Home ಬೆಂಗಳೂರು ನಗರ ಯಡಿಯೂರಪ್ಪನವರ ರಾಜಕೀಯ ಮಜಲುಗಳು

ಯಡಿಯೂರಪ್ಪನವರ ರಾಜಕೀಯ ಮಜಲುಗಳು

165
0
Prakash Sesharaghavachar

ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪನವರ ಕಳೆದ 50ವರ್ಷಗಳ ಅವರ ರಾಜಕೀಯದಲ್ಲಿ ಬಹುದೊಡ್ಡ ಶಕ್ತಿಯಾಗಿ ಬೆಳದಿದ್ದಾರೆ . ಕರ್ನಾಟಕದಲ್ಲಿ ಬಿಜೆಪಿಯ ಏಕಮೇವ ಅತ್ಯಂತ ಜನಪ್ರಿಯ ಜನನಾಯಕ ಎಂಬುದರಲ್ಲಿ ಎರಡು ಮಾತಿಲ್ಲ

ಪುರಸಭಾ ಸದಸ್ಯನಿಂದ ಆರಂಭವಾ ಇವರ ರಾಜಕೀಯ ಪಯಣ ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗುವವರೆಗೆ ಇವರ ರಾಜಕೀಯ ಸಾಗಿದೆ

BSY during his 2 years completio as CM announced resgination

ಶಿಕಾರಿಪುರದಲ್ಲಿ ಆರೆಸ್ಸಸ್ ತಾಲೂಕು ಕಾರ್ಯವಾಹ ಜವಾಬ್ದಾರಿಯಿಂದ ತಾಲ್ಲೂಕು ಬಿಜೆಪಿ ಅಧ್ಕಕ್ಷರಾಗಿ ನಂತರ ಶಿವಮೊಗ್ಗ ಬಿಜೆಪಿ ಅಧ್ಯಕ್ಷ ರಾಗುವವರೆಗೆ ಇವರ ಜಿಲ್ಲಾ ಮಟ್ಟದ ರಾಜಕೀಯವು ಸಾಗುತ್ತದೆ.

1983 ರಲ್ಲಿ ಶಿಕಾರಿಪುರದಿಂದ ವಿಧಾನಸಭೆಗೆ ಮೊಟ್ಟ ಮೊದಲ ಬಾರಿಗೆ ವಿಧಾನಸಭೆಯನ್ನು ಪ್ರವೇಶಿಸುತ್ತಾರೆ. ಆ ನಂತರ ಇವರು ರಾಜಕೀಯದಲ್ಲಿ ಹಿಂತಿರುಗಿ ನೋಡುವುದಿಲ್ಲ ತಮ್ಮ ರೈತಪರ ಕಾಳಜಿಯಿಂದ ರಾಜ್ಯ ರೈತರ ಕಣ್ಮಣಿಯಾಗಿ ಬಿಂಬಿತರಾಗುತ್ತಾರೆ.

ಬಗರ್ ಹುಕುಂ ಸಾಗುವಳಿ ಸಕ್ರಮ ಮಾಡಲು ರೈತರ ಸಾಲಮನ್ನಾ ಮತ್ಮಾತು ರೈತರ ಸಾಲದ ಬಡ್ಡಿ ಮನ್ನಾ ಮಾಡಲು ಒತ್ತಾಯಿಸಿ ಯಡಿಯೂರಪ್ಪನವರು ಐತಿಹಾಸಿಕ ಹೋರಾಟವನ್ನು ಕೈಗೊಂಡಿದ್ದಾರೆ. ಇವರ ಹೋರಾಟದ ಫಲವಾಗಿಯೇ ಇಂದು ಸಾಲಮನ್ನ ಯೋಜನೆಯು ಮುನ್ನಲೆಗೆ ಬಂದು ಲಕ್ಷಾಂತರ ಬಡ ರೈತರ ಪಾಲಿಗೆ ವರವಾಗಿ ಪರಿಣಮಿಸಿದೆ.

