Home ಬೆಂಗಳೂರು ನಗರ ಮುಂದಿನ ಎರಡು ವರ್ಷಗಳಲ್ಲಿ ಬೆಂಗಳೂರು ಮತ್ತಷ್ಟು ಸುಂದರ: ಯಡಿಯೂರಪ್ಪ

ಮುಂದಿನ ಎರಡು ವರ್ಷಗಳಲ್ಲಿ ಬೆಂಗಳೂರು ಮತ್ತಷ್ಟು ಸುಂದರ: ಯಡಿಯೂರಪ್ಪ

188
0

ಬೆಂಗಳೂರು:

ವಲಸಿಗರೇ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನಮ್ಮ ಸಂಸ್ಕೃತಿ ಪರಿಚಿಸಲು ಕೆಲಸ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ವೆಟ್ ಹಾಲ್ ನಲ್ಲಿ ನಡೆದ ಬೆಂಗಳೂರು-ವಿಷನ್ 2020 ಮಾಧ್ಯಮ ಸಂವಾದವನ್ನುದ್ದೇಶಿಸಿ ಮಾತನಾಡಿದ ಯಡಿಯೂರಪ್ಪ, ಬೆಂಗಳೂರು ನಗರ ಪ್ರಗತಿಯಲ್ಲಿ ಮುಂಚೂಣಿಯಲ್ಲಿರುವ ನಗರವಾಗಿದ್ದು, 2022 ರಲ್ಲಿ ನಗರ ಹೇಗಿರಬೇಕು ಎನ್ನುವ ಬಗ್ಗೆ ಕಾರ್ಯಯೋಜನೆ ರೂಪಿಸಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಬೆಂಗಳೂಋಉ ಮತ್ತಷ್ಟು ಸುಂದರ ನಗರವಾಗಿ ರೂಪುಗೊಳ್ಳಲಿದೆ ಎಂದರು.

ಬಿಬಿಎಂಪಿ ಪ್ರಗತಿ ಬಗ್ಗೆ ಪ್ರಧಾನಿ ಮೋದಿ ಕೂಡ ಸಲಹೆ ನೀಡಿದ್ದು, ಮೋದಿ ಕರ್ನಾಟಕಕ್ಕೆ ಬಂದಾಗಲೆಲ್ಲಾ ಉದ್ಯಮ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಬಗ್ಗೆ ವಿಶೇಷ ಕಾಳಜಿ ಪ್ರದರ್ಶಿಸುತ್ತಾರೆ. ನಾನೂ ಸಹ ಇದರಿಂದ ಪ್ರಭಾವಿತನಾಗಿ ಅಭಿವೃದ್ದಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತಿದ್ದೇನೆ. ಸುಗಮ ಸಂಚಾರ ರೂಪಿಸುವುದು, ಹಸಿರು ಬೆಂಗಳೂರು ಮಾಡುವುದು, ಮೂಲ ಸೌಕರ್ಯ, ಜನಜೀವನಕ್ಕೆ ಅನುಕೂಲ ಮಾಡಿಕೊಡುವುದು. ಬಿಬಿಎಂಪಿ ಸೇರಿ ಇತರ ಇಲಾಖೆಗಳು ಜನರ ಸಮಸ್ಯೆ ತ್ವರಿತವಾಗಿ ಬಗೆಹರಿಸಬೇಕು. ಸಹಾಯ ತಂತ್ರಾಂಶಗಳನ್ನ ಬಳಸಿಕೊಳ್ಳಲು ಆದ್ಯತ ನೀಡಲಾಗುತ್ತಿದೆ ಎಂದರು.

CM at BengaluruMission2022...

