Home ರಾಜಕೀಯ ಸೌಮ್ಯಾ ರೆಡ್ಡಿ ಸೋತಿದ್ದು ಏಕೆ ಮತ್ತು ಹೇಗೆ? ಉದ್ದೇಶಪೂರ್ವಕವಾಗಿ ಜಯನಗರ ಮತ್ತು ಜೆ.ಪಿ.ನಗರ ಬ್ಲಾಕ್ ಮುಖಂಡರು...

ಸೌಮ್ಯಾ ರೆಡ್ಡಿ ಸೋತಿದ್ದು ಏಕೆ ಮತ್ತು ಹೇಗೆ? ಉದ್ದೇಶಪೂರ್ವಕವಾಗಿ ಜಯನಗರ ಮತ್ತು ಜೆ.ಪಿ.ನಗರ ಬ್ಲಾಕ್ ಮುಖಂಡರು 25000 ‘ಗ್ಯಾರೆಂಟಿ’ ಕಾರ್ಡ್‌ಗಳನ್ನು ವಿತರಿಸಲಿಲ್ಲವೇ?

158
0
Sowmya Reddy
ಸೌಮ್ಯ ರೆಡ್ಡಿ
Advertisement
bengaluru

ಬೆಂಗಳೂರು:

ಬಿಜೆಪಿ ಶಾಸಕ ಸಿಕೆ ರಾಮಮೂರ್ತಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸೌಮ್ಯ ರೆಡ್ಡಿ ವಿರುದ್ಧ 16 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ ಆದರೆ ಮನೆಗಳಿಗೆ ವಿತರಿಸದೇ 25000ಸಾವಿರ ಗ್ಯಾರಂಟಿ ಕಾರ್ಡ್ ಕಾಂಗ್ರೆಸ್ ಕಛೇರಿಯಲ್ಲಿ ಹಾಗೇ ಉಳಿದಿದೆ, ಎಂದು ಈಗ ಬೆಳಕಿಗೆ ಬಂದಿದೆ. ಇದೇ ಸೌಮ್ಯ ರೆಡ್ಡಿ ಸೋಲಿಗೆ ಕಾರಣವಾಯಿತೆ…..?

ಜಯನಗರ ಮತ್ತು ಜೆ.ಪಿ.ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಗೆ ಅಂದಾಜು 25000ಸಾವಿರ ಗ್ಯಾರಂಟಿ ಕಾರ್ಡ್ ಗಳನ್ನು ಕೆಪಿಸಿಸಿ ವತಿಯಿಂದ ನೀಡಲಾಗಿತ್ತು.

ಜಯನಗರ ಮತ್ತು ಜೆ.ಪಿ.ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕೆಲವು ನಾಯಕರು ಬೇಜವಾದ್ದರಿ ನಡವಳಿಕೆ, ನಿರ್ಲಕ್ಷ್ಯ ಧೋರಣೆಯಿಂದ 25000ಗ್ಯಾರಂಟಿ ಕಾರ್ಡ್ ಗಳನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ನೀಡಿ, ಪ್ರತಿ ಮನೆಗಳಿಗೆ ಹಂಚಿಸುವ ಕಾರ್ಯವಾಗಬೇಕಾಗಿತ್ತು ಅದರೆ ಕಾರ್ಡ್ ಆನ್ನು ಹಂಚದೇ ಕಾಂಗ್ರೆಸ್ ಕಛೇರಿಯಲ್ಲಿ ಹಾಗೇ ಉಳಿದಿದೆ.

bengaluru bengaluru
Why and How Sowmya Reddy lost? Deliberately Jayanagar and JP Nagar block leaders did not distribute 25000 'Guarantee' cards?
Why and How Sowmya Reddy lost? Deliberately Jayanagar and JP Nagar block leaders did not distribute 25000 ‘Guarantee’ cards?

ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಕೇವಲ 16ಮತಗಳಿಂದ ಕಾಂಗ್ರೆಸ್ ಪಕ್ಷ ಸೋಲು ಕಂಡಿದೆ.ಕಾಂಗ್ರೆಸ್ ಪಕ್ಷ ಸೋಲಿಗೆ ಗ್ಯಾರಂಟಿ ಕಾರ್ಡ್ ಗಳನ್ನು ಮತದಾರರ ಮನೆ ಬಾಗಿಲಿಗೆ ತಲುಪಿಸದೇ ಇರುವುದು ಪ್ರಮುಖ ಕಾರಣ. 25000ಗ್ಯಾರಂಟಿ ಕಾರ್ಡ್ ಪ್ರತಿ ಮನೆಗೆ ತಲುಪಿಸಿದ್ದರೆ ಇಂದು ಕಾಂಗ್ರೆಸ್ ಪಕ್ಷ ಅತ್ಯಧಿಕ ಮತದಿಂದ ಜಯಶಾಲಿಯಾಗುವ ನಂಬಿಕೆ ಇತ್ತು.

ಜಯನಗರ ಮತ್ತು ಜೆ.ಪಿ.ನಗರ ವಾರ್ಡ್ ಬ್ಲಾಕ್ ಕಾಂಗ್ರೆಸ್ ಸಮಿತಿಗಳು ನಡವಳಿಕೆಯಿಂದ ಕಾಂಗ್ರೆಸ್ ಕಾರ್ಯಕರ್ತರು ಅಸಮಾಧಾನ ಗೊಂಡಿದ್ದಾರೆ.

ಇಂದು ಸಹ ಜೆ ಪಿ ನಗರ ವಾರ್ಡ್ ನ್ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಗ್ಯಾರಂಟಿ ಕಾರ್ಡ್ ರಾಶಿ ಬಿದ್ದಿರುವ ಸಾಕ್ಷಿ ಸಮೇತ ಪೋಟೋ ಇದೆ (ದಯವಿಟ್ಟು ಚಿತ್ರಗಳನ್ನು ನೋಡಿ). ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಉಳಿಯಬೇಕಾದರೆ ಜಯನಗರ, ಜೆ.ಪಿ.ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯನ್ನು ಕೂಡಲೇ ವಿಸರ್ಜಿಸಬೇಕು ಕೆಪಿಸಿಸಿ ಅಧ್ಯಕ್ಷರು ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರಲ್ಲಿ ನಿಷ್ಟಾವಂತ ಕಾಂಗ್ರೆಸ್ ಕಾರ್ಯಕರ್ತರು ಮನವಿ ಎಂದು ವಿನಂತಿ ಮಾಡಿದ್ದಾರೆ.

ಸೌಮ್ಯಾ ರೆಡ್ಡಿ ಅವರ ತಂದೆ ರಾಮಲಿಂಗಾ ರೆಡ್ಡಿ ಅವರು ಸಿದ್ದರಾಮಯ್ಯ ಸಂಪುಟದಲ್ಲಿ ಸಾರಿಗೆ ಸಚಿವರಾಗಿದ್ದಾರೆ ಮತ್ತು ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದಿಂದ (ಎಂಟು ಬಾರಿ ಶಾಸಕ – ಜಯನಗರ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಮತ್ತು ಬಿಟಿಎಂ ಲೇಔಟ್‌ನಿಂದ ನಾಲ್ಕು ಬಾರಿ ಗೆದ್ದಿದ್ದಾರೆ) ಶಾಸಕರಾಗಿದ್ದಾರೆ .


bengaluru

LEAVE A REPLY

Please enter your comment!
Please enter your name here