Home ಬೆಂಗಳೂರು ನಗರ ಶೀಘ್ರದಲ್ಲೇ ಅರ್ಕಾವತಿ ಬಡಾವಣೆ ನಿವೇಶನಗಳ ಹಂಚಿಕೆ : ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್

ಶೀಘ್ರದಲ್ಲೇ ಅರ್ಕಾವತಿ ಬಡಾವಣೆ ನಿವೇಶನಗಳ ಹಂಚಿಕೆ : ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್

27
0
Advertisement
bengaluru

ಬೆಂಗಳೂರು:

ಅರ್ಕಾವತಿ ಬಡಾವಣೆಯಲ್ಲಿ ನಿವೇಶನಕ್ಕಾಗಿ ಹಣ ಪಾವತಿ ಮಾಡಿರುವ ವರಿಗೆ ಆದಷ್ಟೂ ಬೇಗ ನಿವೇಶನಗಳನ್ನು ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ತಿಳಿಸಿದ್ದಾರೆ.

ಅರ್ಕಾವತಿ ಬಡಾವಣೆಯಲ್ಲಿ ನಿವೇಶನಕ್ಕಾಗಿ ಹಣ ಪಾವತಿ ಮಾಡಿದ ಸಾರ್ವಜನಿಕರು ನಿವೇಶನ ಮಂಜೂರು ಮಾಡುವಂತೆ ಅಧ್ಯಕ್ಷರಲ್ಲಿ ಮನವಿ ಮಾಡಿದರು.ಇದಕ್ಕೆ ಪ್ರತಿಕ್ರಿಯೆ ನೀಡಿದ ಬಿಡಿಎ ಅಧ್ಯಕ್ಷರು,ಈಗಷ್ಟೇ ಅಧಿ ಕಾರ ವಹಿಸಿಕೊಂಡಿದ್ದು,ಪ್ರತಿಯೊಂದು ಬಡಾವಣೆಗಳ ಸ್ಥಿತಿಗತಿ ಬಗ್ಗೆ ಪ್ರತ್ಯೇಕವಾಗಿ ಮಾಹಿತಿಗಳನ್ನು ಅಧಿಕಾರಿ ಗಳಿಂದ ಸಂಗ್ರಹ ಮಾಡುತ್ತಿದ್ದೇನೆ. ಪ್ರತಿಯೊಂದು ಬಡಾವಣೆಯ ಸಮಸ್ಯೆಗಳ ಬಗ್ಗೆ ಅವಲೋಕನ ಮಾಡುತ್ತಿ ದ್ದೇನೆ ಎಂದರು.

ಎಲ್ಲವನ್ನೂ ಅರ್ಥ ಮಾಡಿಕೊಂಡು ಸಾರ್ವಜನಿಕ ಸ್ನೇಹಿಯಾದ ನಿರ್ಧಾರಗಳನ್ನು ಕೈಗೊಳ್ಳಲು ಸ್ವಲ್ಪ ಕಾಲಾವ ಕಾಶ ಬೇಕಾಗುತ್ತದೆ. ಪ್ರಮುಖವಾಗಿ ಅರ್ಕಾವತಿ ಬಡಾವಣೆಯ ಸಮಸ್ಯೆ ಮತ್ತು ಇನ್ನಿತರೆ ಅಡೆತಡೆಗಳ ಬಗ್ಗೆ ಆಯುಕ್ತರೊಂದಿಗೆ ಚರ್ಚಿಸಿ ಹಣ ಪಾವತಿ ಮಾಡಿರುವ ಎಲ್ಲರಿಗೂ ನ್ಯಾಯ ಒದಗಿಸಿಕೊಡುವುದಾಗಿ ಭರವಸೆ ನೀಡಿದರು.

bengaluru bengaluru

ಇದೇ ರೀತಿ ಇತರೆ ಬಡಾವಣೆಗಳ ಸಮಸ್ಯೆಗಳನ್ನು ಹಂತ ಹಂತವಾಗಿ ನಿವಾರಣೆ ಮಾಡಿ ಸಾರ್ವಜನಿಕರಿಗೆ ಅನು ಕೂಲವಾಗುವಂತಹ ರೀತಿಯಲ್ಲಿ ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದ ಅವರು,ಶಿವರಾಮ ಕಾರಂತ ಬಡಾ ವಣೆ ನಿರ್ಮಾಣ ಕಾರ್ಯವನ್ನೂ ಆದಷ್ಟೂ ಶೀಘ್ರದಲ್ಲಿ ಆರಂಭಿಸಲಾಗುತ್ತದೆ ಎಂದು ತಿಳಿಸಿದರು.


bengaluru

LEAVE A REPLY

Please enter your comment!
Please enter your name here