ಕಲಬುರಗಿ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರು ಮಂತ್ರಿಸ್ಥಾನ ಸಿಗದ ಹತಾಷೆಯನ್ನು ವಿರೋಧ ಪಕ್ಷದ ನಾಯಕರ ಆರೋಪಳನ್ನು ಮಾಡಿ ಶಮನ ಮಾಡಿಕೊಳ್ಳುತ್ತಾರೆ. ಶನಿವಾರ ಕಲಬುರಗಿಯಲ್ಲಿ (Kalaburagi) ಮಾಧ್ಯಮದವರನ್ನು ಉದ್ದೇಶಿಸಿ ಮಾತಾಡಿದ ಅವರು ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದಂಥ ಗಂಭೀರ ಪ್ರಕರಣವನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಅವರನ್ನು ಗೇಲಿ ಮಾಡಲು ಬಳಸಿದರು. ಶಿವಕುಮಾರ ಅವರಿಗೆ ಮಂಗಳೂರು ಕುಕ್ಕರ್ ಹಾಗೂ ಬೆಳಗಾವಿ ಕುಕ್ಕರ್-ಎರಡರ ಮೇಲೂ ಅಪಾರ ಪ್ರೀತಿ ಅಂತ ಹೇಳುತ್ತಾರೆ. ಬೆಳಗಾವಿ ಕುಕ್ಕರ್ ಅಂದರೇನು ಅಂತ ಯತ್ನಾಳ್ ಅವರೇ ಕನ್ನಡಿಗರಿಗೆ ವಿವರಿಸಬೇಕು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