ಬಗರ್ ಹುಕುಂ ಸಾಗುವಳಿಯ ಜಮೀನು ಸಕ್ರಮ ಮಾಡಲು ಸರ್ಕಾರ ಸಮಿತಿ ರಚಿಸಿ ಅರ್ಹ ರೈತರಿಗೆ ಸಾಗುವಳಿ ಜಮೀನು ಮಂಜೂರು ಮಾಡಿದ ಕಾರಣ ಇಂದು ಸಾವಿರಾರು ರೈತರು ಇದರ ಲಾಭವನ್ನು ಪಡೆದು ಭೂ ಒಡೆಯರಾಗಿದ್ದಾರೆ.

1989 ರಲ್ಲಿ ಯಡಿಯೂರಪ್ಪನವರು ರಾಜ್ಯ ಬಿಜೆಪಿ ಅಧ್ಯಕ್ಷರಾಗುತ್ತಾರೆ. ಅದೇ ಸಮಯದಲ್ಲಿ ಅನಂತಕುಮಾರ್ ಪ್ರಧಾನ ಕಾರ್ಯದರ್ಶಿಯಾಗುತ್ತಾರೆ ಇವರಿಬ್ಬರ ಜೋಡಿ ಚಾಣಕ್ಯ ಚಂದ್ರಗುಪ್ತರ ಹಾಗೆ ಬಿಜೆಪಿಯ ಪ್ರವರ್ಧಮಾನಕ್ಕೆ ಹಗಲಿರುಳು ದುಡಿಯುತ್ತಾರೆ. ಮತ್ತು ರಾಜ್ಯದಲ್ಲಿ ಬಿಜೆಪಿಯನ್ನು ಪ್ರಬಲವಾದ ಪಕ್ಷವಾಗಿ ಕಟ್ಟಿ ನಿಲ್ಲುಸುತ್ತಾರೆ

1990 ರಲ್ಲಿ ಅಯೋಧ್ಯೆ ರಾಮಮಂದಿರ ಹೋರಾಟದ ಕಾವು ದೇಶಾದ್ಯಂತ್ಯ ಬೀಸಲು ಆರಂಭಿಸುತ್ತದೆ. ಕರ್ನಾಟಕದಲ್ಲಿಯೂ ಹೋರಾಟಕ್ಕೆ ಅತಿ ಹೆಚ್ಚಿನ ಬೆಂಬಲ ದೊರೆಯುವುದು. ಈ ಹೋರಾಟದ ಫಲವಾಗಿ ಬಿಜೆಪಿಯ ಹೆಸರು ರಾಜ್ಯದ ಹಳ್ಳಿ ಹಳ್ಳಿಗೂ ತಲಪುತ್ತದೆ. ಸಾವಿರಾರು ಯುವಕರು ಬಿಜೆಪಿಗೆ ಹರಿದು ಬಂದ ಕಾಲವದು.

1991 ರ ಲೋಕಸಭಾ ಚುನಾವಣೆಯಲ್ಲಿ ಮೊಟ್ಟ ಮೊದಲಬಾರಿಗೆ ರಾಜ್ಯದಲ್ಲಿ 4 ಸ್ಥಾನಗಳನ್ನು ಗೆಲ್ಲುತ್ತದೆ. ಈ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಯಡಿಯೂರಪ್ಪನವರು ಬಂಗಾರಪ್ಪನವರ ಹೆಂಡತಿ ತಂಗಿಯ ಗಂಡ ಶಿವಪ್ಪನವರ ಕೈಯಲ್ಲಿ ಸೋಲನ್ನು ಅನುಭವಿಸುತ್ತಾರೆ. ಇದೊಂದು ಅನಿರೀಕ್ಷಿತ ಸೋಲಾಗಿತ್ತು

94ರ ತರುವಾಯ ಯಡಿಯೂರಪ್ಪನವರ ನೇತೃತ್ವದಲ್ಲಿ ಬಿಜೆಪಿ ರಾಜ್ಯದಲ್ಲಿ ಮುಖ್ಯವಾಹಿನಿಯ ಪಕ್ಷವಾಗಿ ಎದ್ದು ನಿಲ್ಲುತ್ತದೆ.

