Home Uncategorized ಕರ್ನಾಟಕದ ಹೆಮ್ಮೆಯ ನಂದಿನಿ ಉತ್ಪನ್ನಗಳಿಗೆ ಶಿವಣ್ಣ ನೂತನ ರಾಯಬಾರಿ!

ಕರ್ನಾಟಕದ ಹೆಮ್ಮೆಯ ನಂದಿನಿ ಉತ್ಪನ್ನಗಳಿಗೆ ಶಿವಣ್ಣ ನೂತನ ರಾಯಬಾರಿ!

8
0
Advertisement
bengaluru

ಕರ್ನಾಟಕದ ಹೆಮ್ಮೆ ನಂದಿನಿ ಬ್ರ್ಯಾಂಡ್ ಉತ್ಪನ್ನಗಳಿಗೆ ನೂತನ ರಾಯಭಾರಿಯಾಗಿ ಡಾ. ಶಿವರಾಜ್ ಕುಮಾರ್ ನೇಮಕವಾಗಿದ್ದಾರೆ. ಸುಮಾರು ವರ್ಷಗಳ ಕಾಲ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರಾಯಭಾರಿಯಾಗುವ ಮೂಲಕ ನಂದಿನಿ ಉತ್ಪನ್ನಗಳಿಗೆ ಪ್ರಚಾರ ಮಾಡಿದ್ದರು. ಬೆಂಗಳೂರು: ಕರ್ನಾಟಕದ ಹೆಮ್ಮೆ ನಂದಿನಿ ಬ್ರ್ಯಾಂಡ್ ಉತ್ಪನ್ನಗಳಿಗೆ ನೂತನ ರಾಯಭಾರಿಯಾಗಿ ಡಾ. ಶಿವರಾಜ್ ಕುಮಾರ್ ನೇಮಕವಾಗಿದ್ದಾರೆ. ಸುಮಾರು ವರ್ಷಗಳ ಕಾಲ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರಾಯಭಾರಿಯಾಗುವ ಮೂಲಕ ನಂದಿನಿ ಉತ್ಪನ್ನಗಳಿಗೆ ಪ್ರಚಾರ ಮಾಡಿದ್ದರು. ಆದರೆ, ಅವರ ಆಗಲಿಕೆ ಬಳಿಕ ಮುಂದಿನ ರಾಯಬಾರಿ ಯಾರು?ಎಂಬ ಪ್ರಶ್ನೆ ಎದ್ದಿತ್ತು.

ಇದೀಗ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಜಗದೀಶ್ ಅವರಿಂದು ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿ ರಾಯಭಾರಿಯಾಗುವಂತೆ ಕೋರಿದ್ದು, ಅದಕ್ಕೆ ಶಿವಣ್ಣ ಅನುಮತಿ ನೀಡಿದ್ದಾರೆ ಎಂದು ವರದಿಯಾಗಿದೆ.

ಕೆಎಂಎಫ್ ನ ನಂದಿನಿ ಹಾಲು ಹಾಗೂ ಅದರ ಉತ್ಪನ್ನಗಳನ್ನು ಪ್ರಚಾರ ಮಾಡುವುದಕ್ಕೆ ಶಿವಣ್ಣ ಒಪ್ಪಿರುವುದಕ್ಕೆ ಅವರಿಗೆ ಹಾಲು ಒಕ್ಕೂಟ ಅಭಿನಂದನೆ ಸಲ್ಲಿಸಿದೆ. ಈ ಹಿಂದೆ ಪುನೀತ್ ರಾಜ್ ಕುಮಾರ್ ಅಷ್ಟೇ ಅಲ್ಲದೇ, ಡಾ. ರಾಜ್ ಕುಮಾರ್ ಕೂಡಾ ನಂದಿನಿ ಹಾಲಿಗೆ ರಾಯಬಾರಿಯಾಗಿ ಪ್ರಚಾರ ಮಾಡಿದ್ದರು.


bengaluru

LEAVE A REPLY

Please enter your comment!
Please enter your name here