Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಬೆಂಗಳೂರು ನಗರ
  • ಜನಸಂಪರ್ಕ ಬೆಳೆಸಿಕೊಳ್ಳಿ: ಸಿಇಓಗಳಿಗೆ ಮುಖ್ಯಮಂತ್ರಿ ಸಲಹೆ
  • ಬೆಂಗಳೂರು ನಗರ

ಜನಸಂಪರ್ಕ ಬೆಳೆಸಿಕೊಳ್ಳಿ: ಸಿಇಓಗಳಿಗೆ ಮುಖ್ಯಮಂತ್ರಿ ಸಲಹೆ

The Bengaluru Live December 30, 2021 7:30 PM
Ranking System for Zilla Panchayat CEOs says Karnataka Chief MinisterZP CEOs should visit villages to find solutions to citizen's problem; directs Karnataka Chief Minister

ಜನಸಂಪರ್ಕ ಬೆಳೆಸಿಕೊಳ್ಳಿ: ಸಿಇಓಗಳಿಗೆ ಮುಖ್ಯಮಂತ್ರಿ ಸಲಹೆ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು:

ಸಿಇಓಗಳು ಜನಸಂಪರ್ಕ ಹೊಂದಬೇಕು. ಹಳ್ಳಿಗರು ಸಮಸ್ಯೆಯ ಜೊತೆ ಜೀವನ ಮಾಡುತ್ತಾರೆ. ಸಮಸ್ಯೆಯ ಬಗ್ಗೆ ಚರ್ಚೆ ಮಾಡುವುದು ಬೇರೆ. ಸಮಸ್ಯೆಯ ಜೊತೆ ಬದುಕುವುದು ಬೇರೆ. ಅಧಿಕಾರಿಗಳು ತಳಮಟ್ಟಕ್ಕೆ ಹೋಗಿ ಸಮಸ್ಯೆಗಳ ಪರಿಹಾರದ ಬಗ್ಗೆ ಚಿಂತನೆ ಮಾಡಬೇಕು ಎಂದು ತಿಳಿಸಿದರು.

ಅವರು ಇಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆ ನಡೆಸಿ, ವಿವಿಧ ವಿಷಯಗಳ ಚರ್ಚೆ ನಡೆಸಿದ ನಂತರ ಮಾತನಾಡಿ, ಹಳ್ಳಿಗರು ಸಮಸ್ಯೆಯ ಜೊತೆ ಜೀವನ ಮಾಡುತ್ತಾರೆ. ಸಮಸ್ಯೆಯ ಬಗ್ಗೆ ಚರ್ಚೆ ಮಾಡುವುದು ಬೇರೆ. ಸಮಸ್ಯೆಯ ಜೊತೆ ಬದುಕುವುದು ಬೇರೆ. ಆದ್ದರಿಂದ ಅವರ ಸಮಸ್ಯೆ ಬಗೆಹರಿಸಲು ಶ್ರಮಿಸಬೇಕು ಎಂದು ತಿಳಿಸಿದರು.

ವಾರದಲ್ಲಿ ಮೂರು ದಿನ ಹಳ್ಳಿಗಳಿಗೆ ಭೇಟಿ ನೀಡಬೇಕು. ದಿಢೀರ್ ಭೇಟಿ ನೀಡಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲಿಸಿ. ಮಾನವೀಯತೆಯಿಂದ ಪರಿಹಾರದ ಚಿಂತನೆ ಮಾಡಿ, ಸಮಸ್ಯೆ ಬಗೆಹರಿಸುವ ಇಚ್ಛಾಶಕ್ತಿ ಇರಬೇಕು. ಗ್ರಾಮೀಣ ಜನರ ಬದುಕನ್ನುಹಸನು ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಇದನ್ನೂ ಓದಿ: ಜಿಲ್ಲಾ ಪಂಚಾಯಿತಿ ಹಾಗೂ ಸಿಇಓಗಳ ಕಾರ್ಯನಿರ್ವಹಣೆಗೆ ಶ್ರೇಯಾಂಕ ವ್ಯವಸ್ಥೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಜಿಲ್ಲೆಗಳಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಅಭಿನಂದನೀಯ. ಜಲಜೀವನ ಮಿಷನ್, ವಸತಿ, ಶಾಲೆಗಳ ದುರಸ್ತಿ ಸೇರಿದಂತೆ ಇಂದು ನಿಗದಿಪಡಿಸಿರುವ ಗುರಿಯನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಬೇಕು. ಎನ್ ಆರ್ ಇ ಜಿ ಯೋಜನೆಯಡಿ ಕ್ರಿಯಾತ್ಮಕವಾಗಿ ಕಾರ್ಯಕ್ರಮಗಳನ್ನು ರೂಪಿಸಿ. ಸರ್ಕಾರದ ಕಟ್ಟಡಗಳ ಆಸ್ತಿ ಸೃಜನೆಯ ಬಗ್ಗೆ ಗಮನ ನೀಡಬೇಕು ಎಂದು ತಿಳಿಸಿದರು.

