Home ರಾಜಕೀಯ ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ತಕ್ಷಣ ರಾಜೀನಾಮೆ ನೀಡಬೇಕು: ವಿಪಕ್ಷ ನಾಯಕ ಸಿದ್ದರಾಮಯ್ಯ

ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ತಕ್ಷಣ ರಾಜೀನಾಮೆ ನೀಡಬೇಕು: ವಿಪಕ್ಷ ನಾಯಕ ಸಿದ್ದರಾಮಯ್ಯ

59
0

ಬೆಂಗಳೂರು:

ಡಿನೋಟಿಫಿಕೇಶನ್ ತನಿಖೆಗೆ ಹೈಕೋರ್ಟ್ ಆದೇಶ ನೀಡಿರುವ ಹಿನ್ನೆಲೆ ನಿಷ್ಪ ಕ್ಷಪಾತ ತನಿಖೆಗೆ ಅನುಕೂಲ ಮಾಡಿಕೊಡಲು ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ಅವರು ಕೂಡ ಲೇ ರಾಜೀನಾಮೆ ನೀಡಬೇಕೆಂದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ವಿಧಾನಸೌಧದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವ ರು,ಲೋಕಾಯುಕ್ತ ಕೋರ್ಟ್ ನಿಗಾದಲ್ಲಿ ತನಿಖೆ ನಡೆಯಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ.ಎಲ್ಲಾ ಏ ಜೆನ್ಸಿಗಳು ಯಾರ ಅಧೀನದಲ್ಲಿರುತ್ತವೆ..?ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರೆಯುವಂತಿಲ್ಲ. ಮುಖ್ಯಮಂತ್ರಿಯಾಗಿರುವುದರಿಂದ ತನಿಖೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ.ನಿಷ್ಪಕ್ಷಪಾತ ತನಿಖೆ ಆಗಲ್ಲ ಸಾಧ್ಯವಿಲ್ಲ.ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡ ಬೇಕು.ಆರೋಪದಿಂದ ಮುಕ್ತರಾಗಿ ಬಂದ್ರೆ ನಮ್ಮ ತಕರಾರಿಲ್ಲ. ಕಾನೂನು ಬಗ್ಗೆ ಗೌರವ ಇದ್ರೆ ಕೂಡಲೇ ರಾಜೀ ನಾಮೆ ನೀಡಲು ಒಂದು ಸೆಕೆಂಡ್ ಕೂಡ ಸಿಎಂ ಆಗಿ ಇರಬಾರದು.ಬಂಡನದಿಂದ ರಾಜೀನಾಮೆ ನೀಡದಿದ್ರೆ ಅವ್ರ ಹೈಕಮಾಂಡ್ ಕ್ರಮ ತೆಗೆದುಕೊಳ್ಳಬೇಕು. ಚೌಕೀದಾರ್ ಅವ್ರು ಯಡಿಯೂರಪ್ಪ ಮೇಲೆ ಕ್ರಮ ಜರುಗಿಸಬೇಕು. ಇದು ಸೀರಿಯಸ್ ಕೇಸ್,ಕೂಡಲೇ ರಾಜೀನಾಮೆ ನೀಡಿ ಎಂದು ಅವರು ಆಗ್ರಹಿಸಿದರು.

ಒಂದು ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ಬಂಡತನಕ್ಕೆ ಇಳಿದರೆ ನಾವು ಬೀದಿಗಿಳಿದು ಪ್ರತಿಭಟನೆ ಮಾಡು ತ್ತೇವೆ.ಕೂಡಲೇ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.ಯಡಿಯೂರಪ್ಪನಿಗೆ ಮಾನ ಮಾರ್ಯದಿ ಇದ್ರೆ ರಾಜೀನಾಮೆ ಕೊಡಬೇಕು.‌ರಾಜೀನಾಮೆ ನೀಡದಿದ್ದರೆ ನಾವು ಯಾವ ರೀತಿ ಹೋರಟ ಮಾಡ್ಬೇಕು ಅಂತ ಪಕ್ಷದಲ್ಲಿ ತೀರ್ಮಾನ ಮಾಡುತ್ತೇವೆ.ಈ ಕೇಸ್ ನಲ್ಲಿ ವಾರೆಂಟ್ ಕೊಡಬಹುದು ಅಥವಾ ಅರೆ ಸ್ಟ್ ಮಾಡಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಗಂಭೀರವಾದ ಆರೋಪ ಮುಖ್ಯಮಂತ್ರಿ ಯಡಿಯೂರಪ್ಪ ಮೇಲಿದೆ. ಬೆಳ್ಳಂದೂರು,ದೇವರಬಿಸನಹಳ್ಳಿ,ವರ್ತೂ ರು ವೈಟ್ ಫೀಲ್ಡ್ ನಲ್ಲಿ ಐಟಿ ಕಾರಿಡಾರ್ ಗೆ ಜಮೀನು ಭೂ ಸ್ವಾಧೀನ 126ಎಕರೆ ಭೂ ಸ್ವಾಧೀನ ಮಾಡಿದ್ದಾರೆ. 2000-01 ರಲ್ಲಿ ಭೂಸ್ವಾಧೀನವಾಗಿದೆ.ಪ್ರಿಲಿಮನರಿ ನೋಟಿಫಿಕೇಶನ್ ಗೂ ಮುನ್ನ ಡಿನೋಟಿಫಿಕೇಶನ್ ಮಾಡ ಲು ಅವಕಾಶ ಇದೆ.ಕೆಐಎಡಿಬಿ ಸ್ವಾಧೀನಕ್ಕೆ ತೆಗೆದುಕೊಂಡ ಮೇಲೆ ಮಾಡಿದ್ರೆ ಅಕ್ರಮ ಆಗುತ್ತದೆ.ಅಕ್ರಮವಾಗಿ ಡಿನೋಟಿಫಿಕೇಶನ್ ಮಾಡಿದ್ದಾರೆ.ವಾಸುದೇವರೆಡ್ಡಿ ಎಂಬುವರು ಹೈಕೋರ್ಟ್ ನಲ್ಲಿ ಅರ್ಜಿಸಲ್ಲಿಸಿದ್ದರು.ಅದರ ಮೇಲೆ ಲೋಕಾಯುಕ್ತ ತನಿಖೆಗೆ ಆದೇಶಿಸಿದ್ರು.ಡಿ.22ರಂದು ಹೈಕೋರ್ಟ್ ಏಕಸದಸ್ಯ ಪೀಠ ತನಿಖೆಗೆ ಆದೇಶ ಮಾಡಿದೆ.ರಿಟ್ ಪಿಟಿಶನ್ ಸಂಖ್ಯೆ 1543/2019ಲೋಕಾಯುಕ್ತ ಪಿಸಿಆರ್ ನಂಬರ್ 51/2013 ರಲ್ಲಿ ಸೆಕ್ಷನ್ 131,32 ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆಯಡಿ ತನಿಖೆಗೆ ಆದೇಶ ನೀಡಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿವರಿಸಿದರು.

