Home Uncategorized ಇನ್ನೊಂದು ವಾರದಲ್ಲಿ ರಾಜ್ಯ ಬಜೆಟ್ ಮಂಡನೆ: ಅಬಕಾರಿ ಗುರಿ 29 ಸಾವಿರ ಕೋಟಿ ರೂಪಾಯಿಯಿಂದ 32 ಸಾವಿರ ಕೋಟಿ ರೂ.ಗೆ...

ಇನ್ನೊಂದು ವಾರದಲ್ಲಿ ರಾಜ್ಯ ಬಜೆಟ್ ಮಂಡನೆ: ಅಬಕಾರಿ ಗುರಿ 29 ಸಾವಿರ ಕೋಟಿ ರೂಪಾಯಿಯಿಂದ 32 ಸಾವಿರ ಕೋಟಿ ರೂ.ಗೆ ಹೆಚ್ಚಳ

21
0

ರಾಜ್ಯ ಸರ್ಕಾರಕ್ಕೆ ಬರುವ ಆದಾಯ ಮೂಲಗಳಲ್ಲಿ ಪ್ರಮುಖವಾದದ್ದು ಅಬಕಾರಿ ಖಾತೆ. ಕರ್ನಾಟಕ ಸರ್ಕಾರವು 2022-23ನೇ ಹಣಕಾಸು ವರ್ಷದ ಆದಾಯ ರಾಜ್ಯ ಅಬಕಾರಿ ಇಲಾಖೆಯ ಗುರಿಯನ್ನು 29 ಸಾವಿರ ಕೋಟಿ ರೂಪಾಯಿಗಳಿಂದ 32 ಸಾವಿರ ಕೋಟಿ ರೂಪಾಯಿಗಳಿಗೆ ಹೆಚ್ಚಿಸಿದೆ. ಇದೇ ಫೆಬ್ರವರಿ 17 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ ಮಂಡಿಸಲಿದ್ದಾರೆ. ಅದಕ್ಕೆ ಕೆಲವು ದಿನಗಳ ಮೊದಲು ಪರ ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಬರುವ ಆದಾಯ ಮೂಲಗಳಲ್ಲಿ ಪ್ರಮುಖವಾದದ್ದು ಅಬಕಾರಿ ಖಾತೆ. ಕರ್ನಾಟಕ ಸರ್ಕಾರವು 2022-23ನೇ ಹಣಕಾಸು ವರ್ಷದ ಆದಾಯ ರಾಜ್ಯ ಅಬಕಾರಿ ಇಲಾಖೆಯ ಗುರಿಯನ್ನು 29 ಸಾವಿರ ಕೋಟಿ ರೂಪಾಯಿಗಳಿಂದ 32 ಸಾವಿರ ಕೋಟಿ ರೂಪಾಯಿಗಳಿಗೆ ಹೆಚ್ಚಿಸಿದೆ. ಇದೇ ಫೆಬ್ರವರಿ 17 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ ಮಂಡಿಸಲಿದ್ದಾರೆ. ಅದಕ್ಕೆ ಕೆಲವು ದಿನಗಳ ಮೊದಲು ಪರಿಷ್ಕರಿಸಿದೆ. 

ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಮದ್ಯದ ಬಳಕೆಯಲ್ಲಿ ಶೇಕಡಾ 20 ರಿಂದ 30 ರಷ್ಟು ಹೆಚ್ಚಳ ಮತ್ತು ಫುಡ್ ಅಂಡ್ ಬಿವರೇಜ್ ಹೆಚ್ಚಳದಿಂದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿ 3 ಸಾವಿರ ಕೋಟಿ ರೂಪಾಯಿಗಳ ಗುರಿಯನ್ನು ಹೊಂದಲಾಗಿದ್ದು, ಅಬಕಾರಿ ಆದಾಯದ ಗುರಿಯಲ್ಲಿ ಮಧ್ಯಂತರ ಹೆಚ್ಚಳದ ಹಿಂದಿನ ಪ್ರಮುಖ ಕಾರಣಗಳು ಎಂದು ಹೇಳಲಾಗುತ್ತದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚುನಾವಣಾ ವರ್ಷದಲ್ಲಿ ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು (ಎಇಡಿ) ಹೆಚ್ಚಿಸದಿದ್ದರೂ, ರಾಜ್ಯ ಅಬಕಾರಿ ಆದಾಯದ ಗುರಿಯನ್ನು ಇನ್ನೂ 2,000 ಕೋಟಿ ರೂಪಾಯಿಗಳಿಂದ 3,000 ಕೋಟಿ ರೂಪಾಯಿಗೆ ಹೆಚ್ಚಿಸಬಹುದು ಎಂಬ ಊಹಾಪೋಹವಿದೆ. 

