Home ಅಪರಾಧ ಕಾಂಗ್ರೆಸ್‍, ಅದರ ಮಿತ್ರ ಪಕ್ಷಗಳಿಂದ ಪ್ರಜಾಪ್ರಭುತ್ವದ ಅಣಕ- ಅರ್ನಾಬ್ ಬಂಧನ ಕುರಿತು ಅಮಿತ್ ಶಾ ಪ್ರತಿಕ್ರಿಯೆ

ಕಾಂಗ್ರೆಸ್‍, ಅದರ ಮಿತ್ರ ಪಕ್ಷಗಳಿಂದ ಪ್ರಜಾಪ್ರಭುತ್ವದ ಅಣಕ- ಅರ್ನಾಬ್ ಬಂಧನ ಕುರಿತು ಅಮಿತ್ ಶಾ ಪ್ರತಿಕ್ರಿಯೆ

35
0
Amit Shah

ನವದೆಹಲಿ:

ರಿಪಬ್ಲಿಕ್ ಟೆವಿ ಸಂಪಾದಕ ಅರ್ನಾಬ್ ಗೋಸ್ವಾಮಿ ರ ಬಂಧನ ಕುರಿತಂತೆ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಹಾರಾಷ್ಟ್ರ ಪೊಲೀಸರು ಪತ್ರಕರ್ತ ಗೋಸ್ವಾಮಿ ವಿರುದ್ಧ ನಡೆದುಕೊಂಡಿರುವ ರೀತಿ ಖಂಡನೀಯ ಎಂದು ಹೇಳಿದ್ದಾರೆ.

‘ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಮತ್ತೊಮ್ಮೆ ಪ್ರಜಾಪ್ರಭುತ್ವವನ್ನು ಅಣಕ ಮಾಡಿವೆ.’ ಎಂದು ಅಮಿತ್ ಶಾ ಟ್ವಿಟರ್ ನಲ್ಲಿ ಹೇಳಿದ್ದಾರೆ.

ರಿಪಬ್ಲಿಕ್ ಟಿವಿ ಮತ್ತು ಅರ್ನಾಬ್ ಗೋಸ್ವಾಮಿ ವಿರುದ್ಧ ರಾಜ್ಯ ಸರ್ಕಾರ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿರುವುದು ವೈಯಕ್ತಿಕ ಸ್ವಾತಂತ್ರ್ಯದ ಮೇಲೆ ಮತ್ತು ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭವಾದ ಪತ್ರಿಕೋದ್ಯಮದ ಮೇಲಿನ ಆಕ್ರಮಣವಾಗಿದೆ. ಈ ಘಟನೆ ತುರ್ತು ಪರಿಸ್ಥಿತಿಯನ್ನು ನೆನಪಿಸುತ್ತದೆ. ಮುಕ್ತ ಪತ್ರಿಕೋದ್ಯಮದ ಮೇಲಿನ ಈ ಆಕ್ರಮಣ ಖಂಡನೀಯ ಎಂದು ಅಮಿತ್ ಶಾ ಹೇಳಿದ್ದಾರೆ.

ಗೋಸ್ವಾಮಿಯವರನ್ನು ಮುಂಬೈ ಪೊಲೀಸರು ಬುಧವಾರ ಬೆಳಿಗ್ಗೆ ವಶಕ್ಕೆ ಪಡೆದಿದ್ದಾರೆ. ಆತ್ಮಹತ್ಯೆ ಪ್ರಕರಣವೊಂದರ ಹಿಂದಿನ ವರದಿಗೆ ಸಂಬಂಧಿಸಿದಂತೆ ಅರ್ನಾಬ್ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆಗಾಗಿ ಅವರನ್ನು ರಾಯಗಡಕ್ಕೆ ಕರೆದೊಯ್ಯುವ ಸಾಧ್ಯತೆಯಿದೆ.

ಇದಕ್ಕೂ ಮುನ್ನ ಬುಧವಾರ ಹತ್ತಕ್ಕೂ ಹೆಚ್ಚು ಮುಂಬೈ ಪೊಲೀಸರ ತಂಡ ಅರ್ನಾಬ್ ಅವರ ನಿವಾಸಕ್ಕೆ ಆಗಮಿಸಿತ್ತು.

LEAVE A REPLY

Please enter your comment!
Please enter your name here