Home Uncategorized ಅನುದಾನ ಬಿಡುಗಡೆ ವಿಚಾರ: ಕಾಂಗ್ರೆಸ್ ವಿರುದ್ಧ ಸಿಎಂ ಬೊಮ್ಮಾಯಿ ವಾಗ್ದಾಳಿ

ಅನುದಾನ ಬಿಡುಗಡೆ ವಿಚಾರ: ಕಾಂಗ್ರೆಸ್ ವಿರುದ್ಧ ಸಿಎಂ ಬೊಮ್ಮಾಯಿ ವಾಗ್ದಾಳಿ

5
0
bengaluru

ಆನೆಗುಂದಿ ಕಾಮಗಾರಿಗೆ ರೂ.125 ಕೋಟಿ ಅನುದಾನ ಮಂಜೂರಾದರೂ ಏಕೆ ಬಿಡುಗಡೆ ಮಾಡಿಲ್ಲ ಎಂದು ಪ್ರಶ್ನೆ ಮಾಡಿದ್ದ ಕಾಂಗ್ರೆಸ್ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ವಾಗ್ದಾಳಿ ನಡೆಸಿದರು. ಕೊಪ್ಪಳ: ಆನೆಗುಂದಿ ಕಾಮಗಾರಿಗೆ ರೂ.125 ಕೋಟಿ ಅನುದಾನ ಮಂಜೂರಾದರೂ ಏಕೆ ಬಿಡುಗಡೆ ಮಾಡಿಲ್ಲ ಎಂದು ಪ್ರಶ್ನೆ ಮಾಡಿದ್ದ ಕಾಂಗ್ರೆಸ್ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ವಾಗ್ದಾಳಿ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದಲ್ಲಿ ಕಾರ್ಯಗಳು ಹೇಗೆ ನಡೆಯುತ್ತವೆ ಎಂಬುದನ್ನು ಕಾಂಗ್ರೆಸ್ ನಾಯಕರು ತಿಳಿದುಕೊಳ್ಳಬೇಕು. ಯೋಜನೆಗಳಿಗೆ ಅನುಮೋದನೆಯ ನೀಡಿದ ಬಳಿಕ ಸರ್ಕಾರವು ಆದೇಶವನ್ನು ನೀಡುತ್ತದೆ. ನಂತರ ಗುತ್ತಿಗೆಗಳನ್ನು ಕರೆಯಲಾಗುತ್ತದೆ. ನಂತರ ಕಾಮಗಾರಿ ಪೂರ್ಣಗೊಂಡ ಬಳಿಕ ಬಿಲ್‌ಗಳನ್ನು ತೆರವುಗೊಳಿಸಲಾಗುತ್ತದೆ. ಬಿಲ್ ನೀಡದೆ ಹಣ ಪಾವತಿ ಮಾಡುವುದು ಕಾಂಗ್ರೆಸ್ ನ ಸಂಸ್ಕೃತಿ ಎಂದು ತಿರುಗೇಟು ನೀಡಿದರು.

ಬಳಿಕ ಮಾಜಿ ಸಿಎಂ ಆಪ್ತರ ಆಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಲಾಗುವುದಿಲ್ಲ. ಹೇಳಿಕೆ ಕೊಟ್ಟವರು ಅದಕ್ಕೆ ಜವಾಬ್ದಾರರು ಎಂದ ಅವರು, ಸಚಿವ ವಿ ಸೋಮಣ್ಣ ಅವರು ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಸ್ನೇಹಿತರು ಎಂದಿರುವ ಬಗ್ಗೆ ಉತ್ತರಿಸಿ ಅವರೊಂದಿಗೆ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ. ಸೋಮಣ್ಣ ನಮ್ಮದು 35 ವರ್ಷಗಳ ಸಂಬಂಧ ಎಂದರು. ಅದು ಸತ್ಯ ಎಂದು ಹೇಳಿದರು.

bengaluru

LEAVE A REPLY

Please enter your comment!
Please enter your name here