ರಾಮ್ ಚರಣ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿರುವ ರಾಜ್ ಕುಮಾರ್ ಹಿರಾನಿ
October 10, 2023 7:43 AM 1 minute read
ಬಾಲಿವುಡ್ ನ ಖ್ಯಾತ ನಿರ್ದೇಶಕ ರಾಜ್ ಕುಮಾರ್ ಹಿರಾನಿ (Rajkumar Hirani) ಇದೀಗ ದಕ್ಷಿಣದ ನಟರತ್ತ ತಮ್ಮ ದೃಷ್ಟಿ ಬೀರಿದ್ದಾರೆ. ತೆಲುಗಿನ ಖ್ಯಾತ ನಟ ರಾಮ್ ಚರಣ್ (Ram Charan) ಅವರಿಗಾಗಿ ಹಿರಾನಿ ಸಿನಿಮಾ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ರಾಮ್ ಚರಣ್ ಜೊತೆ ಹಿರಾನಿ ಮಾತುಕತೆ ಮಾಡಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ.
ರಾಮ್ ಚರಣ್ ಮತ್ತು ರಾಜ್ ಕುಮಾರ್ ಹಿರಾನಿ ಸಿನಿಮಾ ಮಾಡಲಿದ್ದಾರೆ ಎಂದು ಒಂದು ಕಡೆ ಸುದ್ದಿಯಾದರೆ, ಅಂತಹ ಯಾವುದೇ ಮಾಹಿತಿ ಇಲ್ಲ ಎನ್ನುತ್ತಿದ್ದಾರೆ ರಾಮ್ ಚರಣ್ ಆಪ್ತರು. ಸದ್ಯ ಅಂತಹ ಯಾವುದೇ ಮಾತುಕತೆ ನಡೆದಿಲ್ಲ ಎಂದು ಹೇಳಲಾಗುತ್ತಿದೆ. ಇಷ್ಟೆಲ್ಲ ಸುದ್ದಿ ಹರಿದಾಡುತ್ತಿದ್ದರೂ ಈ ಇಬ್ಬರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಮೊನ್ನೆಯಷ್ಟೇ ಭಾರತೀಯ ಖ್ಯಾತ ಕ್ರಿಕೆಟ್ ಆಟಗಾರ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಮತ್ತು ತೆಲುಗಿನ ಖ್ಯಾತ ನಟ ರಾಮ್ ಚರಣ್ (Ram Charan) ನಿನ್ನೆಯಷ್ಟೇ ಭೇಟಿ (Meet)ಮಾಡಿದ್ದಾರೆ. ಇಬ್ಬರು ದಿಗ್ಗಜರ ಈ ಭೇಟಿ ಸಾಕಷ್ಟು ಕುತೂಹಲ ಮತ್ತು ಹತ್ತಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಧೋನಿ ಅವರು ನಿರ್ಮಾಪಕರಾಗಿ ಚಿತ್ರೋದ್ಯಮಕ್ಕೆ ಕಾಲಿಟ್ಟಿದ್ದರಿಂದ ಭೇಟಿ ಮಹತ್ವ ಕೂಡ ಪಡೆದುಕೊಂಡಿದೆ.
ಈಗಾಗಲೇ ಧೋನಿ ನಿರ್ಮಾಣ ಸಂಸ್ಥೆಯು ಒಂದು ಸಿನಿಮಾವನ್ನು ತಯಾರು ಮಾಡಿ, ಅದನ್ನು ಬಿಡುಗಡೆ ಕೂಡ ಮಾಡಿದೆ. ಆ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಕೂಡ ಸಿಕ್ಕಿತ್ತು. ಹಾಗಾಗಿ ಹಲವಾರು ಸಿನಿಮಾಗಳನ್ನು ಮಾಡುವುದಾಗಿ ಧೋನಿ ಪತ್ನಿ ಸಾಕ್ಷಿ ಘೋಷಣೆ ಮಾಡಿದ್ದರು. ಈ ಬ್ಯಾನರ್ ನಲ್ಲೇ ಧೋನಿ ಕೂಡ ನಟಿಸಬೇಕು ಎನ್ನುವ ಆಸೆಯನ್ನೂ ವ್ಯಕ್ತ ಪಡಿಸಿದ್ದರು. ಈ ನಡುವೆ ಧೋನಿ ಮತ್ತು ರಾಮ್ ಚರಣ್ ಭೇಟಿ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ.