Home ಅಪರಾಧ ಸಿಐಎಸ್ಎಫ್ ಅಧಿಕಾರಿ ಮೇಲೆ ಹಲ್ಲೆ ನಡೆಸಿ, ಬೆಂಗಳೂರು ವಿಮಾನ ನಿಲ್ದಾಣ ಸ್ಫೋಟಿಸುವುದಾಗಿ ಬೆದರಿಕೆ: ಮಹಿಳೆ ಬಂಧನ

ಸಿಐಎಸ್ಎಫ್ ಅಧಿಕಾರಿ ಮೇಲೆ ಹಲ್ಲೆ ನಡೆಸಿ, ಬೆಂಗಳೂರು ವಿಮಾನ ನಿಲ್ದಾಣ ಸ್ಫೋಟಿಸುವುದಾಗಿ ಬೆದರಿಕೆ: ಮಹಿಳೆ ಬಂಧನ

18
0
Airport1
bengaluru

ಬೆಂಗಳೂರು:

ಕೋಲ್ಕತ್ತಾಗೆ ತೆರಳುವ ವಿಮಾನ ತಪ್ಪಿದ ನಂತರ ಭದ್ರತಾ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಕೇರಳದ ಮಹಿಳೆ, ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಹಾಕುವುದಾಗಿ ಬೆದರಿಕೆ ಹಾಕಿದ ಘಟನೆ ಕಳೆದ ಶುಕ್ರವಾರ ನಡೆದಿದೆ.

ಸಿಐಎಸ್ಎಫ್ ಅಧಿಕಾರಿ ಮೇಲೆ ಹಲ್ಲೆ ನಡೆಸಿ, ಬೆದರಿಕೆ ಹಾಕಿದ ಮಹಿಳೆಯನ್ನು ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್(ಬಿಐಎಎಲ್) ಪೊಲೀಸರು ಬಂಧಿಸಿದ್ದಾರೆ.

ಮಹಿಳೆ ವಿರುದ್ಧ ಕ್ರಿಮಿನಲ್ ಬೆದರಿಕೆ(ಸೆಕ್ಷನ್ 505), ಹಲ್ಲೆ(ಸೆಕ್ಷನ್ 323) ಮತ್ತು ಸಾರ್ವಜನಿಕ ಸೇವೆಗೆ ಅಡ್ಡಿಪಡಿಸಿದ(ಸೆಕ್ಷನ್ 353) ಸೆಕ್ಷನ್‌ಗಳ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.

bengaluru

ಬಂಧಿತ ಮಹಿಳೆಯನ್ನು ಕೋಝಿಕ್ಕೋಡ್ ಮೂಲದ ಮಾನಸಿ ಸತೀಬೈನು(31) ಎಂದು ಗುರುತಿಸಲಾಗಿದ್ದು, ಗೇಟ್ ನಂ. 6 ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಐಎಸ್ಎಫ್ ಅಧಿಕಾರಿ ಸಂದೀಪ್ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.

ಪೊಲೀಸರು ದಾಖಲಿಸಿದ ಎಫ್‌ಐಆರ್ ಪ್ರತಿ ಪ್ರಕಾರ, ಫೆಬ್ರವರಿ 3 ರಂದು ಬೆಳಗ್ಗೆ 8.15 ರಿಂದ 8.30 ರ ನಡುವೆ ಈ ಘಟನೆ ನಡೆದಿದೆ. ಕೋಲ್ಕತ್ತಾಗೆ ತೆರಳಲು ತುರ್ತಾಗಿ ಇಂಡಿಗೋ ವಿಮಾನ(6E 6445) ಹತ್ತಲು ಅನುಮತಿ ನೀಡಬೇಕೆಂದು ಮಹಿಳೆ ಒತ್ತಾಯಿಸಿದ್ದಾರೆ.

ವಿಮಾನ ಹತ್ತಲು ಬಿಡದಿದ್ದರೆ ವಿಮಾನ ನಿಲ್ದಾಣಕ್ಕೆ ಬಾಂಬ್ ಹಾಕುವುದಾಗಿ ಸತೀಬೈನು ಬೆದರಿಕೆ ಹಾಕಿದ್ದಾಳೆ. ಸುತ್ತಮುತ್ತಲಿನ ಸಿಐಎಸ್‌ಎಫ್ ಸಿಬ್ಬಂದಿ ಮಹಿಳೆಯನ್ನು ಸಮಾಧಾನ ಪಡಿಸಲು ಮುಂದಾದಾಗ, ಸಿಂಗ್‌ ಅವರ ಕಾಲರ್‌ ಹಿಡಿದು ಹಲ್ಲೆ ನಡೆಸಿದ್ದಾಳೆ ಎಂದು ಆರೋಪಿಸಲಾಗಿದೆ.

ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇಟ್ಟಿದ್ದು, ತಪ್ಪಿಸಿಕೊಳ್ಳಿ ಮತ್ತು ಪ್ರಾಣಾಪಾಯದಿಂದ ಪಾರಾಗಿ ಎಂದು ಇತರ ಪ್ರಯಾಣಿಕರಿಗೆ ಮಹಿಳೆ ಎಚ್ಚರಿಕೆ ನೀಡಿದ್ದಾಳೆ ಎಂದು ಎಫ್‌ಐಆರ್ ಪ್ರತಿಯಲ್ಲಿ ತಿಳಿಸಲಾಗಿದೆ.

ಘಟನೆ ಬಳಿಕ ಸಿಂಗ್ ವಿಮಾನ ನಿಲ್ದಾಣ ಪೊಲೀಸರಿಗೆ ದೂರು ನೀಡಿದ್ದರು.

bengaluru

LEAVE A REPLY

Please enter your comment!
Please enter your name here