Home Uncategorized Kantara Movie: ‘ಕಾಂತಾರ’ ಎಫೆಕ್ಟ್​; ರಿಷಬ್​ ಶೆಟ್ಟಿ ಜತೆ ಸಿನಿಮಾ ಮಾಡುವ ಹಂಬಲ ವ್ಯಕ್ತಪಡಿಸಿದ ಅನಿಲ್​...

Kantara Movie: ‘ಕಾಂತಾರ’ ಎಫೆಕ್ಟ್​; ರಿಷಬ್​ ಶೆಟ್ಟಿ ಜತೆ ಸಿನಿಮಾ ಮಾಡುವ ಹಂಬಲ ವ್ಯಕ್ತಪಡಿಸಿದ ಅನಿಲ್​ ಕಪೂರ್​

9
0
Advertisement
bengaluru

ಇತ್ತೀಚೆಗೆ ಬರುತ್ತಿರುವ ಕನ್ನಡ ಸಿನಿಮಾಗಳಿಂದಾಗಿ ಚಂದನವನದ ಚಾರ್ಮ್​ ಹೆಚ್ಚಿದೆ. ಇಲ್ಲಿನ ನಿರ್ದೇಶಕರು ಮತ್ತು ನಟರ ಬಗ್ಗೆ ದೇಶಾದ್ಯಂತ ಚರ್ಚೆ ಆಗುತ್ತಿದೆ. ‘ಕಾಂತಾರ’ (Kantara Movie) ಚಿತ್ರವೇ ಇದಕ್ಕೆ ಬೆಸ್ಟ್​ ಉದಾಹರಣೆ. ಅದೇ ರೀತಿ ‘ಕೆಜಿಎಫ್​: ಚಾಪ್ಟರ್​ 2’, ‘777 ಚಾರ್ಲಿ’ ಮುಂತಾದ ಸಿನಿಮಾಗಳು ಕೂಡ ಸಖತ್​​ ಸದ್ದು ಮಾಡಿವೆ. ಈ ವರ್ಷ ರಿಷಬ್​ ಶೆಟ್ಟಿ (Rishab Shetty) ಅವರು ‘ಕಾಂತಾರ’ ಚಿತ್ರದಿಂದ ಪ್ಯಾನ್​ ಇಂಡಿಯಾ ಸ್ಟಾರ್​ ಆಗಿದ್ದಾರೆ. ಉತ್ತರ ಭಾರತದಲ್ಲಿ ಅವರಿಗೆ ದೊಡ್ಡ ಮಟ್ಟದ ಫ್ಯಾನ್​ ಫಾಲೋಯಿಂಗ್​ ಸೃಷ್ಟಿ ಆಗಿದೆ. ಅಲ್ಲಿನ ಅನೇಕ ಮಾಧ್ಯಮಗಳಿಗೆ ಅವರು ಸಂದರ್ಶನ ನೀಡಿದ್ದಾರೆ. ರಿಷಬ್​ ಶೆಟ್ಟಿ ಜೊತೆ ಕೆಲಸ ಮಾಡಲು ಬಾಲಿವುಡ್​ ಸ್ಟಾರ್​ ಕಲಾವಿದರು ಇಷ್ಟಪಡುತ್ತಿದ್ದಾರೆ. ನಟ ಅನಿಲ್​ ಕಪೂರ್​ (Anil Kapoor) ಕೂಡ ಈ ಬಗ್ಗೆ ಮಾತನಾಡಿದ್ದಾರೆ.

‘ಪಿಂಕ್​ ವಿಲ್ಲಾ’ ನಡೆಸಿದ ಸಂದರ್ಶನದಲ್ಲಿ ಅನಿಲ್​ ಕಪೂರ್​, ಮೃಣಾಲ್​ ಠಾಕೂರ್​, ಅಡಿವಿ ಶೇಷ್​, ವಿದ್ಯಾ ಬಾಲನ್​, ರಿಷಬ್​ ಶೆಟ್ಟಿ ಭಾಗವಹಿಸಿದ್ದಾರೆ. ಈ ವೇಳೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ಆಗಿದೆ. ‘ಕಾಂತಾರ’ ಸಿನಿಮಾವನ್ನು ಎಲ್ಲರೂ ಹಾಡಿ ಹೊಗಳಿದ್ದಾರೆ. ಅನಿಲ್​ ಕಪೂರ್​ ಅವರು ಮುಂದಿನ ಸಿನಿಮಾದಲ್ಲಿ ರಿಷಬ್​ ಶೆಟ್ಟಿ ಜೊತೆ ಕೆಲಸ ಮಾಡುವ ಹಂಬಲ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: IMDb Top 10 Indian Movies: ಐಎಂಡಿಬಿ ಟಾಪ್​ 10 ಚಿತ್ರಗಳಲ್ಲಿ ಕಾಂತಾರ, ಕೆಜಿಎಫ್​ 2, 777 ಚಾರ್ಲಿ

