Website View All Posts

Post navigation

Previous: ಸಿ.ಟಿ. ರವಿ ದೊಡ್ಡ ಡ್ರಾಮಾ ಮಾಸ್ಟರ್
Next: ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಂತಹ 830 ವಸತಿಯೇತರ ಕಟ್ಟಡಗಳಿಗೆ ಬೀಗ ಮುದ್ರೆ: ಮುನೀಶ್ ಮೌದ್ಗಿಲ್

Related Stories

parameshwara-file-photo
  • ಕರ್ನಾಟಕ

ನ.14ಕ್ಕೆ ಕಾವೇರಿ ಐಟಿ ಸೆಲ್ ಉದ್ಘಾಟನೆ: ನೋಂದಣಿ ಇಲಾಖೆ ಕಾಮಗಾರಿಗಳಿಗೂ ಪರಮೇಶ್ವರ್ ಚಾಲನೆ

The Bengaluru Live November 12, 2026 7:13 PM
cm-scst-council-meeting-20261112
  • ಕರ್ನಾಟಕ

ಎಸ್‌ಸಿ, ಎಸ್‌ಟಿ ಸಮುದಾಯಗಳ ಅನುದಾನ ಗೋಚರವಾಗಿರಲಿ, ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ ಕೆಲಸ ಮಾಡಿ: ಸಿಎಂ ಶಿವಕುಮಾರ್

The Bengaluru Live November 12, 2026 7:10 PM
tejasvi-surya-metro-presser-20261112
  • ಕರ್ನಾಟಕ

ನಮ್ಮ ಮೆಟ್ರೊ ಹಣಕಾಸು ಲೆಕ್ಕದಲ್ಲಿ ರಾಜ್ಯದ ಕುಚೇಷ್ಟೆ: 29 ಸಾವಿರ ಕೋಟಿ ಸಾಲ ರಾಜ್ಯದ ಕಾಲಂಗೆ ಎಂದ ತೇಜಸ್ವಿ ಸೂರ್ಯ

The Bengaluru Live November 12, 2026 7:07 PM

Latest Post

ನ.14ಕ್ಕೆ ಕಾವೇರಿ ಐಟಿ ಸೆಲ್ ಉದ್ಘಾಟನೆ: ನೋಂದಣಿ ಇಲಾಖೆ ಕಾಮಗಾರಿಗಳಿಗೂ ಪರಮೇಶ್ವರ್ ಚಾಲನೆ parameshwara-file-photo
  • ಕರ್ನಾಟಕ

ನ.14ಕ್ಕೆ ಕಾವೇರಿ ಐಟಿ ಸೆಲ್ ಉದ್ಘಾಟನೆ: ನೋಂದಣಿ ಇಲಾಖೆ ಕಾಮಗಾರಿಗಳಿಗೂ ಪರಮೇಶ್ವರ್ ಚಾಲನೆ

November 12, 2026 7:13 PM
ಎಸ್‌ಸಿ, ಎಸ್‌ಟಿ ಸಮುದಾಯಗಳ ಅನುದಾನ ಗೋಚರವಾಗಿರಲಿ, ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ ಕೆಲಸ ಮಾಡಿ: ಸಿಎಂ ಶಿವಕುಮಾರ್ cm-scst-council-meeting-20261112
  • ಕರ್ನಾಟಕ

ಎಸ್‌ಸಿ, ಎಸ್‌ಟಿ ಸಮುದಾಯಗಳ ಅನುದಾನ ಗೋಚರವಾಗಿರಲಿ, ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ ಕೆಲಸ ಮಾಡಿ: ಸಿಎಂ ಶಿವಕುಮಾರ್