ಎಫ್ ಐಆರ್ ರದ್ದು ಮಾಡಲು ಬಿಎಸ್ ಯಡಿಯೂರಪ್ಪ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ ಮಾಡುತ್ತಾರೆ. ತನಿಖೆಯನ್ನು ರದ್ದು ಮಾಡಲು ಸಾಧ್ಯವಿಲ್ಲ.ತನಿಖೆಗೆ ಆದೇಶ ಮಾಡಿದ್ದಾರೆ.ಲೋಕಾಯುಕ್ತ ಕೋರ್ಟ್ ನಿಗಾದ ಲ್ಲಿ ತನಿಖೆ ಆಗಬೇಕು ಅಂತ ಹೇಳಿದ್ದಾರೆ.ಆದ್ರೆ ಲೋಕಾಯುಕ್ತ ತನಿಖೆ ವಿಳಂಬವಾಗುತ್ತದೆ. ಇದರೆ ಮೇಲೆ ಹೈಕೋ ರ್ಟ್ ಆದೇಶ ಹೊರಡಿಸಿದೆ.2019 ಏಪ್ರಿಲ್ ನಲ್ಲಿ ಬಿಎಸ್ ವೈ ಹೈಕೋರ್ಟ್ ನಲ್ಲಿ ತಡೆಯಾಜ್ಞೆ ತೆಗೆದುಕೊಳ್ಳುತ್ತಾರೆ ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವುದಕ್ಕೆ ಪಕ್ಷದಲ್ಲಿ ಹಾಗೂ ಹೈ ಕ ಮಾಂಡ್ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ.ಹೀಗಾಗಿ ಪಕ್ಷದ ಹೈಕಮಾಂಡ್ ಗೆ ಮತ್ತೊಂದು ಪ್ರಮುಖ ಆಸ್ತ್ರವಾಗಿ ದೊರಕಿದೆ.2011 ರಲ್ಲೂ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರಲಿಲ್ಲ.

ಈಗ ಯಡಿಯೂರಪ್ಪ ರಾಜೀನಾಮೆ ನೀಡುತ್ತಾರೆ ಎಂದು ಯಾವುದೇ ಭರವಸೆ ಇಲ್ಲ.ನೈತಿಕತೆ,ಕಾನೂನಿಗೆ,ಸಂ ವಿಧಾನಕ್ಕೆ ಗೌರವ ನೀಡುವವರಾದರೆ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.2011ರಲ್ಲಿ ಅವರು ನಿರ್ಲಕ್ಷ್ಯ ಮಾಡಿದರು.ಅವರಿಗೆ ಯಾರೇನು ಮಾಡುತ್ತಾರೆಂಬ ಭಂಡತನವಿತ್ತು ಅದಕ್ಕೆ ರಾಜೀನಾ ಮೆ ನೀಡಲು ಹಿಂದೇಟು ಹಾಕಿದರು.ಆದರೆ ಈಗ ಅವರು ಮೆತ್ತಗಾಗಿ ಬಿಟ್ಟಿದ್ದಾರೆ.ಮತ್ತು ಸ್ವಲ್ಪ ತಿಳುವಳಿಕೆ ಹಾಗೂ ಜವಾಬ್ದಾರಿ ಬಂದಿದೆ.ಹೀಗಾಗಿ ಈ ತೀರ್ಪಿನ ಹಿನ್ನಲೆಯಲ್ಲಿ ಅವರು ಒಂದು ಕ್ಷಣ ಕುರ್ಚಿಯಲ್ಲಿ ಮುಂದಯವರೆಯಬಾರದು ಎಂದು ಅವರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್,ಮಾಜಿ ಸಚಿವ ಜಮೀರ್,ಪ್ರಕಾಶ್ ರಾಥೋಡ್, ಉಗ್ರಪ್ಪ, ಭೈರತಿ ಸುರೇಶ್ ಉಪಸ್ಥಿತರಿದ್ದರು. UNI

LEAVE A REPLY

Please enter your comment!
Please enter your name here