ಬೆಂಗಳೂರಿನಂತಹ ಮಹಾನಗರಗಳಲ್ಲಿ ಅದ್ದೂರಿ ಮತ್ತು ವಿಸ್ತಾರವಾದ ಹೊಸ ಮದ್ಯದ ಅಂಗಡಿಗಳ ಸಂಖ್ಯೆಯು ಉದ್ಯಮದ ಬೆಳವಣಿಗೆಯನ್ನು ಸೂಚಿಸುತ್ತಿದೆ. ಆದರೆ ಮಾರ್ಚ್ ಅಂತ್ಯದ ವೇಳೆಗೆ 3 ಸಾವಿರ ಕೋಟಿ ರೂಪಾಯಿಗಳ ಆದಾಯದ ಗುರಿ ಸಾಧಿಸಲು ಕಷ್ಟವಾಗಬಹುದು ಎಂದು ಹೇಳುತ್ತಾರೆ. 

ಅಬಕಾರಿ ಇಲಾಖೆಯು ಹಂಚಿಕೊಂಡ ಅಂಕಿಅಂಶಗಳ ಪ್ರಕಾರ, ಏಪ್ರಿಲ್ 2022 ರಿಂದ ಜನವರಿ 2023 ರವರೆಗೆ 24,724.27 ಕೋಟಿ ರೂಪಾಯಿ ಸಂಗ್ರಹವಾಗಿದೆ, ಇದು 29,000 ಕೋಟಿ ರೂಪಾಯಿಗಳ ಆದಾಯದ ಗುರಿಯ ಶೇಕಡಾ 85.26 ರಷ್ಟಿದೆ. ಕಳೆದ 2021-22 ರ ಆರ್ಥಿಕ ವರ್ಷಕ್ಕೆ ಹೋಲಿಸಿದರೆ, ರಾಜ್ಯ ಅಬಕಾರಿಯು  21,549.94 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ, ಇದು ಆ ವರ್ಷದ 24,580 ಕೋಟಿ ರೂಪಾಯಿಗಳ ಗುರಿಯ 87.67% ಆಗಿತ್ತು.

ಕಳೆದ ಕೆಲವು ವರ್ಷಗಳಲ್ಲಿ ಇಲಾಖೆಯ ಆದಾಯದ ಗುರಿಗಳನ್ನು ಗಮನಿಸಿದರೆ, ಪ್ರತಿ ವರ್ಷ 1,000 ಕೋಟಿಯಿಂದ 1,500 ಕೋಟಿಗಳವರೆಗೆ ಕ್ರಮೇಣ ಹೆಚ್ಚಳವನ್ನು ತೋರಿಸುತ್ತದೆ. 2020-21ರ ವಾರ್ಷಿಕ ಹಣಕಾಸು ಗುರಿ 22,700 ಕೋಟಿ ರೂ, ಮತ್ತು 2021-22ಕ್ಕೆ 24,580 ಕೋಟಿ ರೂ, 2019-2020 ಕ್ಕೆ 20,950 ಕೋಟಿ ರೂ ಮತ್ತು 2018-19 ರ ಆರ್ಥಿಕ ವರ್ಷದಲ್ಲಿ 19,750 ಕೋಟಿ ರೂಪಾಯಿಗಳ ಆರ್ಥಿಕ ಗುರಿಯನ್ನು ಹೊಂದಿದ್ದವು.

LEAVE A REPLY

Please enter your comment!
Please enter your name here