November 12, 2026 7:10 PM
ನಮ್ಮ ಮೆಟ್ರೊ ಹಣಕಾಸು ಲೆಕ್ಕದಲ್ಲಿ ರಾಜ್ಯದ ಕುಚೇಷ್ಟೆ: 29 ಸಾವಿರ ಕೋಟಿ ಸಾಲ ರಾಜ್ಯದ ಕಾಲಂಗೆ ಎಂದ ತೇಜಸ್ವಿ ಸೂರ್ಯ tejasvi-surya-metro-presser-20261112
  • ಕರ್ನಾಟಕ

ನಮ್ಮ ಮೆಟ್ರೊ ಹಣಕಾಸು ಲೆಕ್ಕದಲ್ಲಿ ರಾಜ್ಯದ ಕುಚೇಷ್ಟೆ: 29 ಸಾವಿರ ಕೋಟಿ ಸಾಲ ರಾಜ್ಯದ ಕಾಲಂಗೆ ಎಂದ ತೇಜಸ್ವಿ ಸೂರ್ಯ

November 12, 2026 7:07 PM
ಬಿರ್ಸಾ ಮುಂಡಾ 151ನೇ ಜನ್ಮ ಜಯಂತಿ: ನ.15ಕ್ಕೆ ದೇಶಾದ್ಯಂತ ಬಿಜೆಪಿ ವಿಶೇಷ ಕಾರ್ಯಕ್ರಮ, ಛಲವಾದಿ ನಾರಾಯಣಸ್ವಾಮಿ ಮಾಹಿತಿ bjp-chalavadi-complaint-commissioner-20261107-1738
  • ಕರ್ನಾಟಕ

ಬಿರ್ಸಾ ಮುಂಡಾ 151ನೇ ಜನ್ಮ ಜಯಂತಿ: ನ.15ಕ್ಕೆ ದೇಶಾದ್ಯಂತ ಬಿಜೆಪಿ ವಿಶೇಷ ಕಾರ್ಯಕ್ರಮ, ಛಲವಾದಿ ನಾರಾಯಣಸ್ವಾಮಿ ಮಾಹಿತಿ

November 12, 2026 7:04 PM
ಓಕಳೀಪುರಂ ಅಷ್ಟಪಥ ಕಾರಿಡಾರ್ ಸುತ್ತ ರಸ್ತೆ ಡಾಂಬರೀಕರಣ ಓಕಳಿಪುರಂ ಎಂಟು ಪಥದ ಕಾರಿಡಾರ್ ಬಳಿ ರಾತ್ರಿ ಡಾಂಬರೀಕರಣ ಕಾಮಗಾರಿಯಲ್ಲಿ ರಸ್ತೆ ರೋಲರ್
  • ಬೆಂಗಳೂರು

ಓಕಳೀಪುರಂ ಅಷ್ಟಪಥ ಕಾರಿಡಾರ್ ಸುತ್ತ ರಸ್ತೆ ಡಾಂಬರೀಕರಣ

November 12, 2026 3:58 PM
ಪಿಂಕ್ ಲೈನ್ ಉದ್ಘಾಟನೆಯ ಅಂತಿಮ ಪಟ್ಟಿಯಿಂದ ನನ್ನ ಭಾಷಣ ಕೈಬಿಟ್ಟಿದ್ದಾರೆ: ಕೃಷ್ಣ ಬೈರೇಗೌಡ ಮೆಟ್ರೋ ಕಾಮಗಾರಿ ಸ್ಥಳದಲ್ಲಿ ಕೃಷ್ಣ ಬೈರೇಗೌಡ ಮತ್ತು ಅಧಿಕಾರಿಗಳು
  • ಬೆಂಗಳೂರು

