Home Uncategorized ಫಿಫಾ ವಿಶ್ವಕಪ್ ಫೈನಲ್​ನಲ್ಲಿ ಟೀಂ ಇಂಡಿಯಾದ ಬೆಂಬಲ ಯಾವ ತಂಡಕ್ಕೆ? ನಾಯಕ ರಾಹುಲ್ ಹೇಳಿದ್ದಿದು

ಫಿಫಾ ವಿಶ್ವಕಪ್ ಫೈನಲ್​ನಲ್ಲಿ ಟೀಂ ಇಂಡಿಯಾದ ಬೆಂಬಲ ಯಾವ ತಂಡಕ್ಕೆ? ನಾಯಕ ರಾಹುಲ್ ಹೇಳಿದ್ದಿದು

12
0
Advertisement
bengaluru

ಚಟ್ಟೋಗ್ರಾಮ್​ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಬಾಂಗ್ಲಾದೇಶವನ್ನು 188 ರನ್‌ಗಳಿಂದ ಸೋಲಿಸಿದ ಭಾರತ (India vs Bangladesh) 2 ಟೆಸ್ಟ್‌ಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ಕೆಎಲ್ ರಾಹುಲ್ ನಾಯಕತ್ವದಲ್ಲಿ ಭಾರತ ತಂಡ 5ನೇ ಹಾಗೂ ಕೊನೆಯ ದಿನದ ಮೊದಲ ಸೆಷನ್​ನಲ್ಲಿಯೇ ಬಾಂಗ್ಲಾ ತಂಡವನ್ನು ಆಲೌಟ್ ಮಾಡುವಲ್ಲಿ ಯಶಸ್ವಿಯಾಯಿತು. ಗೆಲುವಿನ ನಂತರ ಟೀಂ ಇಂಡಿಯಾ ಇದೀಗ ಭಾನುವಾರ ಅರ್ಜೆಂಟೀನಾ ಮತ್ತು ಫ್ರಾನ್ಸ್ (Argentina and France) ನಡುವೆ ನಡೆಯಲಿರುವ ಫಿಫಾ ವಿಶ್ವಕಪ್‌ನ ಫೈನಲ್‌ ಪಂದ್ಯದ ವೀಕ್ಷಣಗೆ ತಯಾರಿ ಆರಂಭಿಸಿದೆ. ಫೈನಲ್ ಬಗ್ಗೆ ಟೀಂ ಇಂಡಿಯಾ (Team India) ಮಾಡಿರುವ ಪ್ಲಾನಿಂಗ್ ಏನು ಎಂಬುದನ್ನು ಬಾಂಗ್ಲಾದೇಶ ವಿರುದ್ಧದ ಗೆಲುವಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಕೆಎಲ್ ರಾಹುಲ್ (KL Rahul) ಬಹಿರಂಗಪಡಿಸಿದ್ದಾರೆ.

ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದ ನಾಯಕ ಕೆಎಲ್ ರಾಹುಲ್ ಅವರನ್ನು ಫಿಫಾ ವಿಶ್ವಕಪ್​ ಫೈನಲ್​ನಲ್ಲಿ ಯಾವ ತಂಡವನ್ನು ಬೆಂಬಲಿಸುವುದಾಗಿ ಕೇಳಲಾಯಿತು. ಈ ಪ್ರಶ್ನೆಗೆ ಉತ್ತರಿಸಿದ ರಾಹುಲ್, ತಂಡದ ಬಹುತೇಕ ಆಟಗಾರರು ಬೆಂಬಲಿಸುತ್ತಿದ್ದ ತಂಡಗಳು ಈಗಾಗಲೇ ಟೂರ್ನಿಯಿಂದ ಹೊರಬಿದ್ದಿವೆ. ಭಾರತದ ಹೆಚ್ಚಿನ ಆಟಗಾರರು ಬ್ರೆಜಿಲ್ ಮತ್ತು ಇಂಗ್ಲೆಂಡ್‌ ತಂಡದ ಅಭಿಮಾನಿಗಳಾಗಿದ್ದರು. ಆದರೆ ಈ ಎರಡೂ ತಂಡಗಳು ಈಗಾಗಲೇ ಟೂರ್ನಿಯಿಂದ ಹೊರಬಿದ್ದಿವೆ. ಹೀಗಾಗಿ ಈಗ ನಾವು ಅಂತಿಮ ಪಂದ್ಯವನ್ನು ಆನಂದಿಸುತ್ತೇವೆ.