1992ರಲ್ಲಿ ಅಯೋಧ್ಯ ಕರಸೇವೆಗೆ ಕರಸೇವಕರ ದಂಡು ಅಯೋಧ್ಯೆಗೆ ಧಾವಿಸುತ್ತದೆ. ಕರ್ನಾಟಕದಿಂದಲೂ ಸಹಸ್ರಾರು ಕಾರ್ಯಕರ್ತರು ಭಾಗವಹಿಸುತ್ತಾರೆ. ಈ ಕರಸೇವೆಯಲ್ಲಿ ಯಡಿಯೂರಪ್ಪನವರು ಒಬ್ಬ ರಾಮಭಕ್ತನಾಗಿ ಭಾಗವಹಿಸುತ್ತಾರೆ.

Yeddyurappa with Advani

ಹಿರಿಯೂರು ಕೃಷ್ಣಮೂರ್ತಿಯವರು ಸಂಘದ ಅತ್ಯಂತ ಗೌರವಾನ್ವಿತ ವ್ಯಕ್ತಿ. ಯಡಿಯೂರಪ್ಪನವರನ್ನು ರಾಜಕೀಯ ಮುನ್ನಲೆಗೆ ತರಲು ಇವರ ಕೊಡುಗೆ ಅಪಾರವಾಗಿತ್ತು. ಯಡಿಯೂರಪ್ಪನವರು ಇವರನ್ನು ತಮ್ಮ ಗುರುಗಳೆಂದು ಪರಿಗಣಿಸುತ್ತಿದ್ದರು

1991 ರ ನಂತರ ರಾಜ್ಯದಲ್ಲಿ ಬಿಜೆಪಿಯ ಹೋರಾಟ ಪರ್ವ ಆರಂಭವಾಗುತ್ತದೆ. ರಾಜ್ಯದ ಜ್ವಲಂತ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಯಡಿಯೂರಪ್ಪನವರ ನೇತೃತ್ವದಲ್ಲಿ ಅನೇಕ ಹೋರಾಟಗಳು ನಡೆಯುತ್ತದೆ. ಅಂದಿನ ಬಂಗಾರಪ್ಪ ಮತ್ತು ಮೊಯ್ಲಿ ಯವರ ಸರ್ಕಾರ ಆಂತರಿಕ ಕಚ್ಚಾಟ ಭ್ರಷ್ಟಾಚಾರಗಳಿಂದ ಜನತೆಯ ರೋಸಿ ಹೋಗಿದ್ದರು. ಇದನ್ನು ಯಡಿಯೂರಪ್ಪ ಮತ್ತು ಅನಂತ್ ಜೋಡಿ ಚನ್ನಾಗಿ ಬಳಸಿಕೊಂಡಿತ್ತು.

ಯಡಿಯೂರಪ್ಪನವರು ಬಿಡುವಿಲ್ಲದೆ ಹೋರಾಟ ಪಾದಯಾತ್ರೆ ವಿಧಾನಸೌಧ ಮುತ್ತಿಗೆ ರೈತ ಜಾಥ ಹೀಗೆ ಒಂದಲ್ಲ ಒಂದು ಹೋರಾಟದ ಮೂಲಕ ರಾಜ್ಯದ ಮೂಲೆ ಮೂಲೆಯಲ್ಲಿಯೂ ಬಿಜೆಪಿಗೆ ನೆಲೆ ದೊರಕಿಸಿಕೊಟ್ಟರು.

94 ವಿಧಾನಸಭೆ ಚುನಾವಣೆಗೆ ಮುನ್ನ ಹೆಗ್ಡೆ ಮತ್ತು ದೇವೆಗೌಡರು ಮತ್ತೆ ಒಂದಾಗದಿದ್ದರೆ ಚುನಾವಣಾ ಫಲಿತಾಂಶ ಭಿನ್ನವಾಗುವ ಸಾಧ್ಯತೆಗಳು ಇದ್ದವು. 40ಸೀಟುಗಳನ್ನು ಗೆದ್ದು ಬಿಜೆಪಿ ಮೊಟ್ಟ ಮೊದಲ ಬಾರಿಗೆ ರಾಜ್ಯದಲ್ಲಿ ಅಧಿಕೃತ ವಿರೋಧ ಪಕ್ಷವಾಗಿ ಹೊರಹೊಮ್ಮಿತ್ತು. ಯಡಿಯೂರಪ್ಪನವರು ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗುತ್ತಾರೆ.