ಸ್ತ್ರೀ ಶಕ್ತಿ ಮಾನವ ಸಂಪನ್ಮೂಲದ ದೊಡ್ಡ ಆಸ್ತಿ. ಎಸ್ ಸಿ ಎಸ್ ಟಿ, ಓಬಿಸಿ ಮಹಿಳೆಯನ್ನು ಆರ್ಥಿಕವಾಗಿ ಸಬಲರಾಗಿಸಬೇಕು. ಕರ್ನಾಟಕ ರಾಜ್ಯ ತಲಾವಾರು ಆದಾಯದಲ್ಲಿ 4 ನೇ ಸ್ಥಾನದಲ್ಲಿದೆ. ತಲಾವಾರು ಆದಾಯಕ್ಕೆ ಕೇವಲ 30 % ಜನ ಮಾತ್ರ ಕೊಡುಗೆ ನೀಡುತ್ತಿದ್ದಾರೆ. ಉಳಿದ ಶೇ.70 ರಷ್ಟು ಜನ ದಿನನಿತ್ಯದ ಬದುಕಿಗೆ ದುಡಿಯುವುದಾಗಿದೆ. ಈ ವರ್ಗದವರಿಗೆ ಆರ್ಥಿಕ ನೆರವು, ತರಬೇತಿ ನೀಡಿದರೆ ಅವರ ಜೀವನ ಮಟ್ಟ ಸುಧಾರಿಸುತ್ತದೆ. ಕೃಷಿಯಲ್ಲಿ ಶೇ.1 ರಷ್ಟು ಅಭಿವೃದ್ಧಿಯಾದರೆ, ಕೈಗಾರಿಕೆಗಳಲ್ಲಿ ಶೇ.4 ರಷ್ಟು ಹಾಗೂ ಸೇವಾ ಕ್ಷೇತ್ರದಲ್ಲಿ ಶೇ.10 ರಷ್ಟು ಅಭಿವೃದ್ಧಿಯಾಗುತ್ತದೆ ಎಂದರು.

ಸಿಇಓಗಳು ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಕನಿಷ್ಟ ಶೇ.1 ರಷ್ಟಾದರೂ ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿಪಡಿಸಿದರೆ, ಗ್ರಾಮೀಣ ಜನರ ಜೀವನದಲ್ಲಿ ಬದಲಾವಣೆ ತಂದಂತಾಗುತ್ತದೆ. ಜನರಿಗೆ ಇದರಿಂದ ವ್ಯವಸ್ಥೆಯ ಮೇಲೆ ವಿಶ್ವಾಸ ಮೂಡಿಸಲು ಸಾಧ್ಯ ಎಂದು ತಿಳಿಸಿದರು.

ಪ್ರಧಾನಿಯವರು ಮಧ್ಯವರ್ತಿಗಳ ಹಾವಳಿ ತಡೆಯಲು ಡಿಬಿಟಿ ವ್ಯವಸ್ಥೆ ಜಾರಿಗೆ ತಂದರು. ಅಂತೆಯೇ ರೈತರ ಸಂಕಷ್ಟವನ್ನು ಕಣ್ಣಾರೆ ಕಂಡು, ಅವರ ಮಕ್ಕಳ ಶಿಕ್ಷಣಕ್ಕೆ ನೆರವಾಗಲು ರೈತ ವಿದ್ಯಾನಿಧಿ ಜಾರಿಗೆ ತರಲಾಗಿದೆ. ಹಿಂದೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಸೈಕಲ್ ನೀಡಿದ್ದರಿಂದ ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಹೆಚ್ಚಿನ ಸುಧಾರಣೆ ಆಗಿತ್ತು.

