Home Uncategorized ಆಶಾ ಭೋಸ್ಲೆ ಹಾಡಿರುವ ‘ಶರಾರಾ ಶರಾರಾ’ಗೆ ನೇಪಾಳಿ ಹುಡುಗನ ಈ ನೃತ್ಯ, ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ

ಆಶಾ ಭೋಸ್ಲೆ ಹಾಡಿರುವ ‘ಶರಾರಾ ಶರಾರಾ’ಗೆ ನೇಪಾಳಿ ಹುಡುಗನ ಈ ನೃತ್ಯ, ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ

2
0
bengaluru

Viral Video : ಬಾಲಿವುಡ್​ ಹಾಡುಗಳ ಬಗ್ಗೆ ವಿದೇಶಿಗರಿಗೆ ವಿಶೇಷ ಆಕರ್ಷಣೆ ಎನ್ನುವುದಕ್ಕೆ ಆಗಾಗ ವೈರಲ್ ಆಗುವ ಡ್ಯಾನ್ಸ್​ ವಿಡಿಯೋಗಳೇ ಸಾಕ್ಷಿ. ಈ ನೇಪಾಳಿ ಹುಡುಗನ ನೃತ್ಯ ಇದೀಗ ಟ್ರೆಂಡಿಂಗ್​ನಲ್ಲಿದೆ. ಖ್ಯಾತ ಗಾಯಕಿ ಆಶಾ ಭೋಸ್ಲೆ ಹಾಡಿರುವ  ಶರಾರಾ ಶರಾರಾ ಹಾಡಿಗೆ ಈ ಹುಡುಗ ಹೆಜ್ಜೆ ಹಾಕಿದ್ದಾನೆ. ಇವನ ಮೈಯ್ಯಲ್ಲಿ ಸ್ಪ್ರಿಂಗ್​ ಇದೆಯೇ? ಎಂದು ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ. ಎಷ್ಟೊಂದು ತನ್ಮಯನಾಗಿ ನರ್ತಿಸಿದ್ಧಾನೆ ನೋಡಿ ಈ ಪುಟ್ಟ ಬಾಲಕ!

 

 

View this post on Instagram

 

bengaluru

A post shared by Gaurav Sitoula (@gauravsitoula_)

ಗೌರವ್ ಸಿತೌಲಾ ಎನ್ನುವ ಇನ್​ಸ್ಟಾಗ್ರಾಂ ಖಾತೆದಾರರು ಈ ವಿಡಿಯೋ ಹಂಚಿಕೊಂಡಿದ್ದಾರೆ. ಈಗಾಗಲೇ 64,000 ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ. 2002ರಲ್ಲಿ ಬಿಡುಗಡೆಯಾದ ಮೇರೆ ಯಾರ್ ಕೀ ಶಾದೀ ಹೈ ಸಿನೆಮಾದ ಹಾಡು ಇದು. ಜಾವೇದ್ ಅಖ್ತರ್ ಸಾಹಿತ್ಯ, ಜೀತ್-ಪ್ರೀತಮ್ ಸಂಗೀತ ಈ ಹಾಡಿಗಿದೆ.

ಅನೇಕರು ಪ್ರತಿಕ್ರಿಯಿಸಿದ್ದಾರೆ. ಅಣ್ಣಾ ನಿನ್ನ ಡ್ಯಾನ್ಸ್​ ಹುಡುಗಿಯರನ್ನೂ ನಾಚಿಸುವಂತಿದೆಯಲ್ಲೋ ಎಂದಿದ್ದಾರೆ ಒಬ್ಬರು. ಕೆಲವರು ನೃತ್ಯವನ್ನು ಹೀಗಳೆದಿದ್ದಾರೆ. ನಕಾರಾತ್ಮಕ ಟೀಕೆಗಳನ್ನು ಮಾಡಿದವರಿಗೆ ನಿನ್ನ ಅದ್ಭುತವಾದ ನೃತ್ಯ ನೋಡಿ ಹೊಟ್ಟೆಯುರಿ, ಅದಕ್ಕೆ ಹಾಗೆ ಹೇಳಿದ್ಧಾರೆ. ನೀನು ಧೃತಿಗೆಡಬೇಡ, ನಿನಗಿಷ್ಟವಾದುದನ್ನು ಮುಂದುರಿಸು ಎಂದು ಹುರುದುಂಬಿಸಿದ್ದಾರೆ ಉಳಿದವರು. ನಿಧಾನ ಅಣ್ಣಾ ಸೊಂಟ ಮುರಿದು ಹೋದೀತು ಎಂದವರೂ ಇದ್ದಾರೆ. ಏನೇ ಆಗಲಿ ನೀ ಡ್ಯಾನ್ಸ್​ ಮಾಡುವುದನ್ನು ನಿಲ್ಲಿಸಬೇಡ ಎಂದಿದ್ದಾರೆ ಹಲವರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

 

bengaluru

LEAVE A REPLY

Please enter your comment!
Please enter your name here