CM Hearing Public Grivences file picture

ಹೋರಾಟಗಳಿಗೆ ಬಿಡುವು ದೊರೆಯದೆ ಆರಂಭವಾಗುತ್ತದೆ. 96 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 6 ಸ್ಥಾನಗಳನ್ನು ಗೆಲ್ಲುತ್ತದೆ. ಅನಂತಕುಮಾರ್ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಆಯ್ಕೆಯಾಗುತ್ತಾರೆ. 98 ರಲ್ಲಿ ಮತ್ತೆ ಲೋಕಸಭೆಗೆ ಚುನಾವಣೆ ನಡೆಯುತ್ತದೆ ಕೇಂದ್ರದಲ್ಲಿ ವಾಜಪೇಯಿ ನೇತೃತ್ವದಲ್ಲಿ ಮೊಟ್ಚ ಮೊದಲಬಾರಿಗೆ ಬಿಜೆಪಿ ನೇತೃತ್ವದ ನೇತೃತ್ವದ ಸರ್ಕಾರ ರಚನೆಯಾಗುತ್ತದೆ.

ಯಡಿಯೂರಪ್ಪನವರು ಅದೆಷ್ಟು ಬಾರಿ ಹಗಲು ರಾತ್ರಿ ಧರಣಿಯನ್ನು ಕೈಗೊಂಡರೊ ಲೆಕ್ಕ ಸಿಗದು. ಹಲವಾರು ರಾತ್ರಿಗಳನ್ನು ರಸ್ತೆಯಲ್ಲಿಯೇ ಕಳೆದಿರುವುದು ಇವರ ಹೆಗ್ಗಳಿಕೆ ಮತ್ತು ಜನಪರ ಹೋರಾಟದ ಬದ್ಧತೆಯನ್ನು ತೋರುತ್ತದೆ

ರಾಮಕೃಷ್ಣ ಹೆಗಡೆಯವರ ಲೋಕಶಕ್ತಿಯು ಜನತಾದಳದ ಜೊತೆ ವಿಲೀನವಾಗುತ್ತದೆ. ಇದರ ಪರಿಣಾಮ ಬಿಜಿಪಿಯ ಮೇಲೆಯು ಉಂಟಾಗುತ್ತದೆ. ಈ ಬಾರಿ ಯಡಿಯೂರಪ್ಪ ಮತ್ತು ಈಶ್ವರಪ್ಪ ಇಬ್ಬರು ಸೋಲುತ್ತಾರೆ.

1999 ರ ವಿಧಾನಸಭೆಯ ಚುನಾವಣೆಯಲ್ಲಿ ಯಡಿಯೂರಪ್ಪ ಪರಾಭವಗೊಂಡಿದ್ದರು ಪಕ್ಷ ಅವರನ್ನು 2000 ದಲ್ಲಿ ವಿಧಾನ ಪರಿಷತ್ ಸದಸ್ಯ ಮಾಡುತ್ತದೆ.

ಅನಂತ ಕುಮಾರ್ ಅಧ್ಯಕ್ಷತೆಯಲ್ಲಿ 2004ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಯು ಮೈತ್ರಿಕೂಟ 84 ಸ್ಥಾನಗಳನ್ನು ಗೆಲ್ಲುತ್ತದೆ.

Kumarswamy as CM and Yediyurappa as DyCM

2006ರಲ್ಲಿ ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದಿಂದ ಹೊರಬಂದು ಬಿಜೆಪಿಯ ಜೊತೆ 20:20ರ ಸರ್ಕಾರ ರಚನೆ ಮಾಡುತ್ತಾರೆ ಯಡಿಯೂರಪ್ಪನವರು ಉಪ ಮುಖ್ಯಮಂತ್ರಿಯಾಗಿ ಹಣಕಾಸು ಸಚಿವರಾಗಿ ಹಲವು ಜನಪರ ಯೋಜನೆಗಳನ್ನು ಆರಂಭಿಸುತ್ತಾರೆ

ತಮ್ಮ 20 ತಿಂಗಳ ಅವಧಿಯು ಮುಗಿದ ತರುವಾಯ ಕುಮಾರಸ್ವಾಮಿ ಕೊಟ್ಟ ಮಾತಿನ ಪ್ರಕಾರ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡುವುದಿಲ್ಲ. ಕುಮಾರಸ್ವಾಮಿ ವಚನಭ್ರಷ್ಟ ಪಟ್ಚವನ್ನು ಹೊರುತ್ತಾರೆ

