Home Uncategorized ಎಷ್ಟೇ ಟ್ರೋಲ್ ಆದರೂ ಕಡಿಮೆ ಆಗಿಲ್ಲ ಶಾರುಖ್ ಖಾನ್ ಖ್ಯಾತಿ; ಸ್ಟಾರ್ ನಟನ ಅಪರೂಪದ ಸಾಧನೆ

ಎಷ್ಟೇ ಟ್ರೋಲ್ ಆದರೂ ಕಡಿಮೆ ಆಗಿಲ್ಲ ಶಾರುಖ್ ಖಾನ್ ಖ್ಯಾತಿ; ಸ್ಟಾರ್ ನಟನ ಅಪರೂಪದ ಸಾಧನೆ

1
0
bengaluru

ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಅವರು ಸಾಲು ಸಾಲು ಸೋಲು ಕಾಣುತ್ತಿದ್ದಾರೆ. 2018ರಲ್ಲಿ ತೆರೆಗೆ ಬಂದ ‘ಜೀರೋ’ ಸಿನಿಮಾ ಬಳಿಕ ಶಾರುಖ್ ಖಾನ್ ಅವರು ನಟನೆಯಿಂದ ಹಿಂದೆ ಸರಿದರು. ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಬೇಕು ಎನ್ನುವಾಗಲೇ ಮಗ ಆರ್ಯನ್ ಖಾನ್ ಡ್ರಗ್​ ಕೇಸ್ ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು. ಈಗ ‘ಪಠಾಣ್​’ ಚಿತ್ರದ (Pathan Movie) ‘ಬೇಷರಂ ರಂಗ್​..’ ಹಾಡಿನ ವಿವಾದದಿಂದ ಶಾರುಖ್ ಖಾನ್ ಟೀಕೆಗೆ ಒಳಗಾಗುತ್ತಿದ್ದಾರೆ. ಆದರೆ, ಅವರ ಜನಪ್ರಿಯತೆ ಕೊಂಚವೂ ತಗ್ಗಿಲ್ಲ. ಇದಕ್ಕೆ ಹೊಸ ಸಾಕ್ಷ್ಯ ಸಿಕ್ಕಿದೆ.

ಪ್ರತಿಷ್ಠಿತ ಎಂಪಾಯರ್ ಮ್ಯಾಗಜಿನ್, ಸಾರ್ವಕಾಲಿಕ 50 ಶ್ರೇಷ್ಠ ನಟರ ಪಟ್ಟಿ ಬಿಡುಗೆ ಮಾಡಿದೆ. ಈ ಪಟ್ಟಿಯಲ್ಲಿ ಶಾರುಖ್ ಖಾನ್ ಕೂಡ ಸ್ಥಾನ ಪಡೆದಿದ್ದಾರೆ. ಈ ಮ್ಯಾಗಜಿನ್​ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಹೀರೋ ಶಾರುಖ್ ಖಾನ್ ಅನ್ನೋದು ವಿಶೇಷ. ಶಾರುಖ್ ಖಾನ್ ಅವರ ಜನಪ್ರಿಯತೆಗೆ ಸಿಕ್ಕ ಸಾಕ್ಷಿಯಾಗಿದೆ. ಶಾರುಖ್ ಖಾನ್ ಮಾಡಿದ ಅಪರೂಪದ ಸಾಧನೆಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಪಟ್ಟಿಯಲ್ಲಿ ಹಾಲಿವುಡ್​ನ ಅನೇಕ ಹೀರೋಗಳ ಹೆಸರು ಇದೆ.

ಶಾರುಖ್ ಖಾನ್ ಮಾಡಿದ ಸಾಧನೆ ವಿಚಾರದ ಬಗ್ಗೆ ಅವರ ಮ್ಯಾನೇಜರ್ ಪೂಜಾ ದದ್ಲಾನಿ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ಅಭಿನಂದನೆ ತಿಳಿಸಿದ್ದಾರೆ. ‘ಯಾರು ಎಷ್ಟೇ ವಿವಾದ ಸೃಷ್ಟಿ ಮಾಡಬಹುದು. ಆದರೆ, ಶಾರುಖ್ ಖಾನ್ ಅವರ ಖ್ಯಾತಿ ಕಡಿಮೆ ಆಗುವುದಿಲ್ಲ’ ಎಂದಿದ್ದಾರೆ  ಫ್ಯಾನ್ಸ್.

ಶಾರುಖ್ ಖಾನ್ ನಟನೆಯ ‘ಪಠಾಣ್​’ ಚಿತ್ರ 2023ರ ಜನವರಿ 25ರಂದು ತೆರೆಗೆ ಬರುತ್ತಿದೆ. ಈ ಚಿತ್ರದ ‘ಬೇಷರಂ ರಂಗ್​..’ ಹಾಡಿನಲ್ಲಿ ದೀಪಿಕಾ ಪಡುಕೋಣೆ ಅವರು ಕೇಸರಿ ಬಣ್ಣದ ಬಿಕಿನಿ ಧರಿಸಿದ್ದು ವಿವಾದ ಆಗಿತ್ತು. ಅನೇಕರು ಈ ಬಗ್ಗೆ ಅಪಸ್ವರ ತೆಗೆದಿದ್ದರು. ಕೆಲ ಮುಸ್ಲಿಂ ಸಮುದಾಯದವರೂ ಈ ಚಿತ್ರದ ಟೈಟಲ್​ ಬಗ್ಗೆ ಟೀಕೆ ಮಾಡಿದ್ದರು. ಪಠಾಣರಿಗೆ ಅವಮಾನ ಮಾಡುವ ಕೆಲಸ ಆಗುತ್ತಿದೆ ಎಂದು ಕೆಲವರು ಹೇಳಿದ್ದರು. ಸಿನಿಮಾ ರಿಲೀಸ್​ಗೂ ಮೊದಲೇ ಬೈಕಾಟ್​ ಟ್ರೆಂಡ್ ಆರಂಭ ಆಗಿದೆ.

bengaluru

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

bengaluru

LEAVE A REPLY

Please enter your comment!
Please enter your name here