Home ಬೆಂಗಳೂರು ನಗರ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಘಟಕಕ್ಕೆ ಮುಖ್ಯಮಂತ್ರ ಚಾಲನೆ

ತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಘಟಕಕ್ಕೆ ಮುಖ್ಯಮಂತ್ರ ಚಾಲನೆ

63
0

11.5 ಮೆ.ವ್ಯಾ ಸಾಮರ್ಥ್ಯದ ಉತ್ಪಾದನ ಘಟಕ

ಬೆಂಗಳೂರು:

ಕರ್ನಾಟಕ ವಿದ್ಯುತ್ ನಿಗಮ ನಿಯಮಿತದಿಂದ ಬಿಡದಿಯಲ್ಲಿ11.5 ಮೆಗಾ ವ್ಯಾ ಟ್ ಸಾಮರ್ಥ್ಯದ ತ್ಯಾಜ್ಯ ವಿದ್ಯುತ್ ಉತ್ಪಾದನಾ ಘಟಕದ ಶಂಕುಸ್ಥಾಪನೆಯನ್ನು ಲೋಕಾರ್ಪಣೆ ಗೊಳಿಸಿದ್ದೇನೆ. ಬೃಹತ್ ತ್ಯಾಜ್ಯ ವಿದ್ಯುತ್ ಉತ್ಪಾದನಾ ಘಟಕ ಯೋಜನೆಯು ರಾಜ್ಯದಲ್ಲೇ ಪ್ರ-ಪ್ರಥಮ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಶ್ಲಾಘಿಸಿದ್ದಾರೆ.

ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ವತಿಯಿಂದ ನಿರ್ಮಿಸಿರುವ ತ್ಯಾಜ್ಯ ವಿದ್ಯುತ್ ಉತ್ಪಾದನಾ ಘಟಕದ ಶಿಲಾನ್ಯಾಸ ಕಾರ್ಯಕ್ರಮವನ್ನು ವರ್ಚುವಲ್ ಕಾರ್ಯಕ್ರಮದ ಮೂಲಕ ನೆರವೇರಿಸಿ ಮಾತನಾಡಿದ ಅವರು, ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಪುರಸಭೆಗಳಲ್ಲಿನ ಘನತ್ಯಾಜ್ಯ ನಿರ್ವಹಣೆಯು ಪರಿಸರಕ್ಕೆ ಸಂಬಂಧಿಸಿ ದ ಮಹತ್ವದ ವಿಷಯವಾಗಿದೆ.ಕರ್ನಾಟಕ ರಾಜ್ಯದ ರಾಜಧಾನಿಯಾದ ಬೆಂಗಳೂರು, ಏಷ್ಯಾ ಖಂಡದಲ್ಲೇ ವೇಗ ವಾಗಿ ಬೆಳೆಯುತ್ತಿರುವ ನಗರಗಳಲ್ಲೊಂದು.ನಗರದಲ್ಲಿ ದಿನಂಪ್ರತಿ ಸುಮಾರು 5,000 ಮೆಟ್ರಿಕ್ ಟನ್‍ಗಳಷ್ಟು ಘನ ತ್ಯಾಜ್ಯ ಉತ್ಪಾದನೆಯಾಗುತ್ತಿದೆ.ತ್ಯಾಜ್ಯದ ಸಮರ್ಪಕ ನಿರ್ವಹಣೆ ಆಗದಿದ್ದಲ್ಲಿ,ಅಂತರ್ಜಲದ ಗುಣಮಟ್ಟ ಕುಸಿ ಯ ತೊಡಗುತ್ತದೆ ಹಾಗೂ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ.

ಜೈವಿಕ ಇಂಧನ,ಗೊಬ್ಬರ,ನೈರ್ಮಲ್ಯದ ಗುಂಡಿಗಳು ಹಾಗೂ ತ್ಯಾಜ್ಯ ವಿದ್ಯುತ್ ಉತ್ಪಾದನೆ ಮೂಲಕ ಅತ್ಯಧಿಕ ಮಿಶ್ರ ಅಥವಾ ಸಂಸ್ಕರಿಸಿದ ತ್ಯಾಜ್ಯವನ್ನು ಕಡಿಮೆ ಖರ್ಚಿನೊಂದಿಗೆ ವೈಜ್ಞಾನಿಕ ರೀತಿಯಲ್ಲಿ (Incineration method)ವಿಲೇವಾರಿ ಮಾಡಬಹುದಾಗಿದೆ.ಕರ್ನಾಟಕ ಸರ್ಕಾರವು ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ಮೂಲಕ ತ್ಯಾಜ್ಯ ವಿದ್ಯುತ್ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಕ್ರಮಕೈ ಗೊಂಡಿದೆ.ಅದರಂತೆ ನಿಗಮವು ದಿನ ಒಂದಕ್ಕೆ ಸುಮಾರು 600 ಟನ್‍ಗಳಷ್ಟು ಸಂಸ್ಕರಿತ ಪುರಸಭೆಯ ತ್ಯಾಜ್ಯವನ್ನು ಬಳಸಿ 11.5 ಮೆಗಾವ್ಯಾಟ್ ಸಾಮ ರ್ಥ್ಯದ ತ್ಯಾಜ್ಯ ವಿದ್ಯುತ್ ಉತ್ಪಾದನಾ ಘಟಕವನ್ನು ಬಿಡದಿಯ ಬಳಿ ನಿಗಮದ ಜಾಗದಲ್ಲಿ ಸ್ಥಾಪಿಸಲು ಉದ್ದೇಶಿ ಸಲಾಗಿದೆ.

ಇದರಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ವೈಜ್ಞಾನಿಕವಾಗಿ ಬೆಂಗಳೂರಿನ ಶೇಕಡಾ 25ರಷ್ಟು ಮಿ ಶ್ರ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗುತ್ತದೆ.ಪರಿಸರ ಸ್ನೇಹಿ ಮತ್ತು ಆರ್ಥಿಕವಾಗಿ ಸಮರ್ನೀಯ ತಂತ್ರಜ್ಞಾನ ದೊಂದಿಗೆ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸಲಾಗುವುದು.ಮಿಶ್ರ ತ್ಯಾಜ್ಯವನ್ನು ತಿಪ್ಪೆಗೆ ಸುರಿಯುವುದನ್ನು ತಪ್ಪಿಸುವ ಮೂಲಕ ಪರಿಸರವನ್ನು ಉತ್ತಮಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.ಈ ಘಟಕದ ಉಪ ಉತ್ಪನ್ನವಾಗಿ 80.59 ಮಿಲಿಯನ್ ಯೂನಿಟ್ ನಷ್ಟು ಏರಿಕೆ ಪ್ರಮಾಣದ ವಿದ್ಯುತ್ ರಾಜ್ಯದ ಜನತೆಯ ಬಳಕೆಗೆ ಲಭ್ಯವಾಗಲಿರುವುದು ಸಂತಸದ ವಿಚಾರವಾಗಿದ್ದು,ಪ್ರಧಾನ ಮಂತ್ರಿಯವರು ಚಾಲನೆ ನೀಡಿರುವ “ಆತ್ಮ ನಿರ್ಭ ರ್ ಭಾರತ್” ಯೋಜನೆಯನ್ವಯ ಈ ಯೋಜನೆಯ ನಿರ್ಮಾಣ ಕಾರ್ಯದಲ್ಲಿ ಬಳಸುವ ಹೆಚ್ಚಿನ ವಸ್ತುಗಳು ಸ್ವದೇಶಿಯದ್ದೇ ಆಗಿರುತ್ತದೆ ಎಂದು ಅವರು ತಿಳಿಸಿದರು.

ಈ ಘಟಕದ ನಿರ್ಮಾಣ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ, 2022ರ ಅಂತ್ಯದಲ್ಲಿ ಘಟ ಕವನ್ನು ಚಾಲನೆಗೊಳಿಸಬೇಕು.ಈ ಯೋಜನೆಗೆ 260 ಕೋಟಿ ರೂ.ವೆಚ್ಚ ಮಾಡಲಾಗುತ್ತಿದ್ದು,ಶೇಕಡಾ 50ರಂತೆ ಕರ್ನಾಟಕ ವಿದ್ಯುತ್ ನಿಗಮ (130 ಕೋಟಿ ರೂ.ಗಳನ್ನು) ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (130 ಕೋಟಿ ರೂ.ಗಳನ್ನು) ಬಂಡವಾಳ ಹೂಡಲಿವೆ.ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಯ ಯೋಜನೆಯಿಂದ ಬಿಬಿಎಂಪಿಗೆ ವಾರ್ಷಿಕವಾಗಿ 14 ಕೋಟಿ ರೂ.ಉಳಿತಾಯವಾಗಲಿದೆ.ಈ ಯೋಜನೆಗೆ ಕೇಂದ್ರ ಸರ್ಕಾರದ ವತಿ ಯಿಂದ ಗರಿಷ್ಠ ಶೇಕಡಾ 35 ಹಾಗೂ ರಾಜ್ಯ ಸರ್ಕಾರದ ವತಿಯಿಂದ ಗರಿಷ್ಠ ಶೇಕಡಾ 23.3 ರಷ್ಟು ಪ್ರೋತ್ಸಾಹ ಧನವನ್ನು ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ತ್ಯಾಜ್ಯ ವಿದ್ಯುತ್ ಉತ್ಪಾದನಾ ಯೋಜನೆಯಿಂದ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉದ್ಯೋಗದ ಅವಕಾಶಗಳು ಸೃಷ್ಠಿಯಾಗುವುದರೊಂದಿಗೆ,ನಾಗರೀಕ ಸೌಲಭ್ಯಗಳೂ ಲಭಿಸಲಿವೆ,ಇದಕ್ಕೆ ಪೂರಕವಾದ ಕೈಗಾರಿಕಾ ಸಹ ಘಟಕ ಗಳು ಸ್ಥಾಪಿತಗೊಳ್ಳಲಿವೆ.ಪರಿಸರ ಸಂರಕ್ಷಣೆಗಾಗಿ ರಾಜ್ಯದಲ್ಲಿ ತ್ಯಾಜ್ಯ ವಿಲೇವಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಅವರು ತಿಳಿಸಿದರು.

WhatsApp Image 2020 12 02 at 13.37.14 3
WhatsApp Image 2020 12 02 at 13.37.14 4
WhatsApp Image 2020 12 02 at 13.37.14 5
WhatsApp Image 2020 12 02 at 13.37.15

LEAVE A REPLY

Please enter your comment!
Please enter your name here