ಪಿಂಕ್ ಲೈನ್ ಉದ್ಘಾಟನೆಯ ಅಂತಿಮ ಪಟ್ಟಿಯಿಂದ ನನ್ನ ಭಾಷಣ ಕೈಬಿಟ್ಟಿದ್ದಾರೆ: ಕೃಷ್ಣ ಬೈರೇಗೌಡ

November 12, 2026 3:50 PM

ನೀವು ತಪ್ಪಿಸಿಕೊಂಡಿರಬಹುದು

parameshwara-file-photo
  • ಕರ್ನಾಟಕ

ನ.14ಕ್ಕೆ ಕಾವೇರಿ ಐಟಿ ಸೆಲ್ ಉದ್ಘಾಟನೆ: ನೋಂದಣಿ ಇಲಾಖೆ ಕಾಮಗಾರಿಗಳಿಗೂ ಪರಮೇಶ್ವರ್ ಚಾಲನೆ

The Bengaluru Live November 12, 2026 7:13 PM
cm-scst-council-meeting-20261112
  • ಕರ್ನಾಟಕ

ಎಸ್‌ಸಿ, ಎಸ್‌ಟಿ ಸಮುದಾಯಗಳ ಅನುದಾನ ಗೋಚರವಾಗಿರಲಿ, ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ ಕೆಲಸ ಮಾಡಿ: ಸಿಎಂ ಶಿವಕುಮಾರ್

The Bengaluru Live November 12, 2026 7:10 PM
tejasvi-surya-metro-presser-20261112
  • ಕರ್ನಾಟಕ

ನಮ್ಮ ಮೆಟ್ರೊ ಹಣಕಾಸು ಲೆಕ್ಕದಲ್ಲಿ ರಾಜ್ಯದ ಕುಚೇಷ್ಟೆ: 29 ಸಾವಿರ ಕೋಟಿ ಸಾಲ ರಾಜ್ಯದ ಕಾಲಂಗೆ ಎಂದ ತೇಜಸ್ವಿ ಸೂರ್ಯ

The Bengaluru Live November 12, 2026 7:07 PM
bjp-chalavadi-complaint-commissioner-20261107-1738
  • ಕರ್ನಾಟಕ

ಬಿರ್ಸಾ ಮುಂಡಾ 151ನೇ ಜನ್ಮ ಜಯಂತಿ: ನ.15ಕ್ಕೆ ದೇಶಾದ್ಯಂತ ಬಿಜೆಪಿ ವಿಶೇಷ ಕಾರ್ಯಕ್ರಮ, ಛಲವಾದಿ ನಾರಾಯಣಸ್ವಾಮಿ ಮಾಹಿತಿ

The Bengaluru Live November 12, 2026 7:04 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ನ.14ಕ್ಕೆ ಕಾವೇರಿ ಐಟಿ ಸೆಲ್ ಉದ್ಘಾಟನೆ: ನೋಂದಣಿ ಇಲಾಖೆ ಕಾಮಗಾರಿಗಳಿಗೂ ಪರಮೇಶ್ವರ್ ಚಾಲನೆ
  • ಎಸ್‌ಸಿ, ಎಸ್‌ಟಿ ಸಮುದಾಯಗಳ ಅನುದಾನ ಗೋಚರವಾಗಿರಲಿ, ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ ಕೆಲಸ ಮಾಡಿ: ಸಿಎಂ ಶಿವಕುಮಾರ್
  • ನಮ್ಮ ಮೆಟ್ರೊ ಹಣಕಾಸು ಲೆಕ್ಕದಲ್ಲಿ ರಾಜ್ಯದ ಕುಚೇಷ್ಟೆ: 29 ಸಾವಿರ ಕೋಟಿ ಸಾಲ ರಾಜ್ಯದ ಕಾಲಂಗೆ ಎಂದ ತೇಜಸ್ವಿ ಸೂರ್ಯ
  • ಬಿರ್ಸಾ ಮುಂಡಾ 151ನೇ ಜನ್ಮ ಜಯಂತಿ: ನ.15ಕ್ಕೆ ದೇಶಾದ್ಯಂತ ಬಿಜೆಪಿ ವಿಶೇಷ ಕಾರ್ಯಕ್ರಮ, ಛಲವಾದಿ ನಾರಾಯಣಸ್ವಾಮಿ ಮಾಹಿತಿ
©Copyright 2025 The Bengaluru Live All rights reserved. | MoreNews by AF themes.