ಕೆಈಗಾಗಲೇ ಆಸ್ತಿ ನೋಂದಣಿಗೆ ಆನ್ ಲೈನ್ ವ್ಯವಸ್ಥೆ ಮಾಡಲಾಗಿದೆ.ಜಾಗತಿಕವಾಗಿ ಬೆಂಗಳೂರು ಸುವರ್ಣ ನಗರವಾಗಿದೆ.ಆರ್ಥಿಕ ರಾಜಧಾನಿಯೂ ಹೌದು.ರಾಜ್ಯದ ಆರನೇ ಒಂದರಷ್ಟು ಜನಸಂಖ್ಯೆಯನ್ನು ಬೆಂಗಳೂರು ಹೊಂದಿದೆ. ವಿಶ್ವದ ತಂತ್ರಜ್ಞಾನ ಪ್ರಸಿದ್ಧ ನಗರಗಳಲ್ಲಿ ಬೆಂಗಳೂರು ಕೂಡ ಒಂದಾಗಿದೆ.ಮುಂದಿನ ಎರಡು ವರ್ಷಗಳಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ ಸವಾಲು, ಸಮಸ್ಯೆಗಳನ್ನು ಕೇಂದ್ರೀಕರಿಸಿ ಈ ಕಾರ್ಯಕ್ರಮ ಜಾರಿ ಮಾಡಲಾಗುತ್ತಿದೆ ಎಂದರು.

ಕೆರೆಗಳ ಅಭಿವೃದ್ದಿ, ರಾಜಕಾಲುವೆಗಳ ಅಭಿವೃದ್ಧಿ,ಕೃತಕ ನೆರೆ ತಪ್ಪಿಸಲು ರಾಜಕಾಲುವೆ ಅಭಿವೃದ್ಧಿ,ತ್ಯಾಜ್ಯ ನೀರು ಸಂಸ್ಕರಣೆಗೆ ಅಗತ್ಯ ಯೋಜನೆ ರೂಪಿಸಲಾಗುವುದು. ಎರಡು ಬೃಹತ್ ವೃಕ್ಷೋಧ್ಯಾನಗಳ ನಿರ್ಮಾಣ, ಹಸಿರು ಕಟ್ಟಡಗಳ ನಿರ್ಮಾಣಕ್ಕೆ ಆಧ್ಯತೆ ನೀಡಲಾಗುವುದು.ಶುದ್ಧ ನೀರು, ಗಾಳಿ ಇದ್ದು ವಾಸಕ್ಕೆ ಯೋಗ್ಯ ಮಾಡಬೇಕು ಎಂದರು.

ಬೆಂಗಳೂರು ಒನ್ ಕೇಂದ್ರಗಳ ವ್ಯಾಪ್ತಿ ವಿಸ್ತರಣೆ ಮಾಡಲಾಗುತ್ತಿದ್ದು, ಈ ಕಾರ್ಯಕ್ರಮಗಳೆಲ್ಲ ಎರಡು ವರ್ಷಗಳಲ್ಲಿ ಪೂರ್ತಿ ಆಗಬೇಕು. ಯಾವುದೇ ಕಾರಣಕ್ಕೂ ಹಣಕಾಸಿನ ತೊಂದರೆ ಆಗಬಾರದು. ಅಭಿವೃಧ್ಧಿಗಾಗಿ ಅಗತ್ಯ ಹಣವನ್ನ ಮೀಸಲಿಡಲಾಗುವುದು. ಈ ಎರಡು ವರ್ಷದಲ್ಲಿ ನೂರಕ್ಕೆ ನೂರು ಪೂರ್ಣಗೊಳಿಸಲಾಗುವುದು. ಈ ಬಗ್ಗೆ ಯಾವುದೇ ಸಂಶಯ ಇಟ್ಟುಕೊಳ್ಳುವ ಅಗತ್ಯವಿಲ್ಲ. ನೂರು ಬಾರಿ ಯೋಚನೆ ಮಾಡಿಯೇ ಕಾರ್ಯಕ್ರಮ ಮಾಡಿದ್ದೇವೆ. ಆರು ತಿಂಗಳಿಗೊಮ್ಮೆ ಸ್ಥಳ ಪರಿಶೀಲನೆ ನಡೆಸಿ ಕ ಮಾಹಿತಿ ನೀಡುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.

ಕಾರ್ಯಕ್ರಮದಲ್ಲಿ ಡಿಸಿಎಂ ಅಶ್ವಥ್ ನಾರಾಯಣ್, ಸಚಿವರಾದ ಆರ್ ಅಶೋಕ್, ಗೋಪಾಲಯ್ಯ, ಸುರೇಶ್ ಕುಮಾರ್, ಬೈರತಿ ಬಸವರಾಜ್, ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಉಪಸ್ಥಿತರಿದ್ದರು. UNI

LEAVE A REPLY

Please enter your comment!
Please enter your name here