Home Uncategorized ಕರ್ಮಯೋಗಿ, ಆದರ್ಶ ಗುಣಗಳನ್ನು ಮಗನಲ್ಲಿ ತುಂಬಿದ ತಾಯಿ ಹೀರಾಬೆನ್: ಸಿಎಂ ಬೊಮ್ಮಾಯಿ

ಕರ್ಮಯೋಗಿ, ಆದರ್ಶ ಗುಣಗಳನ್ನು ಮಗನಲ್ಲಿ ತುಂಬಿದ ತಾಯಿ ಹೀರಾಬೆನ್: ಸಿಎಂ ಬೊಮ್ಮಾಯಿ

14
0

ಗುಜರಾತ್ ನ ಅಹಮದಾಬಾದ್ ನಲ್ಲಿ ವಯೋಸಹಜ ಅನಾರೋಗ್ಯದಿಂದ ಶತಾಯುಷಿಯಾಗಿ ಬದುಕಿ ಇಂದು ಇಹಲೋಕ ತ್ಯಜಿಸಿದ ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ. ಬೆಂಗಳೂರು: ಗುಜರಾತ್ ನ ಅಹಮದಾಬಾದ್ ನಲ್ಲಿ ವಯೋಸಹಜ ಅನಾರೋಗ್ಯದಿಂದ ಶತಾಯುಷಿಯಾಗಿ ಬದುಕಿ ಇಂದು ಇಹಲೋಕ ತ್ಯಜಿಸಿದ ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.

ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಮತ್ತು ಹೀರಾಬೆನ್ ಅವರ ತಾಯಿ-ಮಗನ ಸಂಬಂಧ ವಿಶಿಷ್ಟವಾಗಿತ್ತು. ಅದನ್ನು ಹಲವು ಬಾರಿ ಅವರು ತೋರಿಸಿಕೊಂಡಿದ್ದರು. ಒಬ್ಬ ತಾಯಿಯಾಗಿ ಮಗನಲ್ಲಿ ತುಂಬಬೇಕಾದ ದೇಶಭಕ್ತಿ, ಆದರ್ಶ ಗುಣಗಳು, ಕರ್ಮಯೋಗ ಗುಣಗಳನ್ನು ಪ್ರಧಾನಿ ಮೋದಿಯವರಲ್ಲಿ ತುಂಬಿ ಇಂದು ಬಿಟ್ಟುಹೋಗಿದ್ದಾರೆ. ಅತ್ಯಂತ ಪ್ರೀತಿ, ವಾತ್ಸಲ್ಯಗಳನ್ನು ತುಂಬಿದ್ದರು. ಮೋದಿಯವರು ತಾಯಿಯನ್ನು ಭೇಟಿಯಾಗಲು ಹೋದ ಸಂದರ್ಭಗಳಲ್ಲೆಲ್ಲಾ ಕೈತುತ್ತು ತಿನ್ನಿಸುವುದು, ಊಟ ಮಾಡಿಸುವುದು, ಹಣವನ್ನು ಕೂಡ ಕೊಟ್ಟಿದ್ದರು. 

ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಪೂಜ್ಯ ತಾಯಿ ಹೀರಾಬೆನ್ ಅವರು ಇಹಲೋಕ ತ್ಯಜಿಸಿದ ಸುದ್ದಿ ತಿಳಿದು ಅತ್ಯಂತ ಬೇಸರವಾಯಿತು. ದೇಶಕ್ಕೆ ಹೆಮ್ಮೆ ತಂದ ಪುತ್ರನಿಗೆ ಜನ್ಮ ನೀಡಿದ ಮಹಾತಾಯಿಗೆ ಸದ್ಗತಿ ಕೋರುತ್ತೇನೆ. ಪ್ರಧಾನಿಯವರಿಗೆ, ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಓಂ ಶಾಂತಿಃ https://t.co/7dLUarH8Qz
— Basavaraj S Bommai (@BSBommai) December 30, 2022

ಅದೇ ರೀತಿ ಮಗನಾಗಿ ಮುಖ್ಯಮಂತ್ರಿಯಾಗಿದ್ದಾಗ, ಪ್ರಧಾನಿಯಾಗಿದ್ದಾಗ ಮೋದಿಯವರು ತಮ್ಮ ತಾಯಿಯನ್ನು ಅತ್ಯಂತ ಗೌರವ, ಪ್ರೀತಿಯಿಂದ ಕಾಣುತ್ತಿದ್ದರು. ತಾಯಿ-ಮಗ ಎಂದಿಗೂ ತಮ್ಮ ಕರ್ತವ್ಯವನ್ನು ಮರೆತಿರಲಿಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

शानदार शताब्दी का ईश्वर चरणों में विराम… मां में मैंने हमेशा उस त्रिमूर्ति की अनुभूति की है, जिसमें एक तपस्वी की यात्रा, निष्काम कर्मयोगी का प्रतीक और मूल्यों के प्रति प्रतिबद्ध जीवन समाहित रहा है। pic.twitter.com/yE5xwRogJi
— Narendra Modi (@narendramodi) December 30, 2022

ಮಗ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ, ದೇಶದ ಪ್ರಧಾನಿಯಾದ ಮೇಲೂ ಹೀರಾಬೆನ್ ಅವರು ಮಗನನ್ನು ಮಗನಾಗಿಯೇ ನೋಡುತ್ತಿದ್ದರೇ ಹೊರತು ದೇಶದ ಪ್ರಧಾನಿಯೆಂಬ ಹಮ್ಮುಬಿಮ್ಮು ಅವರಿಗೆ ಮತ್ತು ಕುಟುಂಬ ಸದಸ್ಯರಿಗೆ ಬಂದಿರಲಿಲ್ಲ. ಮಗನ ಅಧಿಕಾರ-ಹುದ್ದೆಯನ್ನು ಎಂದಿಗೂ ದುರ್ಬಳಕೆ ಮಾಡಿಕೊಳ್ಳದ ಸರಳ ವ್ಯಕ್ತಿ ಮತ್ತು ವ್ಯಕ್ತಿತ್ವ ಹೀರಾಬೆನ್ ಅವರದಾಗಿತ್ತು ಎಂದಿದ್ದಾರೆ.

LEAVE A REPLY

Please enter your comment!
Please enter your name here