Home Uncategorized ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧಿವೇಶನ ಅಧಿವೇಶನ ಮುಂದೂಡಿಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧಿವೇಶನ ಅಧಿವೇಶನ ಮುಂದೂಡಿಕೆ

9
0

ದಾವಣಗೆರೆ:  ವೀರಶೈವ ಲಿಂಗಾಯತ ಮಹಾಸಭಾ ಅಧಿವೇಶನ (akhila bharatha Veerashaiva lingayat mahasabha) ಮುಂದೂಡಿಕೆಯಾಗಿದೆ. ದಾವಣಗೆರೆಯ ಎಂಬಿಎ ಕಾಲೇಜು ಮೈದಾನದಲ್ಲಿ ಡಿ. 24 ರಿಂದ 26ರ ವರೆಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧಿವೇಶನ ಹಮ್ಮಿಕೊಳ್ಳಲಾಗಿತ್ತು. ಆದ್ರೆ, ನಾಳೆಯಿಂದ(ಡಿಸೆಂಬರ್ 19) ವಿಧಾನಮಂಡಲ ಅಧಿವೇಶನ ಆರಂಭವಾಗುವುದರಿಂದ ವೀರಶೈವ ಲಿಂಗಾಯತ ಮಹಾಸಭಾ ಅಧಿವೇಶನವನ್ನು ಮುಂದೂಡಿಕೆ ಮಾಡಲಾಗಿದೆ. ಈ ಬಗ್ಗೆ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕ್ರಪ್ಪ ಖಚಿತಪಡಿಸಿದ್ದಾರೆ.

ದಾವಣಗೆರೆಯಲ್ಲಿ ಇಂದು(ಡಿಸೆಂಬರ್ 18) ಸುದ್ದಿಗಾರರೊಂದಿಗೆ ಮಾತನಾಡಿದ ಶಾಮನೂರು ಶಿವಶಂಕ್ರಪ್ಪ, ನಾಳೆಯಿಂದ ವಿಧಾನಮಂಡಲ ಅಧಿವೇಶನ ಹಿನ್ನೆಲೆ ಡಿ.24, 25, 26ರಂದು ನಡೆಯಬೇಕಿದ್ದ ಅಧಿವೇಶನ ಮುಂದೂಡಿಕೆ ಮಾಡಲಾಗಿದ್ದು, 2023ರ ಫೆಬ್ರವರಿ 11, 12, 13ರಂದು ಮಹಾಸಭಾ ಅಧಿವೇಶನ ನಡೆಯಲಿದೆ. ಜನಪ್ರತಿನಿಧಿಗಳು, ಮುಖಂಡರ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗಿದೆ. ಎಂದು ಮಾಹಿತಿ ನೀಡಿದರು.

ಇನ್ನು ಇದೇ ವೇಳೆ ವೀರಶೈವ ಮಹಾಸಭಾವನ್ನ ರಾಜಕೀಯಕ್ಕೆ ಬಳಕೆ ಎಂಬ ಕೆಂಪಣ್ಣ ಆರೋಪಕ್ಕೆ ಪ್ರತಿಕ್ರಿಯಿಸಿದ ಶಾಮನೂರು, ಕೆಂಪಣ್ಣನಿಗೂ ಮಹಾಸಭಾಗೂ ಏನು ಸಂಬಂಧ. ನೋಟಿಸ್ ನೀಡುವುದಾಗಿ ಹೇಳಿದ್ದ ಕೆಂಪಣ್ಣ, ಇದುವರೆಗೂ ನಮಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ಕಿಡಿಕಾರಿದರು.

ಜಾಮ್‌ದಾರ್ ಮತ್ತೊಂದು ಅಧಿವೇಶನ ಮಾಡಲಿ ನಾವೇನು ಬೇಡಾ ಅಂತೀವ. ಸಮಾಜಕ್ಕೆ ಏನಾದ್ರು ಕೊಡುಗೆ ಇದ್ಯ ಆತನದ್ದು. ಅವರ ಸಂಬಂಧಿಕರಿಗೆ ಏನಾದ್ರು ಒಳ್ಳೆದು ಮಾಡಿದ್ದಾನಾ? ಸಮಾಜ ಮುಂದುವರೆಯುವುದನ್ನು ನೋಡಬೇಕು. ಒಗ್ಗಟ್ಟು ಇದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ. ಬೈಲಾದ ಪ್ರಕಾರ ಲಿಂಗಾಯತ ಎನ್ನುವ ಪದವನ್ನು ಸೇರಿಸಲಾಗಿದೆ ಎಂದು ಶಾಮನೂರು ಹೇಳಿದರು. ಈ ಮೂಲಕ ವೀರಶೈವ ಮಹಾಸಭಾದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದ ನಿವೃತ್ತಿ ಐಎಎಸ್ ಅಧಿಕಾರಿ ಎಸ್ ಎಂ ಜಾಮದಾರ್, ಪ್ರತ್ಯೇಕ ಲಿಂಗಾಯತ ಅಧಿವೇಶನ ಮಾಡಲು ನಿರ್ಧಾರಕ್ಕೆ ಟಾಂಗ್ ಕೊಟ್ಟರು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

LEAVE A REPLY

Please enter your comment!
Please enter your name here