ಆದ್ದರಿಂದ ಶಿಕ್ಷಣ, ಆರೋಗ್ಯ, ಉದ್ಯೋಗ ಸೃಜನೆಗೆ ಒತ್ತು ನೀಡಿ. ಶಿಶು ಮರಣ ಪ್ರಮಾಣ, ತಾಯಂದಿರ ಮರಣ ಪ್ರಮಾಣ ಹಾಗೂ ಅಪೌಷ್ಟಿಕತೆ ನಿವಾರಣೆಗೆ ಆದ್ಯತೆ ನೀಡಬೇಕು.
ಬಡವರು, ತಳವರ್ಗದ ಜನರ ಜೀವನ ಮಟ್ಟ ಸುಧಾರಣೆಗೆ ಶಿಕ್ಷಣ, ಉದ್ಯೋಗ, ಸಬಲೀಕರಣದ ಮಂತ್ರವನ್ನು ಅನುಷ್ಠಾನಗೊಳಿಸಬೇಕು. ಇದರಿಂದ ಅವರು ಸ್ವಾಭಿಮಾನದ ಬದುಕು ನಡೆಸಲು ಸಾಧ್ಯ ಎಂದು ತಿಳಿಸಿದರು.

ಅಂತೆಯೇ ಗ್ರಾಮ ಒನ್ ಯೋಜನೆಯಡಿ 30 ನಾಗರಿಕ ಸೇವೆಗಳನ್ನು ಪಂಚಾಯತ್ ಮಟ್ಟದಲ್ಲಿ ಒದಗಿಸಲಾಗುವುದು.

ಅಂತೆಯೇ ಜನಸ್ಪಂದನದಡಿ ದಾಖಲಾದ ದೂರುಗಳ ನಿವಾರಣೆಗೆ, ಸಮಸ್ಯೆ ಪರಿಹಾರಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ದಿನಕ್ಕೆ 10 ತಾಸು ಕೆಲಸ ಮಾಡಿ, 3 ದಿನ ಹಳ್ಳಿಗಳಲ್ಲಿ ಪ್ರವಾಸ ಕೈಗೊಳ್ಳಿ ಎಂದು ಸಲಹೆ ನೀಡಿದರು. ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಗಮನ ಕೇಂದ್ರೀಕರಿಸಿ. ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ನೆರವು ಪಡೆದುಕೊಂಡು ಕಾರ್ಯನಿರ್ವಹಿಸಿ, ಜನರ ಸಮಸ್ಯೆ ಬಗೆಹರಿಸಿ ಎಂದು ತಿಳಿಸಿದರು.

About the Author

The Bengaluru Live

Administrator

Visit Website View All Posts

Post navigation

Previous: ಜಿಲ್ಲಾ ಪಂಚಾಯಿತಿ ಹಾಗೂ ಸಿಇಓಗಳ ಕಾರ್ಯನಿರ್ವಹಣೆಗೆ ಶ್ರೇಯಾಂಕ ವ್ಯವಸ್ಥೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Next: 2022ನೇ ವರ್ಷದ ಕ್ಯಾಲೆಂಡರ್ ಮತ್ತು ಡೈರಿಯನ್ನು ಬಿಡುಗಡೆ ಮಾಡಿದ ಮುಖ್ಯಮಂತ್ರಿ

Related Stories

ಬೆಂಗಳೂರು ಉತ್ತರ ನಗರ ಪಾಲಿಕೆಯ ಫೋನ್-ಇನ್ ಕಾರ್ಯಕ್ರಮದಲ್ಲಿ ಲ್ಯಾಂಡ್‌ಲೈನ್ ಫೋನ್ ಮತ್ತು ಕಡತಗಳೊಂದಿಗೆ ಸಭಾ ಮೇಜಿನ ಸುತ್ತ ಕುಳಿತಿರುವ ಅಧಿಕಾರಿಗಳು
  • ಬೆಂಗಳೂರು ನಗರ