2009ರಲ್ಲಿ ಮತ್ತೆ ವಿಧಾನಸಭೆಗೆ ಚುನಾವಣೆ ನಡೆದು ಬಿಜೆಪಿ 110 ಸ್ಥಾನಗಳನ್ನು ಗೆದ್ದು ಪಕ್ಷೇತರ ಬೆಂಬಲ ಪಡೆದು ಸರ್ಕಾರವನ್ನು ರಚನೆಯಾಗುತ್ತದೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗುತ್ತಾರೆ

2011ರಲ್ಲಿ ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಡಬೇಕಾಗುತ್ತದೆ. ಮುಂದಿನ ರಾಜಕೀಯ ಬೆಳವಣಿಗೆಯಲ್ಲಿ ಅವರು ಬಿಜೆಪಿ ತೊರೆದು ಕೆಜೆಪಿ ಸ್ಥಾಪಿಸಿ ವಿಧಾನಸಭೆಗೆ ಪ್ರತ್ಯೇಕವಾಗಿ ಸ್ಪರ್ಧಿಸಿ 6 ಸ್ಥಾನಗಳನ್ನು ಗೆಲ್ಲುತ್ತಾರೆ ಆದರೆ ಬಿಜೆಪಿಗೆ ದೊಡ್ಡ ಹಾನಿಯಾಗಿರುತ್ತದೆ.

2013ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ 40 ಸ್ಥಾನಕ್ಕೆ ಕುಸಿಯುತ್ತದೆ. ಏಕಾಂಗಿಯ ಹೋರಾಟ ಸಾಧ್ಯವಿಲ್ಲ ಎಂದು ಮನಗೊಂಡ ಯಡಿಯೂರಪ್ಪ ತಮ್ಮ ಕೆಜೆಪಿಯನ್ನು ಬಿಜೆಪಿಯಲ್ಲಿ ಅನಿವಾರ್ಯವಾಗಿ ವಿಲೀನಗೊಳಿಸುತ್ತಾರೆ.

2014 ಲೋಕಸಭಾ ಚುನಾವಣೆಯಲ್ಲಿ ಯಡಿಯೂರಪ್ಪನವರು ಶಿವಮೊಗ್ಗ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ ಮೋದಿಯವರ ಅಲೆಯಲ್ಲಿ ದೊಡ್ಡ ಬಹುಮತದಿಂದ ಆಯ್ಕೆಯಾಗುತ್ತಾರೆ

ಪಕ್ಷ ಬಿಟ್ಟು ಹೋಗಿ ವಾಪಸ್ ಹಿಂತಿರುಗಿದ ತರುವಾಯವು ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಾಯಿತು. ದೇಶದಲ್ಲಿ ಈ ಗೌರವಕ್ಕೆ ಪಾತ್ರರಾದ ಏಕೈಕ ನಾಯಕ ಯಡಿಯೂರಪ್ಪ. ಹೆಜ್ಜೆ ಹೆಜ್ಜೆಗೂ ಬಿಜಿಪಿ ಯಡಿಯೂಪ್ಪನವರಿಗೆ ಸಾಥ್ ನೀಡಿದೆ.

2018 ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಬಿಜೆಪಿ 103 ಸೀಟುಗಳನ್ನು ಗೆದ್ದು ಅಧಿಕಾರಕ್ಕೆ ಹತ್ತಿರ ಬರುತ್ತದೆ. ಆದರೆ ಮತ್ತೆ ಸರ್ಕಾರ ರಚಿಸಲು ಸಾಧ್ಯವಾಗುವುದಿಲ್ಲ. ಮತ್ತೊಮ್ಮೆ ಯಡಿಯೂರಪ್ಪನವರು ವಿರೋಧ ಪಕ್ಷದ ನಾಯಕರಾಗುತ್ತಾರೆ

Yedi takes oath fourth time

2019 ರಲ್ಲಿ ಕುಮಾರ ಸ್ವಾಮಿಯವರ ಸರ್ಕಾರ ಪತನವಾಗಿ ಯಡಿಯೂರಪ್ಪನವರು ನಾಲ್ಕನೆ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆಯನ್ನು ಏರುತ್ತಾರೆ

ತಮ್ಮ ರಾಜಕೀಯ ಜೀವನದ ಪಯಣದಲ್ಲಿ 8 ಬಾರಿ ಶಾಸಕಾರಾಗಿದ್ದಾರೆ ಒಮ್ಮೆ ವಿಧಾನ ಪರಿಷತ್ ಸದಸ್ಯ ಒಮ್ಮೆ ಲೋಕಸಭಾ ಸದಸ್ಯರಾಗಿದ್ದಾರೆ. ಮೂರು ಬಾರಿ ವಿರೋಧ ಪಕ್ಷದ ನಾಯಕ ಒಂದು ಬಾರಿ ಉಪ ಮುಖ್ಯಮಂತ್ರಿ ನಾಲ್ಕು ಬಾರಿ ಮುಖ್ಯಮಂತ್ರಿಯಾದ ಛಲಗಾರ ಯಡಿಯೂರಪ್ಪನವರು

ಕಳೆದ 50 ವರ್ಷದಲ್ಲಿ ಬಿಜೆಪಿಯ ನಾಯಕತ್ವ ಯಡಿಯೂರಪ್ಪನವರ ಶಕ್ತಿಯನ್ನು ಬೆಳಸಿ ಅದಕ್ಕೆ ತಕ್ಕದಾದ ಸ್ಥಾನವನ್ನು ಸದಾಕಾಲ ನೀಡಿ ಗೌರವಿಸಿದೆ

ಅವರ ಗೌರವಕ್ಕೆ ಧಕ್ಕೆ ಬರುವ ಹಾಗೆ ಪಕ್ಷ ಅವರೊಡನೆ ಎಂದೂ ನಡೆದುಕೊಂಡಿಲ್ಲ. ಅವರ ಹೆಸರು ಹಲವಾರು ಭ್ರಷ್ಟಾಚಾರ ಹಗರಣಗಳಲ್ಲಿ ಕೇಳಿ ಬಂದ ಸಂದರ್ಭದಲ್ಲಿಯೂ ಪಕ್ಷ ಅವರೊಡನೆ ಬಂಡೆಯ ಹಾಗೆ ನಿಂತಿತ್ತು.

ಇವರ ಆರೋಪಗಳನ್ನು ತನಿಖೆ ಮಾಡಲು ರಾಜ್ಯಪಾಲರು ಅನುಮತಿ ನೀಡಿದಾಗ ಅದರ ವಿರುದ್ದ ಬಿಜೆಪಿ ಕರ್ನಾಟಕ ಬಂದ್ ಕರೆ ನೀಡಿ ಯಡಿಯೂರಪ್ಪ ನವರನ್ನು ಬೆಂಬಲಿಸಿತ್ತು.

ಯಡಿಯೂರಪ್ಪನವರನ್ನು ಬಿಜೆಪಿ ಯಾ ವೇಳೆಯಲ್ಲಿಯೂ ಕಡೆಗಣಿಸಿಲ್ಲ ಮತ್ತು ಅವರಿಗೆ ಎಲ್ಲ ಗೌರವ ನೀಡಿದೆ. ಜನ ನಾಯಕ ಯಡಿಯೂರಪ್ಪನವರು ಬಿಜೆಪಿಯ ಆಸ್ತಿ ಅವರ ನಾಯಕತ್ವ ಮಾರ್ಗದರ್ಶನ ಪಕ್ಷ ಸದಾ ಎದುರು ನೋಡುತ್ತಿರುತ್ತದೆ

ಪ್ರಕಾಶ್ ಶೇಷರಾಘವಾಚಾರ್
sprakashbjp@gmail.com

Prakash Sesharaghavachar is a Joint Spokesperson of Karnataka BJP

Disclaimer: The opinions expressed within this article are the personal opinions of the author. The facts and opinions appearing in the article do not reflect the views of TheBengaluruLive.com and Kannada.TheBengaluruLive.com does not assume any responsibility or liability for the same.

LEAVE A REPLY

Please enter your comment!
Please enter your name here