ಅಂದಹಾಗೆ, ಅನಿಲ್​ ಕಪೂರ್​ ಅವರು ಮೊದಲ ನಟಿಸಿದ್ದೇ ಕನ್ನಡದಲ್ಲಿ. ಮಣಿರತ್ನಂ ನಿರ್ದೇಶನ ‘ಪಲ್ಲವಿ ಅನುಪಲ್ಲವಿ’ ಚಿತ್ರವೇ ಅನಿಲ್​ ಕಪೂರ್​ ಅವರ ಚೊಚ್ಚಲ ಸಿನಿಮಾ. ನಂತರ ಅವರು ಹಿಂದಿಯಲ್ಲಿ ಸ್ಟಾರ್​ ನಟನಾಗಿ ಗುರುತಿಸಿಕೊಂಡರು. ಈಗ ಮತ್ತೆ ಅವರು ಕನ್ನಡ ಸಿನಿಮಾದಲ್ಲಿ ನಟಿಸುವ ಆಸೆ ವ್ಯಕ್ತಪಡಿಸಿದ್ದಾರೆ.

bengaluru bengaluru

ಇದನ್ನೂ ಓದಿ: Lionel Messi: ‘ಕಾಂತಾರ’ ರೀತಿ ಕಾಣಿಸಿದ ಮೆಸ್ಸಿ-ಮರಡೋನಾ; ವಿಶ್ವ ಮಟ್ಟದಲ್ಲಿ ಕನ್ನಡ ಸಿನಿಮಾ ಕ್ರೇಜ್​

‘ಕಾಂತಾರ’ ಚಿತ್ರದ ಬಗ್ಗೆ ಈಗಾಗಲೇ ಅನೇಕ ಸ್ಟಾರ್​ ಕಲಾವಿದರು ಮಾತನಾಡಿದ್ದಾರೆ. ರಜನಿಕಾಂತ್​, ಪ್ರಭಾಸ್​, ಕಂಗನಾ ರಣಾವತ್​, ವಿವೇಕ್​ ಅಗ್ನಿಹೋತ್ರಿ, ಅನುಷ್ಕಾ ಶೆಟ್ಟಿ, ಅಲ್ಲು ಅರ್ಜುನ್​, ಹೃತಿಕ್​ ರೋಷನ್​ ಸೇರಿದಂತೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಹಿಂದಿ ಚಿತ್ರರಂಗದ ಹಲವರು ಈ ಸಿನಿಮಾದ ಕುರಿತು ಚರ್ಚೆ ಮಾಡಿದ್ದಾರೆ. ಒಟ್ಟಿನಲ್ಲಿ ಕನ್ನಡ ಚಿತ್ರರಂಗದ ಕಡೆಗೆ ಎಲ್ಲರೂ ತಿರುಗಿ ನೋಡುವಂತಾಗಿದೆ.

ಇದನ್ನೂ ಓದಿ: Kantara Movie: ‘ಕಾಂತಾರ’​ ಚಿತ್ರದ ಗೆಲುವಿಗೆ ಅಭಿನಂದನೆ ಸಲ್ಲಿಸಿದ ಟಾಲಿವುಡ್​ ಸ್ಟಾರ್​ ನಟ ಅಲ್ಲು ಅರ್ಜುನ್​

ಗೂಗಲ್​ನಲ್ಲಿ ಈ ವರ್ಷ ಜನರು ಅತಿ ಹೆಚ್ಚು ಹುಡುಕಿದ ಭಾರತೀಯ ಸಿನಿಮಾಗಳ ಪಟ್ಟಿ ಇತ್ತೀಚೆಗೆ ಪ್ರಕಟವಾಯಿತು. ಟಾಪ್​ 5 ಸಿನಿಮಾಗಳಲ್ಲಿ ಕನ್ನಡದ ಎರಡು ಚಿತ್ರಗಳು (ಕಾಂತಾರ ಮತ್ತು ಕೆಜಿಎಫ್​ 2) ಇವೆ ಎಂಬುದು ವಿಶೇಷ. ಕನ್ನಡ ಚಿತ್ರರಂಗದಿಂದ ತಯಾರಾಗುವ ಮುಂಬರುವ ಸಿನಿಮಾಗಳ ಬಗ್ಗೆ ಎಲ್ಲರಿಗೂ ನಿರೀಕ್ಷೆ ಹೆಚ್ಚಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.


bengaluru

LEAVE A REPLY

Please enter your comment!
Please enter your name here