ಬೆಂಗಳೂರು ಉತ್ತರ ನಗರ ಪಾಲಿಕೆ: ಪ್ರತಿ ಶುಕ್ರವಾರ ಆಯುಕ್ತರೊಂದಿಗೆ ಫೋನ್-ಇನ್; ಮೊದಲ ಕಾರ್ಯಕ್ರಮ ನವೆಂಬರ್ 20ರಂದು

The Bengaluru Live November 18, 2026 9:29 PM
ಬೆಂಗಳೂರು ಟೆಕ್ ಸಮಿಟ್ ಹಿನ್ನೆಲೆ ಫಲಕಗಳ ಮುಂದೆ ವೇದಿಕೆಯಲ್ಲಿ ಸಾಲಾಗಿ ನಿಂತು ನೀಲಿ ವರದಿ ಪ್ರತಿಗಳನ್ನು ಹಿಡಿದಿರುವ ಎಂಟು ಮಂದಿ
  • ಬೆಂಗಳೂರು ನಗರ

ಬೆಂಗಳೂರು ಇನ್ನೋವೇಶನ್ ವರದಿ 2026: ದೇಶದ ಸ್ಥಳೀಯ ಎಐ ಸ್ಟಾರ್ಟ್‌ಅಪ್ ಹೂಡಿಕೆಯ ಶೇ.36.3 ಬೆಂಗಳೂರಿಗೆ; $211 ಶತಕೋಟಿ ಮೌಲ್ಯದ 57 ಯೂನಿಕಾರ್ನ್

The Bengaluru Live November 18, 2026 9:08 PM
ಬೆಂಗಳೂರು ಟೆಕ್ ಸಮಿಟ್ ಪ್ರದರ್ಶನ ಸಭಾಂಗಣದಲ್ಲಿ ಎರಡು ಬಿಳಿ ಕೀಬೋರ್ಡ್‌ಗಳನ್ನು ಹಿಡಿದು ಕುಳಿತಿರುವ ವ್ಯಕ್ತಿ
  • ಕರ್ನಾಟಕ
  • ಬೆಂಗಳೂರು ನಗರ

ಭಾಷೆಯ ಅಡೆತಡೆ ನಿವಾರಣೆ: ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಕ-ನಾದ ಫೋನೆಟಿಕ್ಸ್‌ನ ಸಾರ್ವತ್ರಿಕ ಭಾರತೀಯ ಭಾಷಾ ಕೀಬೋರ್ಡ್ ಅನಾವರಣ

The Bengaluru Live November 18, 2026 9:00 PM

Latest Post

ವಿಧಾನಸೌಧದಲ್ಲಿ ನಂದನ್ ನಿಲೇಕಣಿ ನೇತೃತ್ವದ ಪರೀಕ್ಷಾ ಸುಧಾರಣೆಗಳ ಉನ್ನತಾಧಿಕಾರ ಸಮಿತಿ ಪ್ರತಿನಿಧಿಗಳೊಂದಿಗೆ ಸಿಎಂ ಶಿವಕುಮಾರ್ ಸಭೆ ಕರ್ನಾಟಕ ಸರ್ಕಾರದ ಲಾಂಛನವಿರುವ ಸಮಿತಿ ಕೊಠಡಿಯಲ್ಲಿ ಉದ್ದನೆಯ ಮರದ ಮೇಜಿನ ಸುತ್ತ ಕುಳಿತಿರುವ ಮುಖ್ಯಮಂತ್ರಿ ಮತ್ತು ಅಧಿಕಾರಿಗಳು

ವಿಧಾನಸೌಧದಲ್ಲಿ ನಂದನ್ ನಿಲೇಕಣಿ ನೇತೃತ್ವದ ಪರೀಕ್ಷಾ ಸುಧಾರಣೆಗಳ ಉನ್ನತಾಧಿಕಾರ ಸಮಿತಿ ಪ್ರತಿನಿಧಿಗಳೊಂದಿಗೆ ಸಿಎಂ ಶಿವಕುಮಾರ್ ಸಭೆ

