Home Uncategorized PKL Auction 2023:ಪ್ರೋ ಕಬ್ಬಡಿ ಮೆಗಾ ಹರಾಜು: ದಾಖಲೆ ಮೊತ್ತಕ್ಕೆ ಸೆಹ್ರಾವತ್ ಸೇಲ್

PKL Auction 2023:ಪ್ರೋ ಕಬ್ಬಡಿ ಮೆಗಾ ಹರಾಜು: ದಾಖಲೆ ಮೊತ್ತಕ್ಕೆ ಸೆಹ್ರಾವತ್ ಸೇಲ್

14
0

ಪ್ರೊ ಕಬಡ್ಡಿ ಹರಾಜಿನಲ್ಲಿ ಪವನ್ ಸೆಹ್ರಾವತ್ ದಾಖಲೆ ಮೊತ್ತಕ್ಕೆ ಸೇಲ್ ಆಗಿದ್ದಾರೆ. ಭಾರತದ ಕಬಡ್ಡಿ ತಂಡದ ನಾಯಕ ಪವನ್ ಸೆಹ್ರಾವತ್,​ ಅಕ್ಟೋಬರ್​ 9, ಸೋಮವಾರ ನಡೆದ ಪ್ರೊ ಕಬಡ್ಡಿ ಲೀಗ್ ಮೆಗಾ ಆಕ್ಷನ್​ನಲ್ಲಿ ನೂತನ ದಾಖಲೆ ನಿರ್ಮಿಸಿದ್ದಾರೆ. ಹರಾಜಿನಲ್ಲಿ ಸೀದಾ ಒಂದೂವರೆ ಕೋಟಿಗೆ ಬೆಂಗಳೂರು ಬುಲ್ಸ್​ ಬಿಡ್ ಕರೆಯಿತು. ಅಂತಿಮವಾಗಿ ಬರೋಬ್ಬರಿ 2.60 ಕೋಟಿಗೆ ತೆಲುಗು ಟೈಟಾನ್ಸ್​ ಪಾಲಾಗುವ ಮೂಲಕ 2.35 ಕೋಟಿಗೆ ಸೇಲಾದ ಇರಾನ್​ನ​ ಮೊಹಮದ್ರೆಜಾ ಶಾಡ್ಲೂಯಿ ಅವರ ದಾಖಲೆಯನ್ನು ಮುರಿದಿದ್ದಾರೆ. ಪುಣೇರಿ ಪಲ್ಟನ್ ಶಾಡ್ಲೂಯಿರನ್ನು ಖರೀದಿಸಿದೆ.

ಇರಾನ್​ ಫಝೆಲ್ ಅತ್ರಾಚಲಿ ಅವರನ್ನು 1.60 ಕೋಟಿಗೆ, ಮೊಹಮ್ಮದ್ ನಭಿಭಕ್ಷ್​​ರನ್ನು ಗುಜರಾತ್ ಜೈಂಟ್ಸ್ ತನ್ನ ತೆಕ್ಕೆಗೆ ಹಾಕಿಕೊಂಡಿತು. ಇಂದು ಹರಾಜು ಮುಂದುವರಿಯಲಿದ್ದು, ಮತ್ತಷ್ಟು ಆಟಗಾರರು ಹರಾಜಿಗೆ ಒಳಗಾಗಲಿದ್ದಾರೆ. ಸೆಹ್ರಾವತ್ ಮತ್ತು ಶಾಡ್ಲೋಯಿ ಅಲ್ಲದೆ, ಮಣಿಂದರ್ ಸಿಂಗ್ ಕೂಡ ದೊಡ್ಡ ಮೊತ್ತಕ್ಕೆ ಸೇಲಾದರು. 2.12 ಕೋಟಿಗೆ ಬೆಂಗಾಲ್ ವಾರಿಯರ್ಸ್ ತಂಡಕ್ಕೆ ಖರೀದಿಯಾದರು.

The post PKL Auction 2023:ಪ್ರೋ ಕಬ್ಬಡಿ ಮೆಗಾ ಹರಾಜು: ದಾಖಲೆ ಮೊತ್ತಕ್ಕೆ ಸೆಹ್ರಾವತ್ ಸೇಲ್ appeared first on Ain Live News.

LEAVE A REPLY

Please enter your comment!
Please enter your name here