2. ಡಿನ್ನರ್ ಜೊತೆ ಫೈನಲ್‌ ವೀಕ್ಷಣೆ

ಆದರೆ ಫೈನಲ್​ನಲ್ಲಿರುವ ಅರ್ಜೆಂಟೀನಾವನ್ನು ಯಾರು ಬೆಂಬಲಿಸುತ್ತಿದ್ದಾರೆ ಅಥವಾ ಫ್ರಾನ್ಸ್ ತಂಡವನ್ನು ಯಾರು ಬೆಂಬಲಿಸುತ್ತಿದ್ದಾರೆಂದು ನನಗೆ ತಿಳಿದಿಲ್ಲ. ಆದರೆ ಇಡೀ ತಂಡವು ಇಂದು ರಾತ್ರಿ ಡಿನ್ನರ್ ಜೊತೆ ಫೈನಲ್ ಪಂದ್ಯವನ್ನು ಒಟ್ಟಿಗೆ ವೀಕ್ಷಿಸಲಿದೆ. ಈ 5 ದಿನಗಳು ತುಂಬಾ ಆಯಾಸವಾಗಿತ್ತು. ಇದೀಗ ಫೈನಲ್ ಪಂದ್ಯ ವೀಕ್ಷಿಸಿದ ಬಳಿಕ ಆಟಗಾರರು ವಿಶ್ರಾಂತಿ ಪಡೆಯಲಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ.

bengaluru bengaluru

WTC ಪಾಯಿಂಟ್​ ಪಟ್ಟಿಯಲ್ಲಿ ಭಾರಿ ಬದಲಾವಣೆ; ಒಂದೇ ದಿನ ಎರಡು ಸ್ಥಾನ ಮೇಲೇರಿದ ಟೀಂ ಇಂಡಿಯಾ!

3. ಫಾಲೋ ಆನ್ ನೀಡದ ಭಾರತ

ಪಂದ್ಯದ ಕುರಿತು ಮಾತನಾಡುವುದಾದರೆ, ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 404 ರನ್​ಗಳಿಗೆ ಮೊದಲ ಇನ್ನಿಂಗ್ಸ್‌ ಮುಗಿಸಿತು. ನಂತರ ಬಾಂಗ್ಲಾದೇಶವನ್ನು 150 ರನ್​ಗಳಿಗೆ ಆಲೌಟ್ ಮಾಡುವುದರೊಂದಿಗೆ ಭಾರತೀಯ ಬೌಲರ್‌ಗಳು ಪ್ರಬಲ ಮುನ್ನಡೆ ಸಾಧಿಸಿದರು. ಆದರೆ ಇಲ್ಲಿ ಫಾಲೋ ಆನ್ ನೀಡುವ ಬದಲು ಮತ್ತೊಮ್ಮೆ ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಟೀಂ ಇಂಡಿಯಾ 2 ವಿಕೆಟ್ ನಷ್ಟಕ್ಕೆ 258 ರನ್ ಗಳಿಸಿ ಎರಡನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿ ಬಾಂಗ್ಲಾದೇಶಕ್ಕೆ 513 ರನ್ ಟಾರ್ಗೆಟ್ ನೀಡಿತು. ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಬಾಂಗ್ಲಾ ತಂಡ 324 ರನ್​ಗಳಿಗೆ ಆಲೌಟ್ ಆಗುವುದರೊಂದಿಗೆ ಭಾರತದೆದುರು 188 ರನ್​ಗಳ ಸೋಲು ಒಪ್ಪಿಕೊಂಡಿತು.

4. ಕುಲ್ದೀಪ್ ಮ್ಯಾಜಿಕ್

ಬಾಂಗ್ಲಾದೇಶ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ಜಾಕಿರ್ ಹಸನ್ ಶತಕ ಸಿಡಿಸಿರೆ, ನಾಯಕ ಶಕೀಬ್ ಅಲ್ ಹಸನ್ 84 ರನ್ ಗಳಿಸಿದರು. ಆದರೆ ಕೊನೆಯ ದಿನ ಬಾಂಗ್ಲಾದೇಶದ ಲಯವನ್ನು ಹಾಳು ಮಾಡಿದ ಭಾರತೀಯ ಬೌಲರ್‌ಗಳು ಮತ್ತು ಇಡೀ ತಂಡವನ್ನು 324 ರನ್‌ಗಳಿಗೆ ಕಟ್ಟಿಹಾಕಿದರು. 22 ತಿಂಗಳ ಸುದೀರ್ಘ ಕಾಯುವಿಕೆಯ ನಂತರ ಟೆಸ್ಟ್ ತಂಡಕ್ಕೆ ಮರಳಿದ ಕುಲ್ದೀಪ್ ಯಾದವ್ 40 ರನ್ ಜೊತೆಗೆ ಎರಡೂ ಇನ್ನಿಂಗ್ಸ್‌ಗಳಲ್ಲಿ ಒಟ್ಟು 8 ವಿಕೆಟ್‌ಗಳನ್ನು ಕಬಳಿಸುವುದರೊಂದಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ


bengaluru

LEAVE A REPLY

Please enter your comment!
Please enter your name here