November 20, 2026 4:37 PM
1,300 ದಿನ ವಿಳಂಬ: ವಜಾಗೊಂಡಿದ್ದ ಎಂಜಿನಿಯರ್ ಮರುನೇಮಕದ ವಿರುದ್ಧ ವಸತಿ ಮಂಡಳಿಯ ಮೇಲ್ಮನವಿ ತಿರಸ್ಕರಿಸಿದ ಹೈಕೋರ್ಟ್ ಬೆಂಗಳೂರಿನ ಕರ್ನಾಟಕ ಹೈಕೋರ್ಟ್ ಕಟ್ಟಡದ ಮುಂಭಾಗದ ನೋಟ
  • ಕರ್ನಾಟಕ

1,300 ದಿನ ವಿಳಂಬ: ವಜಾಗೊಂಡಿದ್ದ ಎಂಜಿನಿಯರ್ ಮರುನೇಮಕದ ವಿರುದ್ಧ ವಸತಿ ಮಂಡಳಿಯ ಮೇಲ್ಮನವಿ ತಿರಸ್ಕರಿಸಿದ ಹೈಕೋರ್ಟ್

November 20, 2026 4:10 PM
ಪುಸ್ತಕಗಳು ನಮ್ಮ ಆಲೋಚನೆಗಳಿಗೆ ದಿಕ್ಕು ನೀಡುತ್ತವೆ, ಸಮಾಜಕ್ಕೆ ಮಾರ್ಗದರ್ಶನ ನೀಡುತ್ತವೆ: ಜಯನಗರದಲ್ಲಿ ವೀರಲೋಕದ 6ನೇ ಪುಸ್ತಕ ಸಂತೆ ಉದ್ಘಾಟಿಸಿದ ರಾಜ್ಯಪಾಲೆ ಸುಧಾ ಯಾದವ್ ಪುಸ್ತಕ ಮೇಳದ ಉದ್ಘಾಟನೆಯಲ್ಲಿ ಅಧಿಕಾರಿಗಳು ಮತ್ತು ಆಯೋಜಕರ ನಡುವೆ ಹಳದಿ ರಿಬ್ಬನ್ ಕತ್ತರಿಸುತ್ತಿರುವ ಸೀರೆಯುಟ್ಟ ಮಹಿಳೆ

ಪುಸ್ತಕಗಳು ನಮ್ಮ ಆಲೋಚನೆಗಳಿಗೆ ದಿಕ್ಕು ನೀಡುತ್ತವೆ, ಸಮಾಜಕ್ಕೆ ಮಾರ್ಗದರ್ಶನ ನೀಡುತ್ತವೆ: ಜಯನಗರದಲ್ಲಿ ವೀರಲೋಕದ 6ನೇ ಪುಸ್ತಕ ಸಂತೆ ಉದ್ಘಾಟಿಸಿದ ರಾಜ್ಯಪಾಲೆ ಸುಧಾ ಯಾದವ್

November 20, 2026 3:38 PM
ಬಸವಮಂಟಪ ಕೃತಿ: ಸಂಪುಟದಲ್ಲಿ ಚರ್ಚಿಸಿ ಲೇಖಕ ರವಿ ಹಂಜ್ ವಿರುದ್ಧ ಎಫ್‌ಐಆರ್ ದಾಖಲು, ಕಠಿಣ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಸಿಎಂ ಶಿವಕುಮಾರ್ ಹೂಮಾಲೆ ಹಾಕಿದ ಬಸವಣ್ಣನವರ ಭಾವಚಿತ್ರಕ್ಕೆ ಹೂವು ಅರ್ಪಿಸುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • Uncategorized

ಬಸವಮಂಟಪ ಕೃತಿ: ಸಂಪುಟದಲ್ಲಿ ಚರ್ಚಿಸಿ ಲೇಖಕ ರವಿ ಹಂಜ್ ವಿರುದ್ಧ ಎಫ್‌ಐಆರ್ ದಾಖಲು, ಕಠಿಣ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಸಿಎಂ ಶಿವಕುಮಾರ್

November 20, 2026 3:36 PM
ಸರ್ಕಾರಿ ಆದೇಶದಂತೆ ಇದೇ ಮೊದಲ ಬಾರಿಗೆ ಎರಡು ವರ್ಷಗಳ ಬಿ.ಎಡ್ ಪ್ರವೇಶಕ್ಕೆ ಕೆಇಎ ಕೌನ್ಸೆಲಿಂಗ್, ನವೆಂಬರ್ 30ರವರೆಗೆ ಆನ್‌ಲೈನ್ ಅರ್ಜಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಹೆಸರು ಮತ್ತು ಲಾಂಛನದ ಮುಂದೆ ತಮ್ಮ ಮೇಜಿನ ಬಳಿ ಕುಳಿತಿರುವ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ
  • Uncategorized

ಸರ್ಕಾರಿ ಆದೇಶದಂತೆ ಇದೇ ಮೊದಲ ಬಾರಿಗೆ ಎರಡು ವರ್ಷಗಳ ಬಿ.ಎಡ್ ಪ್ರವೇಶಕ್ಕೆ ಕೆಇಎ ಕೌನ್ಸೆಲಿಂಗ್, ನವೆಂಬರ್ 30ರವರೆಗೆ ಆನ್‌ಲೈನ್ ಅರ್ಜಿ

November 20, 2026 3:05 PM
ಅನುದಾನಿತ ಶಾಲೆಗಳ ಹುದ್ದೆ ಭರ್ತಿಗೆ ಪೂರ್ವಾನುಮತಿ ಅಗತ್ಯ, ಆದರೆ 2015ರ ಕಟ್-ಆಫ್ ಒಂದನ್ನೇ ಕಾರಣವಾಗಿಟ್ಟು ತಿರಸ್ಕರಿಸುವಂತಿಲ್ಲ: ಹೈಕೋರ್ಟ್ ಬೆಂಗಳೂರಿನ ಕರ್ನಾಟಕ ಹೈಕೋರ್ಟ್ ಕಟ್ಟಡದ ಮುಂಭಾಗದ ನೋಟ
  • ಕರ್ನಾಟಕ

ಅನುದಾನಿತ ಶಾಲೆಗಳ ಹುದ್ದೆ ಭರ್ತಿಗೆ ಪೂರ್ವಾನುಮತಿ ಅಗತ್ಯ, ಆದರೆ 2015ರ ಕಟ್-ಆಫ್ ಒಂದನ್ನೇ ಕಾರಣವಾಗಿಟ್ಟು ತಿರಸ್ಕರಿಸುವಂತಿಲ್ಲ: ಹೈಕೋರ್ಟ್

November 20, 2026 3:03 PM

ನೀವು ತಪ್ಪಿಸಿಕೊಂಡಿರಬಹುದು

ಕರ್ನಾಟಕ ಸರ್ಕಾರದ ಲಾಂಛನವಿರುವ ಸಮಿತಿ ಕೊಠಡಿಯಲ್ಲಿ ಉದ್ದನೆಯ ಮರದ ಮೇಜಿನ ಸುತ್ತ ಕುಳಿತಿರುವ ಮುಖ್ಯಮಂತ್ರಿ ಮತ್ತು ಅಧಿಕಾರಿಗಳು

ವಿಧಾನಸೌಧದಲ್ಲಿ ನಂದನ್ ನಿಲೇಕಣಿ ನೇತೃತ್ವದ ಪರೀಕ್ಷಾ ಸುಧಾರಣೆಗಳ ಉನ್ನತಾಧಿಕಾರ ಸಮಿತಿ ಪ್ರತಿನಿಧಿಗಳೊಂದಿಗೆ ಸಿಎಂ ಶಿವಕುಮಾರ್ ಸಭೆ

The Bengaluru Live November 20, 2026 4:37 PM
ಬೆಂಗಳೂರಿನ ಕರ್ನಾಟಕ ಹೈಕೋರ್ಟ್ ಕಟ್ಟಡದ ಮುಂಭಾಗದ ನೋಟ
  • ಕರ್ನಾಟಕ

1,300 ದಿನ ವಿಳಂಬ: ವಜಾಗೊಂಡಿದ್ದ ಎಂಜಿನಿಯರ್ ಮರುನೇಮಕದ ವಿರುದ್ಧ ವಸತಿ ಮಂಡಳಿಯ ಮೇಲ್ಮನವಿ ತಿರಸ್ಕರಿಸಿದ ಹೈಕೋರ್ಟ್

The Bengaluru Live November 20, 2026 4:10 PM
ಪುಸ್ತಕ ಮೇಳದ ಉದ್ಘಾಟನೆಯಲ್ಲಿ ಅಧಿಕಾರಿಗಳು ಮತ್ತು ಆಯೋಜಕರ ನಡುವೆ ಹಳದಿ ರಿಬ್ಬನ್ ಕತ್ತರಿಸುತ್ತಿರುವ ಸೀರೆಯುಟ್ಟ ಮಹಿಳೆ

ಪುಸ್ತಕಗಳು ನಮ್ಮ ಆಲೋಚನೆಗಳಿಗೆ ದಿಕ್ಕು ನೀಡುತ್ತವೆ, ಸಮಾಜಕ್ಕೆ ಮಾರ್ಗದರ್ಶನ ನೀಡುತ್ತವೆ: ಜಯನಗರದಲ್ಲಿ ವೀರಲೋಕದ 6ನೇ ಪುಸ್ತಕ ಸಂತೆ ಉದ್ಘಾಟಿಸಿದ ರಾಜ್ಯಪಾಲೆ ಸುಧಾ ಯಾದವ್

The Bengaluru Live November 20, 2026 3:38 PM
ಹೂಮಾಲೆ ಹಾಕಿದ ಬಸವಣ್ಣನವರ ಭಾವಚಿತ್ರಕ್ಕೆ ಹೂವು ಅರ್ಪಿಸುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • Uncategorized

ಬಸವಮಂಟಪ ಕೃತಿ: ಸಂಪುಟದಲ್ಲಿ ಚರ್ಚಿಸಿ ಲೇಖಕ ರವಿ ಹಂಜ್ ವಿರುದ್ಧ ಎಫ್‌ಐಆರ್ ದಾಖಲು, ಕಠಿಣ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಸಿಎಂ ಶಿವಕುಮಾರ್

The Bengaluru Live November 20, 2026 3:36 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ವಿಧಾನಸೌಧದಲ್ಲಿ ನಂದನ್ ನಿಲೇಕಣಿ ನೇತೃತ್ವದ ಪರೀಕ್ಷಾ ಸುಧಾರಣೆಗಳ ಉನ್ನತಾಧಿಕಾರ ಸಮಿತಿ ಪ್ರತಿನಿಧಿಗಳೊಂದಿಗೆ ಸಿಎಂ ಶಿವಕುಮಾರ್ ಸಭೆ
  • 1,300 ದಿನ ವಿಳಂಬ: ವಜಾಗೊಂಡಿದ್ದ ಎಂಜಿನಿಯರ್ ಮರುನೇಮಕದ ವಿರುದ್ಧ ವಸತಿ ಮಂಡಳಿಯ ಮೇಲ್ಮನವಿ ತಿರಸ್ಕರಿಸಿದ ಹೈಕೋರ್ಟ್
  • ಪುಸ್ತಕಗಳು ನಮ್ಮ ಆಲೋಚನೆಗಳಿಗೆ ದಿಕ್ಕು ನೀಡುತ್ತವೆ, ಸಮಾಜಕ್ಕೆ ಮಾರ್ಗದರ್ಶನ ನೀಡುತ್ತವೆ: ಜಯನಗರದಲ್ಲಿ ವೀರಲೋಕದ 6ನೇ ಪುಸ್ತಕ ಸಂತೆ ಉದ್ಘಾಟಿಸಿದ ರಾಜ್ಯಪಾಲೆ ಸುಧಾ ಯಾದವ್
  • ಬಸವಮಂಟಪ ಕೃತಿ: ಸಂಪುಟದಲ್ಲಿ ಚರ್ಚಿಸಿ ಲೇಖಕ ರವಿ ಹಂಜ್ ವಿರುದ್ಧ ಎಫ್‌ಐಆರ್ ದಾಖಲು, ಕಠಿಣ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಸಿಎಂ ಶಿವಕುಮಾರ್
©Copyright 2025 The Bengaluru Live All rights reserved. | MoreNews by AF themes.